ದೇವಿಯರ ಜಾತ್ರೋತ್ಸವಕ್ಕೆ ವಿಜೃಂಭಣೆಯ ಚಾಲನೆ
Team Udayavani, Feb 1, 2020, 5:35 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಊರಮ್ಮ ಮತ್ತು ದ್ಯಾಮಮ್ಮ ದೇವಿಯರ ಜಾತ್ರೋತ್ಸವಕ್ಕೆ ಶುಕ್ರವಾರ ವಿಜೃಂಭಣೆಯ ಚಾಲನೆ ನೀಡಲಾಯಿತು. ಈ ಕುರಿತು ಗ್ರಾಮದ ಮುಖಂಡ ಗಂಗಾಧರಗೌಡ ಮಾತನಾಡಿ, ಆರಂಭದಲ್ಲಿ ದೇವಿಯರ ದೇವಸ್ಥಾನದ ಮುಂಭಾಗ
ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿಯಿಂದ ಧರ್ಮ ದ್ವಜಾರೋಹಣದ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಎರಡು ಚೌಕಿ ಮನೆಗಳಿಗೆ ದೇವಸ್ಥಾನ ಸಮಿತಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಣಕಾರ ಅನ್ನಪೂರ್ಣಮ್ಮ ಕೊಟ್ರಪ್ಪನವರ ಮನೆಯವರಿಂದ ಕಳಸ ತೆಗೆದುಕೊಂಡು ಕುಂಬಾರ ನಾಗಪ್ಪ ಮನೆಯಿಂದ ಗಟ್ಟಿಗಡಿಗೆಗಳನ್ನು ಬಣಕಾರ ಕೊಟ್ರಪ್ಪನವರ ಮನೆಗೆ ವಿಜೃಂಭಣೆ ಮೆರವಣಿಗೆ ಮೂಲಕ ತರಲಾಯಿತು. ಗಟ್ಟಿಗಡಿಗೆಗಳಿಗೆ ಪೂಜೆ ಸಲ್ಲಿಸಿ ಗ್ರಾಮದ ಮೇಟಿಗಳಾದ ಆನೇಕಲ್ ಕೊಟ್ರಪ್ಪ ದೇವಪ್ಪ ಮನೆಯಲ್ಲಿ, ಶ್ಯಾನಭೋಗರ ಟಿ. ಉದಯಭಾಸ್ಕರ್, ದೇವೆಂದ್ರಗೌಡ್ರು, ತಳವಾರ ಯಂಕಣ್ಣ, ಹರಿಜನ ಮೂಕಬಸಪ್ಪ ಇವರ ಮನೆಗಳಲ್ಲಿ ಗಟ್ಟಿಗಡಿಗಿ ಸ್ಥಾಪಿಸಲಾಯಿತು. ಇದರ ಜೊತೆಗೆ ಉಲುಪಿ ನೀಡಲಾಯಿತು. ಬಳಿಕ ಪಟ್ಟದ ಕೋಣಕ್ಕೆ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು.
ಜಾತ್ರೆ ಹಿನ್ನೆಲೆಯಲ್ಲಿ ಇಡೀ ಗ್ರಾಮದ ಸುತ್ತಲೂ ಬೇಲಿ ಹಾಕಲಾಗಿದೆ. ಗ್ರಾಮದ
ಹುಲುಸನ್ನು ಬೇರೆಯವರು ಒಯ್ಯಬಾರದೆಂಬ ಸಾಂಪ್ರಾದಾಯಿಕ ನಂಬಿಕೆಯಿಂದ ಬೇಲಿ
ಹಾಕಿದ್ದಾರೆ. 9 ವರ್ಷದ ನಂತರ ಜರುಗುವ ಈ ಜಾತ್ರೆಯಿಂದಾಗಿ ಗ್ರಾಮದಲ್ಲಿ ಉಲ್ಲಾಸದ ವಾತಾವರಣ ನಿರ್ಮಾಣವಾಗಿದೆ. ದೇವಿಯರ ಜಾತ್ರೆಯಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂಬುದು ಹಿರಿಯರ ಬಲವಾದ ನಂಬಿಕೆಯಾಗಿದೆ. ಗ್ರಾಮಸ್ಥರು ಮನೆಗಳನ್ನು ವಿವಿಧ ಅಲಂಕಾರಿಕ ಬಣ್ಣಗಳಿಂದ ಶೃಂಗರಿಸಿಕೊಂಡಿದ್ದಾರೆ. ದೇವಸ್ಥಾನ ಸಮಿತಿಯವರು ಮತ್ತು ಗ್ರಾಮಸ್ಥರು ಇಡೀ ಗ್ರಾಮವನ್ನೇ ನಿರಂತರವಾಗಿ 15ದಿನಗಳಿಂದ ಸ್ವಚ್ಛಗೊಳಿಸಿ ಜಾತ್ರೋತ್ಸವಕ್ಕೆ ಮೆರಗು ತಂದಿದ್ದಾರೆ.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎಚ್.ಬಿ. ನಾಗನಗೌಡ್ರು, ಧರ್ಮಕರ್ತ ಟಿ.
ಉದಯಭಾಸ್ಕರ್‌ರಾವ್, ಮುಖಂಡರಾದ ಗೌರಜ್ಜನವರ ಬಸವರಾಜಪ್ಪ, ಕಡ್ಡಿ ಚನ್ನಬಸಪ್ಪ, ಟಿ. ಯಂಕಣ್ಣ, ಬಾಳಿಕಾಯಿ ಚಿದಾನಂದಪ್ಪ, ಅಕ್ಕಿ ದೊಡ್ಡಕೊಟ್ರೇಶ್, ಬಣಕಾರ ತೋಟಪ್ಪ,
ಮ್ಯಗಳಮನಿ ಬಸವರಾಜಪ್ಪ, ಆನೇಕಲ್ ಶಾಂತಪ್ಪ, ಡಂಬ್ರಳ್ಳಿ ಪರುಸಪ್ಪ, ಪಂಚಯ್ಯ, ಬಸರಕೋಡು ಲಕ್ಷ್ಮಣ, ಬಾಚಿನಳ್ಳಿ ಮಹೇಶ, ಶ್ರೀನಿವಾಸ, ಬಿ. ಕೊಟ್ರೇಶ, ಸುಣಗಾರ ರಾಮು,
ತಳವಾರ ಪರುಸಪ್ಪ, ಹಾಲಪ್ಪ, ಸೊಬಟಿ ಹರೀಶ್, ತಳವಾರ ಪಾಂಡುರಂಗ, ಬಣಕಾರ ಸುಭಾಷ್, ಈರಪ್ಪಚಾರಿ, ಹೊಟ್ಟಿ ವೀರಣ್ಣ, ಜೀರ್ ಗವಿಸಿದ್ದೇಶ, ಸಕ್ರಗೌಡ, ಲೇಪಾಕ್ಷಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.