ಹೋರಾಟದಿಂದ ನೀರಾವರಿ ಯೋಜನೆ ಸಾಕಾರ
ಎರಡನೇ ಹಂತದ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ 29ರಂದು ಪಾದಯಾತ್ರೆ
Team Udayavani, Feb 24, 2020, 4:57 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಎರಡನೇ ಹಂತದ ಏತನೀರಾವರಿ ಜಾರಿಗೊಳಿಸಲು ಒತ್ತಾಯಿಸಿ ತಂಬ್ರಹಳ್ಳಿ, ಚಿಲುಗೋಡು, ಬನ್ನಿಗೋಳ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ವಿವಿಧ ಹಳ್ಳಿಗಳ ರೈತರು ಫೆ. 29ರಂದು ಹಗರಿಬೊಮ್ಮನಹಳ್ಳಿಗೆ ಪಾದಯಾತ್ರೆ ಮೂಲಕ ಹೋಗಿ ಶಾಸಕ ಭೀಮನಾಯ್ಕ, ನೀರಾವರಿ ಇಲಾಖೆ ಅಧಿಕಾರಿಗಳಿಗೆ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ರೈತರು ತೀರ್ಮಾನ ಕೈಗೊಂಡರು.
ಈ ಕುರಿತು ಜಿಪಂ ಮಾಜಿ ಸದಸ್ಯ ಹೋರಾಟದ ಸಂಚಾಲಕ ಅಕ್ಕಿ ತೋಟೇಶ ಮಾತನಾಡಿ, ಎರಡನೇ ಹಂತದ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಸರಕಾರವನ್ನು ಎಚ್ಚರಿಸಲು ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸಲಾಗುವುದು. ಮೊದಲನೇ ಹಂತವಾಗಿ ಪಾದಯಾತ್ರೆ ಮೂಲಕ ಕ್ಷೇತ್ರದ ಶಾಸಕ ಭೀಮಾನಾಯ್ಕರಿಗೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
ಈ ಹೋರಾಟವನ್ನು ಪಕ್ಷಾತೀತವಾಗಿ ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ರೈತರು, ವರ್ತಕರು, ಕೂಲಿ ಕಾರ್ಮಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಈಗಾಗಲೇ ಎಲ್ಲ ಸ್ತ್ರೀಶಕ್ತಿ ಸಂಘಗಳಿಗೆ ನಿರ್ದೇಶನ ನೀಡಿದ್ದು ಪಾದಯಾತ್ರೆಯಲ್ಲಿ ಮಹಿಳೆಯರು ಕೂಡ ಪಾಲ್ಗೊಳ್ಳುವರು.
ಎರಡನೇ ಹಂತದ ನೀರಾವರಿ ಯೋಜನೆ ಜಾರಿಯಾದರೆ ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯ 3500 ಎಕ್ಕರೆಗೂ ಅಧಿಕ ಪ್ರದೇಶ ನೀರಾವರಿ ಸೌಲಭ್ಯ ಒದಗುವುದು. ಈಗೀರುವ ಏತ ನೀರಾವರಿಗಳನ್ನು ಸುಸ್ಥಿತಿಯಲ್ಲಿಡುವಂತೆ ಒತ್ತಾಯಿಸಲಾಗುವುದು. ಪಾದಯಾತ್ರಿಗಳಿಗೆ ಊಟ, ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳಲಾಗುವುದು. ಪಾದಯಾತ್ರೆ ಮುಗಿದು ಮನವಿ ಸಲ್ಲಿಸಿದ ನಂತರ ಪಾದಯಾತ್ರಿಗಳು ಹಿಂದಿರುಗಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಮಗ್ರ ಹೋರಾಟದಿಂದ ಮಾತ್ರ ನೀರಾವರಿ ಯೋಜನೆಗಳು ಜಾರಿಯಾಗಲು ಸಾಧ್ಯ. ಸುತ್ತಲಿನ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರು ಹೋರಾಟದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಫೆ.
29ರಂದು ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನ ತಂಬ್ರಹಳ್ಳಿಯಿಂದ ಬೆಳಗ್ಗೆ 6 ಗಂಟೆಗೆ ಪಾದಯಾತ್ರೆಯನ್ನು ಪ್ರಾರಂಭಿಸಲಾಗುವುದು.
