ಅಕ್ಷರದಲ್ಲಡಗಿದೆ ಸೋಲು-ಗೆಲುವಿನ ಭವಿಷ್ಯ!
ಗ್ರಾಪಂ ಅಭ್ಯರ್ಥಿಗಳ ಹೆಸರಿನ ಮೊದಲ ಅಕ್ಷರ ಆಧರಿಸಿ ಭವಿಷ್ಯ ನುಡಿದ ನಾಗೇನಹಳ್ಳಿಯ ನಂಜುಡೇಶ್ವರ ತಾತ
Team Udayavani, Dec 19, 2020, 6:28 PM IST
ಬಳ್ಳಾರಿ: ತಾಲೂಕಿನ ಡಿ. ನಾಗೇನಹಳ್ಳಿಯ ಶ್ರೀಗುರು ಮರುಳಸಿದ್ಧಾಶ್ರಮದ ನಂಜುಂಡೇಶ್ವರ ತಾತನವರು ಡಿ. 22ರಂದುನಡೆಯಲಿರುವ ಮೊದಲ ಹಂತದ ಗ್ರಾಪಂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಹೆಸರಿನ ಮೊದಲ ಅಕ್ಷರವನ್ನು ಆಧರಿಸಿಅವರ ಸೋಲು-ಗೆಲುವುಗಳ ಭವಿಷ್ಯನುಡಿದಿದ್ದು ಸೋಲುವ ಅಭ್ಯರ್ಥಿಗಳು ಗೆಲ್ಲಲು ಪರಿಹಾರವನ್ನು ಸಹ ಸೂಚಿಸಿದ್ದಾರೆ.
ಈ ಹಿಂದೆ 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ತಾತನವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಜತೆಗೆ ನೆರೆಯ ಆಂಧ್ರಪ್ರದೇಶದಲ್ಲಿ 2019ರಲ್ಲಿನಡೆದ ವಿಧಾನಸಭೆ ಚುನಾವಣೆಯಲ್ಲೂತೆಲುಗುದೇಶಂ ಪಕ್ಷ ಅಧಿ ಕಾರಕ್ಕೆ ಬರಲ್ಲ ಎಂದು ನುಡಿದಿದ್ದ ಭವಿಷ್ಯ ನಿಜವಾಗಿದ್ದು; ಇದೀಗ ಗ್ರಾಪಂ ಚುನಾವಣೆಯಲ್ಲೂ ತಾತನವರ ಭವಿಷ್ಯ ನಿಜವಾಗಲಿದೆ ಎಂದು ಭಕ್ತರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ತಾತನವರು ನುಡಿದಿರುವ ಭವಿಷ್ಯದಂತೆ
ಬು, ಗ, ಯೆ, ತಿ, ಪೆ, ಮ, ಕೆ, ವೆ, ಚು,ಯೊ, ತು, ಗಿ, ಧ, ಪೊ, ಕೊ, ಮಿ, ಚೆ, ವೊ,ಕಿ, ಹಿ, ಮು, ರಾ, ತೆ, ಭ, ಗು, ಪಾ, ಕ, ಹ, ಮೆ, ರಿ, ತೊ, ಭಿ, ಗೆ, ಡ, ಚೂ, ಲ ಹೆಸರಿನ ಮೊದಲ ಈ ಅಕ್ಷರವುಳ್ಳ ಅಭ್ಯರ್ಥಿಗಳಿಗೆ ಶೇ. 100ರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ತಾತನವರು ಖಚಿತಪಡಿಸಿದ್ದಾರೆ.
ಅದೇ ರೀತಿ ಡೊ, ದೊ, ಯಿ, ಚಿ, ಡಿ, ಯು, ದೆ, ಚಿ, ಯ, ಡ, ನೊ, ಡು ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 80ರಷ್ಟು ಗೆಲುವು, ಢ, ಭ, ಚೆ, ಅ, ಧ, ಟೊ, ಈ, ಧ, ಪಿ, ಉ, ಪ, ಎ, ಫ ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 70 ರಷ್ಟು ಗೆಲುವು ಸಾಧ್ಯವಿದೆ.
ಇನ್ನುಳಿದ ಛ, ಥ, ಸಿ, ರೊ, ಶು, ಸ, ನ, ರೆ, ಬೆ, ಜಿ, ಲು, ಷ, ಶೊ, ಝ ಸೇರಿ ಇನ್ನಿತರೆ ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 50ರಷ್ಟು ಗೆಲ್ಲುವ ಸಾಧ್ಯತೆಯಿದೆ. ಶೇ 50, 70, 80ರಷ್ಟು ಗೆಲ್ಲುವ ಸಾಧ್ಯತೆಯುಳ್ಳಅಭ್ಯರ್ಥಿಗಳು ರಾಶಿಬಲ ಹೆಚ್ಚಿರುವಮತದಾರರನ್ನು ಕರೆದೊಯ್ದು ಮೊದಲು ಮತದಾನ ಮಾಡಿಸಿದರೆ ಅಂತಹವರಿಗೆಅವರ ಬಲದಿಂದ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಕೆಲವೆಡೆ ಒಂದೇ ಅಕ್ಷರದ ಹೆಸರಿನ ಅಭ್ಯರ್ಥಿಗಳು ಪರಸ್ಪರ ಪ್ರತಿಸ್ಪರ್ಧಿಗಳಾದಲ್ಲಿ ಅಂತಹ ಕಡೆ ತೀವ್ರ ಪೈಪೋಟಿ ಎದುರಾಗಲಿದ್ದು, ಇಬ್ಬರು ಉತ್ತಮವಾಗಿ ಮತಗಳನ್ನು ಪಡೆದು, ಕೇವಲ 20-25 ಮತಗಳ ಅಂತರದಿಂದಯಾರಾದರೊಬ್ಬರು ಗೆಲುವು ಸಾಧಿಸಲಿದ್ದಾರೆ ಎಂದು ತಾತನವರು ಅಭ್ಯರ್ಥಿಗಳಿಗೆ ಪರಿಹಾರ ಮಾರ್ಗಗಳನ್ನು ಸಹ ಸೂಚಿಸಿದ್ದಾರೆ. ಆದರೆ, ಈ ಹಿಂದೆ ನಿಜವಾದಂತೆ ಗ್ರಾಪಂ ಚುನಾವಣೆಯಲ್ಲೂ ತಾತನವರ ಭವಿಷ್ಯ ನಿಜವಾಗಲಿದೆಯಾ ಅಥವಾ ಇಲ್ಲವಾ ಎಂಬುದು ಫಲಿತಾಂಶ ಹೊರಬೀಳುವ ಡಿ. 30ರವರೆಗೆ ಕಾದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ಹೊಸ ಸೇರ್ಪಡೆ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.