ಹಂಪಿ ಜನೋತ್ಸವ :ಸಾಂಸ್ಕೃತಿಕ ಸಂಪನ್ನ


Team Udayavani, Nov 6, 2017, 10:28 AM IST

171105kpn93.jpg

ಹಂಪಿ: ವಿಜಯನಗರದ ವೈಭವವನ್ನು ಬಿಂಬಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ವೇದಿಕೆ ಒದಗಿಸಿದ ಹಂಪಿ ಉತ್ಸವಕ್ಕೆ ತೆರೆಬಿದ್ದಿದೆ. ದೇಶ ವಿದೇಶಗಳ ಕಲಾವಿದರು ಕಲಾಪ್ರದರ್ಶನ ನೀಡಿ ಉತ್ಸವದ ಮೆರುಗು ಹೆಚ್ಚಿಸಿದರು. ಲಕ್ಷಾಂತರ ಜನರು ಉತ್ಸವವನ್ನು ಕಣ್ತುಂಬಿಕೊಂಡರು. 3 ದಿನಗಳ ಉತ್ಸದಲ್ಲಿ ಮೊದಲ ದಿನ ನಿರೀಕ್ಷೆಯಷ್ಟು ಜನ ಸೇರಲಿಲ್ಲ. ಅದರೆ ಕೊನೆಯ 2 ದಿನ ವಾರಾಂತ್ಯವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತದ ಸಹಯೋಗದಲ್ಲಿ ಉತ್ಸವ ನಡೆದಿದೆ.

ರಾಜ್ಯ ಸರಕಾರ 8 ಕೋಟಿ ಹಾಗೂ ಇತರರಿಂದ 3 ಕೋಟಿ ಅನುದಾನ ಪಡೆದು ಒಟ್ಟು 11 ಕೋಟಿ ರೂ. ವೆಚ್ಚದಲ್ಲಿ ಉತ್ಸವವನ್ನು ಸಂಘಟಿಸಲಾಗಿತ್ತು. ಒಟ್ಟೂ 11 ವೇದಿಕೆಗಳಲ್ಲಿ 400ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದವು. ಎದುರು ಬಸವಣ್ಣ ವೇದಿಕೆ ಹಾಗೂ ಸಮೀಪದ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಹಜಾರರಾಮ ದೇವಾಲಯ ವೇದಿಕೆ ಹೊರತುಪಡಿಸಿದರೆ ಉಳಿದೆಡೆ ನಿರೀಕ್ಷಿಸಿದಷ್ಟು ಜನರಿರಲಿಲ್ಲ. ಮುಖ್ಯ ವೇದಿಕೆಯಲ್ಲಿ ಪ್ರತಿದಿನ ರಾತ್ರಿ ನಡೆದ ಕನ್ನಡ ರಸಮಂಜರಿಯಲ್ಲಿ ಜನಜಂಗುಳಿ ಹೆಚ್ಚಿತ್ತು. ಮೂರು ದಿನ ಬೆಂಗಳೂರಿನ ಟಿಪ್ಪು ಹಾಗೂ ತಂಡ, ಗುರುಕಿರಣ ಮತ್ತು ತಂಡ ಹಾಗೂ ಮನೋಮೂರ್ತಿ ಹಾಗೂ ಸಂಗಡಿಗರು, ಗಾಯತ್ರಿ ಪೀಠ ಮೈದಾನದಲ್ಲಿ ನಡೆದ ಕುನಾಲ್‌ ಗಾಂಜಾವಾಲಾ ರಸಮಂಜರಿ ಮೂಲಕ ಸಿನೆ ರಸಿಕರನ್ನು ರಂಜಿಸಿದರು.

ಇದಲ್ಲದೆ ವಿದೇಶದ ಹಲವು ತಂಡಗಳು ಪ್ರದರ್ಶನ ನೀಡಿದವು. ತೈವಾನ್‌ನ ಟರ ಕ್ಯಾತ್ರಿನೆ ಪಾಂಡಿಯಾ ಹಾಗೂ ಬಿಲ್ಲಿಚಾಂಗ್‌ ಈಜಿಪ್ಟ್ನ ಅಲೆಕ್ಸಾಂಡ್ರಿಯ ತಂಡದ ಫ್ಲೋಕರಿಕ್‌ ಡೆರವಿಶ್‌ ಡ್ಯಾನ್ಸ್‌, ಲಿತುಯಾನಿಯಾದ ಬ್ಯಾಂಡ್‌ ಮ್ಯುಸಿಕ್‌, ಅರ್ಜಂಟಿನಾದ ಮ್ಯಾಂಡ್ರೊಗೊರೊ ಸಿರ್ಕೊ, ಕೆನಡಾದ ಅಂಜಲಿ ಪಾಟೀಲರಿಂದ ಕಥಕ್‌ ನೃತ್ಯ, ರಷ್ಯಾದ ರಷಿಯನ್‌ ಸೌನಿಯರ್‌ ಪ್ರದರ್ಶನ ಗಮನ ಸೆಳೆಯಿತು. ಸಾಹಿತ್ಯಾಸಕ್ತರು ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ನಡೆದ ಮಹಿಳಾ ಕವಿಗೋಷ್ಠಿ, ಯುವ ಕವಿಗೋಷ್ಠಿ, ಕವಿ-ಕಾವ್ಯ-ಕುಂಚ-ಗಾಯನ ಗೋಷ್ಠಿಗಳ ಪ್ರೇಕ್ಷಕರಾದರು.

