ಬುದ್ಧಿಜೀವಿಗಳ ಮೌನ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಆತಂಕ
Team Udayavani, Jan 27, 2018, 3:41 PM IST
ಹೊಸಪೇಟೆ: ಬುದ್ಧಿಜೀವಿಗಳ ಮೌನ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಆತಂಕವಾಗಿದ್ದು, ಜಾಗತೀಕರಣ, ಖಾಸಗೀಕರಣ, ಜಾಗತಿಕ, ಏಕತೆ ಹಾಗೂ ಭಾಷಾ ಬಿಕ್ಕಟ್ಟನ್ನು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಮಲ್ಲಿಕಾ ಘಂಟಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಘಟಕವು 69ನೇ ಗಣರಾಜ್ಯೋತ್ಸವ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಪ್ರಜಾಪ್ರಭುತ್ವದ ಸಮಕಾಲೀನ ಬಿಕ್ಕಟ್ಟುಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬುದ್ಧಿಜೀವಿಗಳ ಮೌನ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಆತಂಕವಾಗಿದೆ. ಜಾಗತೀಕರಣ, ಖಾಸಗೀಕರಣಗಳ ಆಶಯ ಮಾರುಕಟ್ಟೆಯ
ಸೃಷ್ಟಿ. ಭಾರತ ಮಾರುಕಟ್ಟೆ ಆಗುತ್ತದೆ. ಇದು ಜಾಗತಿಕ ಬಿಕ್ಕಟ್ಟು. ಇದರೊಂದಿಗೆ ಏಕತೆಯ ಬಿಕ್ಕಟ್ಟನ್ನು, ಭಾಷಾ ಬಿಕ್ಕಟ್ಟನ್ನು
ಎದುರಿಸುತ್ತಿದ್ದೇವೆ. ಉದ್ಯಮಪತಿಗಳು ಸೃಷ್ಟಿಸುವ ಆರ್ಥಿಕ ಆಮಿಷಗಳಿಗೆ ನಾವು ಬಲಿಯಾಗುತ್ತಿದ್ದೇವೆ. ಮಾರುಕಟ್ಟೆ ಸಂಸ್ಕೃತಿ
ಜಗತ್ತನ್ನು ಯಾಮಾರಿಸುತ್ತಿರುವಾಗ ಸಮಾನತೆ, ಸಬಲೀಕರಣವನ್ನು ನಿಜವಾದ ಅರ್ಥದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ.
ಜನಪ್ರತಿನಿಧಿಗಳು ಸಂವಿಧಾನ ವಿರೋಧಿಯಾಗಿ ನೀಡುವ ಹೇಳಿಕೆಗಳು, ಮರ್ಯಾದೆ ಹತ್ಯೆಗಳಂತಹ ಬಿಕ್ಕಟ್ಟುಗಳು ಸಹಿಷ್ಣತೆಯ ಬಿಕ್ಕಟ್ಟುಗಳಂತಹ ಒಳಬಿಕ್ಕಟ್ಟು ಮತ್ತು ಹೊರಬಿಕ್ಕಟ್ಟುಗಳು ದೇಶವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ. “ಮನು’ ಅನ್ನು ಮನಸ್ಸಿನಿಂದ ನಾವೆಲ್ಲ ಕಿತ್ತುಹಾಕಬೇಕು. ಸಾಮಾಜಿಕ, ಸಾಂಸ್ಕೃತಿಕ ಅಪವ್ಯಾಖ್ಯಾನಗಳಿಗೆ ಉತ್ತರಿಸಲು ನಾವು ಸಿದ್ಧರಾಗಬೇಕು ಎಂದರು.
ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಬಿ.ಎಂ.ಪುಟ್ಟಯ್ಯ ಮಾತನಾಡಿ, ದೇಶದಲ್ಲಿ ತಾತ್ವಿಕ ಬಿಕ್ಕಟ್ಟು ಎದುರಾಗಿದ್ದು,
ಪ್ರಜಾಪ್ರಭುತ್ವ ಸಾಮಾಜೀಕರಣಗೊಳ್ಳಲಿಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ, ದಬ್ಟಾಳಿಕೆಗಳು ಅಭಿವೃದ್ಧಿಯಾಗಿವೆ. ಅಭಿವೃದ್ಧಿ
ತೆರೆದಿಡುವ ಮುಚ್ಚಿಡುವ ವೈರುಧ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಲ್ಲ ಬಗೆಯ ಸಂಪತ್ತು ಅಧಿಕಾರ ಆಸ್ತಿ ಆರ್ಥಿಕತೆಯ
ಕೇಂದ್ರೀಕರಣ ಮತ್ತೂಂದು ರೀತಿಯ ಬಿಕ್ಕಟ್ಟು ಆಗಿದೆ. ಎಲ್ಲರು ಸೇರಿ ದೇಶ ಕಟ್ಟಬೇಕು ಸಮಾಜದ ಎಲ್ಲರೂ ಮುಖ್ಯವಾಹಿನಿಗೆ
ಬರಬೇಕು ಎಂದು ಕರೆ ನೀಡಿದರು. ಕುಲಸಚಿವ ಡಾ| ಡಿ.ಪಾಂಡುರಂಗಬಾಬು ಮಾತನಾಡಿ, ಗಣರಾಜ್ಯದ ಸಂವಿಧಾನದ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಶಿವಾನಂದ ವಿರಕ್ತಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ವೀರೇಶ ಜಾನೇಕಲ್ ನಿರೂಪಿಸಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆರಂಭದಲ್ಲಿ ಕನ್ನಡ ವಿವಿ ಆವರಣದಲ್ಲಿ 69ನೇ ಗಣರಾಜ್ಯದ ಅಂಗವಾಗಿ ಕುಲಪತಿ ಡಾ| ಮಲ್ಲಿಕಾ
ಘಂಟಿ, ದ್ವಜಾರೋಹಣ ನೆರವೇಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.