ಗ್ರಾಮ ವಾಸ್ತವ್ಯ ಚುನಾವಣೆ ಗಿಮಿಕ್ಕಲ್ಲ
Team Udayavani, Aug 18, 2017, 2:04 PM IST
ಕೂಡ್ಲಿಗಿ: ಗ್ರಾಮ ವಾಸ್ತವ್ಯ ನನ್ನ ಕನಸು. ನನ್ನ ಕ್ಷೇತ್ರದ ಜನರ ಸಮಸ್ಯೆ ತಳಮಟ್ಟದಲ್ಲಿ ಬಗೆಹರಿಸುವುದು, ಅವರ ಸಮಸ್ಯೆಗೆ ಧ್ವನಿಯಾಗಲು “ನಮ್ಮ ನಡೆ-ಹಳ್ಳಿ ಕಡೆಗೆ’ಎಂಬ ವಿನೂತನ ಕಾರ್ಯಕ್ರಮ ಮಾಡಿದ್ದೇವೆ ಹೊರತು, ಇದು ಚುನಾವಣೆ ರಣತಂತ್ರವಲ್ಲ ಎಂದು ಶಾಸಕ ಬಿ.ನಾಗೇಂದ್ರ ಸ್ಪಷ್ಟಪಡಿಸಿದರು.
ತಾಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ “ನಮ್ಮ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಯಾವುದೇ ಪಕ್ಷ ಮುಖ್ಯವಲ್ಲ. ಅವರ ಸಮಸ್ಯೆಗಳಿಗೆ ಪರಿಹಾರ ಮುಖ್ಯ. ಯಾವುದೇ ಪಕ್ಷದವರಾಗಿದ್ದರೂ ನನಗೆ ಎಲ್ಲರೂ ಒಂದೇ. ನಿಮ್ಮ ಸೇವೆ ಮಾಡುವುದಷ್ಟೇ ನನ್ನ ಗುರಿ. ಇದು ನನ್ನ ರಾಜಕೀಯ ಸಿದ್ಧಾಂತ ಎಂದರು.
ಗ್ರಾಮ ವಾಸ್ತವ್ಯ ಎಂದು ಊರಲ್ಲಿ ಬಂದು ಊಟ ಮಾಡಿ ಮಲಗುವುದಲ್ಲ. ಇಡೀ ತಾಲೂಕು ಆಡಳಿತವೇ ಹಳ್ಳಿಯ ಕಡೆಗೆ ಬಂದಿದ್ದು, ತಾಲೂಕಿನ ಎಲ್ಲ 32 ಇಲಾಖೆಗಳ ಅಧಿಕಾರಿಗಳು ನಿಮ್ಮ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡಲಿದ್ದಾರೆ. ನಿಮಗೆ ಅನ್ಯಾಯವಾಗಿದ್ದರೆ ತಾವು ನ್ಯಾಯ ನೀಡಲು ಸಿದ್ಧ. ಆದರೆ ತಾಳ್ಮೆಯಿಂದ ಬಂದು ಸಮಸ್ಯೆ ಹೇಳಿ, ಕೂಡಲೇ ಆಗದಿದ್ದರೆ ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಇಂದಿನಿಂದ ಡಿಸೆಂಬರ್ ತಿಂಗಳವರೆಗೆ “ನಮ್ಮ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ತಾಲೂಕಿನ 60 ಕಡೆ ಆಯೋಜಿಸಲಾಗುತ್ತಿದ್ದು, ಆಯಾ ಗ್ರಾಪಂ ವ್ಯಾಪ್ತಿಯ ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಪ್ರತಿ ಸೋಮವಾರ, ಮಂಗಳವಾರ ಬದಲು, ವಾರದಲ್ಲಿ 2 ದಿನ ಮಂಗಳವಾರ ಹಾಗೂ ಶುಕ್ರವಾರ ಕ್ಷೇತ್ರದಾದ್ಯಾಂತ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಇಡೀ ತಾಲೂಕು ಆಡಳಿತವನ್ನು ಹಳ್ಳಿಗಳ ಕಡೆ ಕೊಂಡೊಯ್ದು ಜನರ ಸಮಸ್ಯೆಗಳಿಗೆ ಪರಿಹರಿಸುವ ಕಾರ್ಯ ಮಾಡಲಿದ್ದೇನೆ ಎಂದರು.
ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಮಾತನಾಡಿ, ಹಳ್ಳಿಗಳ ಅಭಿವೃದ್ಧಿ ಆಗಬೇಕಾದರೆ ಅಲ್ಲಿನ ಯುವಕರು, ಗ್ರಾಮಸ್ಥರು ಸಹಕಾರ ನೀಡಬೇಕು. ತಾವು ಕೂಡ ಗ್ರಾಮ ವಾಸ್ತವ್ಯದ ಮೂಲಕ ಹಳ್ಳಿಗಳ ತಳಮಟ್ಟದ ಸಮಸ್ಯೆಗಳನ್ನು ತಿಳಿಯಲು ಪ್ರಯತ್ನಿಸಿದ್ದು, ಜನರ ಸಹಕಾರ ನೀಡಿದರೆ ಸರ್ಕಾರದ ಯೋಜನೆಗಳು ಸಾಕಾರಗೊಳ್ಳುತ್ತವೆ. ಕಾರಣ ಹೇಳುವುದನ್ನು ಬಿಟ್ಟು ಅಭಿವೃದ್ಧಿಯಲ್ಲಿ ನಮ್ಮದು ಜವಾಬ್ದಾರಿ ಇದೆ ಎನ್ನುವುದನ್ನು ತಿಳಿಯಬೇಕೆಂದರು. ಈ ಸಂದರ್ಭದಲ್ಲಿ ವೃದ್ಧಾಪ್ಯ, ಅಂಗವಿಕಲರ ವೇತನ, ಅಂಗವಿಕಲರಿಗೆ ತ್ತೈಸಿಕಲ್ ಮುಂತಾದ ಸಮಸ್ಯೆಗಳಿಗೆ ಶಾಸಕರು ಮತ್ತು ಅಧಿಕಾರಿಗಳು
ಸ್ಥಳದಲ್ಲೇ ಪರಿಹಾರ ಸಿಕ್ಕರೆ, ಶೌಚಾಲಯ, ಮನೆ ಮುಂತಾದ ಸಮಸ್ಯೆಗಳಿಗೆ ಬಗೆಹರಿಸುವ ಭರವಸೆ ನೀಡಿದರು. ಜಿಪಂ ಅಧ್ಯಕ್ಷೆ ದೀನಾ ಮಂಜುನಾಥ್, ತಾಪಂ ಅಧ್ಯಕ್ಷ ಕೆ.ವೆಂಕಟೇಶ್, ಜಿಪಂ ಸದಸ್ಯ ಎಂ.ಎಂ.ಜೆ.ಹರ್ಷವರ್ದನ್, ತಾಪಂ ಇಒ ಮಂಜುನಾಥ್, ಹಶೀಲ್ದಾರ್.ಎಲ್.ಕೃಷ್ಣಮೂರ್ತಿ, ತಾಪಂ ಸದಸ್ಯೆ ಸುಧಾ ಪ್ರಾಣೇಶ್, ಜಿ.ಪಾಪನಾಯಕ, ಕೆ.ಎಚ್.ವೀರನಗೌಡ್ರು, ಜಿ.ಉಮೇಶ್, ಕೆ.ಎನ್ .ಭೀಮಪ್ಪ, ಗುಡೇಕೋಟೆ ರಾಜಣ್ಣ, ಬಯಲು ತುಂಬರಗುದ್ದಿ ದುರುಗೇಶ್, ಜಿ.ಮಲ್ಲಿಕಾರ್ಜುನ, ಮಹೇಶ್, ಭಂಗಿ ವಿಜಯಕುಮಾರ್, ಜಗದೀಶ್, ಗೋವರ್ದನರೆಡ್ಡಿ ಇದ್ದರು.
ಹಳ್ಳಿಗಳಲ್ಲಿ ತಂಬಿಗೆ ಹಿಡಿದುಕೊಂಡು ಮಹಿಳೆಯರು ಬಹಿರ್ದೆಸೆಗೆ ರಸ್ತೆಯ ಕಡೆಗೆ ಹೋಗುತ್ತಿದ್ದಾರೆಂದರೆ ಅವರು ಬೇರೆ ಯಾರು ಅಲ್ಲ, ನನ್ನ ಮನೆಯ ತಾಯಿ, ತಂಗಿ ಎಂದು ತಿಳಿದುಕೊಂಡು ಸರ್ಕಾರ ನೀಡುವ ಅನುದಾನ ಬಳಸಿಕೊಂಡು ಶೌಚಾಲಯ ಕಟ್ಟಿಸಿಕೊಳ್ಳುವ ಮೂಲಕ ಮಹಿಳೆಯರ ಗೌರವ ಕಾಪಾಡಿ.
ಡಾ|ಕೆ.ವಿ.ರಾಜೇಂದ್ರ, ಜಿಪಂ ಸಿಇಒ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.