ರಾಯಭಾರಿಗಳು ಭಾಗಿ: ಮಹಾನವಮಿ ದಿಬ್ಬ ವೇದಿಕೆಯಲ್ಲಿಯೂ ಗಮನ ಸೆಳೆಯುವ ಕಾರ್ಯಕ್ರಮ ಸಂಘಟಿಸಬೇಕೆಂಬ ಉದ್ದೇಶದಿಂದ ವಿಜಯನಗರ ಸಂಸ್ಥಾನದ ಹಿರಿಮೆ ತಿಳಿಸುವ ಜೊತೆಗೆ ಗಾಯನ-ನರ್ತನ ಕಾರ್ಯಕ್ರಮಕ್ಕೆ 10 ದೇಶಗಳ ರಾಯಭಾರಿಗಳನ್ನು ಆಹ್ವಾನಿಸಲಾಗಿತ್ತು. ಇಜಿಪ್ಟಿಯಾ, ಈಜಿಪ್ಟ್, ನೈಜರ್‌, ಬೋಟ್ಸ್ ವಾನಾ, ಬ್ರೂನೆ, ಮಲೇಶಿಯಾ, ಪ್ಯಾಲಸ್ತೀನ್‌, ಟ್ಯುನಿಶಿಯಾ, ಫಿಜಿ, ಅಲ್ಜೀರಿಯಾ ದೇಶಗಳ ರಾಯಭಾರಿಗಳು ಕಾರ್ಯಕ್ರಮ ವೀಕ್ಷಿಸಿ ಖುಷಿ ಪಟ್ಟರು.

ಆಗಸ ದಿಂದ ಹಂಪಿ: ಹೆಲಿಕ್ಯಾಪ್ಟರ್‌ ಮೂಲಕ ಹಂಪಿಯನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು. ನೂರಾರು ಪ್ರವಾಸಿಗರು ತಲಾ 2300 ರೂ. ನೀಡಿ ಆಗಸದಿಂದ ಶಿಲಾನಗರಿ ಹಂಪಿಯನ್ನು ಕಣ್ತುಂಬಿಕೊಂಡರು. ಮೂರು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆ ವರೆಗೆ ಹೆಲಿಕ್ಯಾಪ್ಟರ್‌ ಹಾರಾಟ ನಡೆಯಿತು. ಕಾಲಿದ್ದವರು ಹಂಪಿ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕೆಂಬ ಮಾತಿದೆ. ವಿವಿಧ ವೇದಿಕೆಗಳಿಗೆ ತೆರಳಲು ವಯಸ್ಸಾದವರು ಹರಸಾಹಸ ಪಡಬೇಕಾಯಿತು. ಕನಿಷ್ಟ 30 ಕಿ.ಮೀ. ವ್ಯಾಪ್ತಿಯಿಂದ ಹಂಪಿಗೆ ಬರಲು ಉಚಿತ ಬಸ್‌ ಸೇವೆ ಕಲ್ಪಿಸಲಾಗಿತ್ತು. ಆದರೆ ತೀರಾ ದೂರದಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿದ್ದರಿಂದ ಅಲ್ಲಿಂದ ವೇದಿಕೆಗಳಿಗೆ ಬರಲು ಜನರಿಗೆ ತೊಂದರೆಯಾಯಿತು

