ಗ್ರಾಪಂ ಚುನಾವಣೆ: 3031 ನಾಮಪತ್ರ ಸಲ್ಲಿಕೆ
Team Udayavani, Dec 13, 2020, 4:44 PM IST
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಡಿ.11 ಕೊನೆ ದಿನವಾಗಿದ್ದು,ಐದು ತಾಲೂಕುಗಳಲ್ಲಿ ಒಟ್ಟು 3031 ನಾಮಪತ್ರಗಳು ಸಲ್ಲಿಕೆಯಾಗಿವೆ. ಜಿಲ್ಲೆಯ ಸಿರುಗುಪ್ಪ ಮತ್ತು ಕುರುಗೋಡು ತಾಲೂಕುಗಳಲ್ಲಿ ತಲಾ ಒಂದು ಗ್ರಾಪಂ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.
ಜಿಲ್ಲೆಯ ಬಳ್ಳಾರಿ ತಾಲೂಕು, ಹೊಸಪೇಟೆ, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿತಾಲೂಕುಗಳಲ್ಲಿನ ಒಟ್ಟು 87 ಗ್ರಾಮ ಪಂಚಾಯತ್‌ನ 1738 ಚುನಾವಣೆ ನಡೆಯಲಿದೆ. ಕಳೆದ ಡಿ.7ರಂದು ಅಧಿಸೂಚನೆ ಪ್ರಕಟವಾಗಿ ನಾಮಪತ್ರ ಸಲ್ಲಿಕೆಗೆ ಚಾಲನೆ ನೀಡಲಾಗಿದ್ದು, ಡಿ.11 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಒಟ್ಟಾರೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ ಅನುಸೂಚಿತ ಜಾತಿಯ ಪುರುಷ 339, ಮಹಿಳೆಯರು 408, ಪರಿಶಿಷ್ಟ ಪಂಗಡದ ಪುರುಷ 253, ಮಹಿಳೆಯರು 342, ಹಿಂದುಳಿದ ಅ ವರ್ಗದ ಪುರುಷ 61, ಮಹಿಳೆಯರು 105, ಹಿಂದುಳಿದ ಬಿ ವರ್ಗದಪುರುಷ 30, ಮಹಿಳೆಯರು 6, ಸಾಮಾನ್ಯ ವರ್ಗದ ಪುರುಷ 868, 629 ಮಹಿಳೆಯರು ಸೇರಿದ್ದಾರೆ. ಒಟ್ಟು 1490 ಮಹಿಳೆಯರು, 1541 ಪುರುಷರು ಸೇರಿ 3031 ನಾಮಪತ್ರ ಸಲ್ಲಿಕೆಯಾಗಿವೆ.
ಮೊದಲ ಹಂತದ ಚುನಾವಣೆಯಲ್ಲಿ ಬಳ್ಳಾರಿ ತಾಲ್ಲೂಕಿನ 25 ಗ್ರಾಮ ಪಂಚಾಯತ್‌ನ 522 ಸ್ಥಾನಗಳಿಗೆ, ಕುರುಗೋಡು ತಾಲೂಕಿನ 12ಗ್ರಾಪಂಗಳ 241, ಸಿರಗುಪ್ಪ ತಾಲೂಕಿನ 27ಗ್ರಾಪಂಗಳ 489 ಸ್ಥಾನ, ಹೊಸಪೇಟೆ ತಾಲೂಕಿನ 13 ಗ್ರಾಪಂಗಳ 274 ಸ್ಥಾನ, ಕಂಪ್ಲಿ ತಾಲ್ಲೂಕಿನ 10ಗ್ರಾಪಂನ 212 ಸದಸ್ಯತ್ವ ಸ್ಥಾನಗಳಿಗೆ ಚುನಾವಣೆನಡೆಯಬೇಕಿದೆ. ಡಿ. 17ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದೆ. ಡಿ. 22ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.
ಇದೀಗ ಚುನಾವಣೆಯ ಮೊದಲ ಹೆಜ್ಜೆ ಮುಗಿದಂತೆ ಆಗಿದೆ. ಸಲ್ಲಿಕೆಯಾಗಿರುವನಾಮಪತ್ರಗಳ ಪರಿಶೀಲನೆ ಕಾರ್ಯ ಅದಾಗಲೇ ನಡೆದಿದೆ. ಈಗಾಗಲೇ ನಾಮಪತ್ರ ಸಲ್ಲಿಸಿದವರುಪೈಕಿ ಕೆಲವರು ಕಣದಿಂದ ಹಿಂದೆ ಸರಿಯಲಿದ್ದಾರೆ.ಸ್ಪರ್ಧಾಕಾಂಕ್ಷಿಗಳು ಯಾರನ್ನು ಹಿಂದೆ ಸರಿಸಬೇಕು,ಯಾರು ಕಣದಲ್ಲಿ ಇರಬೇಕೆಂಬುದರ ನಿರ್ಧಾರಕ್ಕೆಕಾಲಾವಕಾಶ ಇದೆ. ಈ ವೇಳೆ ಗೆಲ್ಲಲೇಬೇಕೆಂಬ ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿರುವ ಹತ್ತಿರದ ಸ್ಪ ರ್ಧಿಯ ಮನವೊಲಿಸುವ ಕಾರ್ಯ ಮಾಡಲಿದ್ದಾರೆ. ಒಂದು ವೇಳೆ ಯಶ ಕಂಡರೆ ಕೆಲ ಸ್ಪರ್ಧಾಕಾಂಕ್ಷಿಗಳು ತಮ್ಮ ಉಮೇದುವಾರಿಕೆ ಹಿಂಪಡೆಯಲಿದ್ದಾರೆ. ಅದಾದ ನಂತರ ನಿಜವಾದ ಅಖಾಡ ಸಿದ್ಧಗೊಳ್ಳಲಿದೆ.
ಚುನಾವಣೆ ಬಹಿಷ್ಕಾರ: ಕುರುಗೋಡು ತಾಲೂಕಿನ ಬಸವಪುರ ಗ್ರಾಮವನ್ನು ಕುರುಗೋಡು ಪಟ್ಟಣ ಪಂಚಾಯತ್‌ಗೆ ಸೇರಿಸಬೇಕೆಂದು ಆಗ್ರಹಿಸಿ ಈಬಾರಿಯ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇದೇ ಕಾರಣಕ್ಕೆ ಈ ಗ್ರಾಮದ ಒಂದು ಗ್ರಾಪಂ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ.ಇದೇ ರೀತಿ ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಆಗಿಮೇಲ್ದರ್ಜೆಗೆ ಏರಿಸಲು ಆಗ್ರಹಿಸಿ ಈ ಬಾರಿಯಚುನಾವಣೆ ಬಹಿಷ್ಕರಿಸಿದ್ದಾರೆ. ಹೀಗಾಗಿ ಸಿರಿಗೇರಿಯ 33 ಸ್ಥಾನ, ಸಿದ್ದರಾಮಪುರದ ಒಂದು ಗ್ರಾಮ ಪಂಚಾಯತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.