ಅಂದು ತಂಬ್ರಹಳ್ಳಿ ಅಂಗಡಿಮುಂಗಟ್ಟು, ರೈತರು ಕೆಲಸಗಳನ್ನು
ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಹೋರಾಟದ ರೂಪುರೇಷಗಳನ್ನು ವ್ಯವಸ್ಥಿತವಾಗಿ ರೂಪಿಸಿದ್ದು ಗುರುವಾರ ಸಂಜೆ ಮತ್ತೂಮ್ಮೆ ಪೂರ್ವಭಾವಿ ಸಭೆ ಕರೆದಿದ್ದು ಎಲ್ಲ ರೈತರು ಕಡ್ಡಾಯವಾಗಿ ಆಗಮಿಸಬೇಕು ಎಂದು ತಿಳಿಸಿದರು.
ತಂಬ್ರಹಳ್ಳಿ ಗ್ರಾ.ಪಂ.ಅಧ್ಯಕ್ಷ ಮಡಿವಾಳರ ಕೊಟ್ರೇಶ ಮಾತನಾಡಿ, ನೀರಾವರಿ ಯೋಜನೆಗಳನ್ನು ಸಕಾರಗೊಳಿಸಲು ಕ್ಷೇತ್ರದ ಶಾಸಕರಿಗೆ
ಆಸಕ್ತಿಯಿದ್ದು, ಹೋರಾಟವನ್ನು ಬಲಪಡಿಸುವ ಅಗತ್ಯವಿದೆ. ಎರಡನೇ ಹಂತದ ಏತ ನೀರಾವರಿ ಯೋಜನೆ ಜಾರಿಗೊಳ್ಳಲು ಉತ್ತಮ ಹೋರಾಟ ರೂಪಿಸಬೇಕು. ಕ್ಷೇತ್ರದ ಮಹತ್ವಕಾಂಕ್ಷಿ ಯೋಜನೆ ಮಾಲವಿ ಜಲಾಶಯಕ್ಕೆ ಶಾಶ್ವತ ನಿರೋದಗಿಸಲು ಶಾಸಕ
ಭೀಮಾನಾಯ್ಕ ನಿರಂತರ ಶ್ರಮದಿಂದ ಕಾಮಗಾರಿಗೆ ಅನುದಾನ ಒದಗಿಸಿ ಕಾಮಗಾರಿ ಪ್ರಾರಂಭಿಸಿದ್ದಾರೆ. ಹೋರಾಟಕ್ಕೆ ಪಕ್ಷಾತೀತವಾಗಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಬಿ.ಕೊಟ್ರೇಶ, ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿದರು. ತಾ.ಪಂ.ಸದಸ್ಯ ಪಿ.ಕೊಟ್ರೇಶ, ಗ್ರಾ.ಪಂ. ಸದಸ್ಯರಾದ ಗೌರಜ್ಜನವರ
ಗಿರೀಶ್, ಸುಕುರ್‌ಸಾಬ್, ಸೊಬಟಿ ಹರೀಶ್, ಪಿ. ಶ್ರೀನಿವಾಸ, ರೈತ ಮುಖಂಡರಾದ ಮೈನಳ್ಳಿ ಕೊಟ್ರೇಶ್, ಮೂಲಿಮನಿ ರವಿಪ್ರಸಾದ್,
ಕೋರಿ ಗೋಣಿಬಸಪ್ಪ, ಗಂಗಾಧಗೌಡ, ಗೌಜ್ಜನವರ ಬಸವರಾಜಪ್ಪ,
ಬಾಳಿಕಾಯಿ ಚಿದಾನಂದಪ್ಪ, ಕಡ್ಡಿ ಚನ್ನಬಸಪ್ಪ, ದೇವಿಪ್ರಸಾದ, ಸರಾಯಿ ಮಂಜುನಾಥ, ಸುಣಗಾರ ರಾಮು, ನಂದಿಬಂಡಿ ರಾಮಣ್ಣ, ಕಡ್ಡಿ ಕೊಟ್ರೇಶ, ಮಂಜುನಾಥ ಪಾಟೀಲ್, ಮೋರಿಗೇರಿ ವಿಶ್ವನಾಥ, ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.