ಹಂಪಿ ಉತ್ಸವ ಯಶಸ್ವಿ ಗೊಂಡಿದೆ: ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಲಕ್ಷಾಂತರ ಜನರನ್ನು ಸೆಳೆಯುವಲ್ಲಿ ಸಫಲಗೊಂಡಿದೆ. ಸ್ಥಳೀಯರೊಂದಿಗೆ ಹೊರ ರಾಜ್ಯದ, ಹೊರ ದೇಶದ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಹಲವು ಕಲೆಗಳಿಗೂ ಆದ್ಯತೆ ನೀಡಲಾಗಿದೆ.  ಸಣ್ಣ-ಪುಟ್ಟ ಗೊಂದಲಗಳಾಗಿದ್ದರೆ ಅವುಗಳನ್ನು ಬಗೆಹರಿಸಲಾಗುವುದು. ದೊಡ್ಡ ಪ್ರಮಾಣದಲ್ಲಿ ಉತ್ಸವ ಮಾಡುವಾಗ ಕೆಲ ಸಮಸ್ಯೆಗಳಾಗುವುದು ಸಹಜ.
ಸಂತೋಷ ಲಾಡ್‌, ಉಸ್ತುವಾರಿ ಸಚಿವ.

ದರ್ಶನ ಪಡೆಯದ ಸಿದ್ದರಾಮಯ್ಯ
ವಿಜಯನಗರದ ಕ್ಷೇತ್ರ ದೇವರಾದ ವಿರುಪಾಕ್ಷೇಶ್ವರ ಸನ್ನಿಧಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ನಂಬಿಕೆಯಿಂದಲೋ ಏನೋ ಸಿಎಂ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪೆಡಯಲಿಲ್ಲ. ಉತ್ಸವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ, ನಾನು ಹಿಂದೆ ಹಲವು ಬಾರಿ ವಿರುಪಾಕ್ಷನ ದರ್ಶನ ಪಡೆದಿದ್ದೇನೆ ಎಂದರಾದರೂ ಈ ಬಾರಿ ಯಾಕೆ ದರ್ಶನ ಪಡೆಯಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿಲ.

ಸಕಲರಿಗೂ ಧನ್ಯವಾದ: ಲಾಡ್‌ ಹಂಪಿ(ಗಾಯತ್ರಿ ಪೀಠ ವೇದಿಕೆ): ಹಂಪಿ ಉತ್ಸವ ಯಶಸ್ವಿಯಾಗಿ ಸಂಪನ್ನವಾಗಿದ್ದು, ಮುಂದಿನ ವರ್ಷ ಇನ್ನೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಬಳ್ಳಾರಿ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷಗಳ ಶಾಸಕರು, ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಅದ್ಧೂರಿ ಹಂಪಿ ಉತ್ಸವ ಯಶಸ್ವಿಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರ ಸಹಕಾರವನ್ನು ಮರೆಯುವಂತಿಲ್ಲ. ಈ ಬಾರಿ ಉತ್ಸವದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿರುವುದು ಸಂತಸ ತಂದಿದೆ ಎಂದರು. 

ವಿದೇಶಿಯರ ಪಾಲಿಗೂ ದಕ್ಕಿದ ಹಂಪಿ ವೈಭವ 
ಹಂಪಿ: ಐತಿಹಾಸಿಕ ಹಂಪಿ ವೈಭವವನ್ನು ಕಂಡು ಮನ ತಣಿಸಿಕೊಂಡ ವಿದೇಶಿಯರು ಉತ್ಸವದಲ್ಲಿ ಜಮಾಯಿಸಿದ್ದ ಜನಜಾತ್ರೆ ನೋಡಿ ಹುಬ್ಬೇರಿಸಿದರು. ಹಂಪಿ ಉತ್ಸವದ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ಪ್ರವಾಸಿಗರು ಉತ್ಸವದ ಮೂರು ದಿನಗಳ ಕಾಲವೂ ಅಲ್ಲಲ್ಲಿ ಸುತ್ತುತ್ತ ಶಿಲ್ಪಕಲೆಯ ಸಿರಿಯನ್ನು ಕಣ್ತುಂಬಿಕೊಂಡರು. ವಿರೂಪಾಕ್ಷೇಶ್ವರ ದೇವಸ್ಥಾನ, ಮಹಾನವಮಿ ದಿಬ್ಬ, ಕಮಲ್‌ ಮಹಲ್‌, ಕಡಲೆ ಕಾಳು ಗಣಪ, ಸಾಸಿವೆ ಕಾಳು ಗಣಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮೂರು ದಿನಗಳ ಕಾಲ ಜನದಟ್ಟಣೆಯೇ ಕಂಡು ಬಂದಿತು. ಜನತೆ ಸ್ಮಾರಕಗಳ ಮುಂದೆ ನಿಂತು ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಹಾಗೂ ರಾಜ್ಯದ ನಾನಾ ಮೂಲೆಗಳಿಂದ ಜನರು ಕುಟುಂಬ ಪರಿವಾರ ಸಮೇತ ಆಗಮಿಸಿ ನಾನಾ ಸ್ಥಳಗಳಿಗೆ ಭೇಟಿ ನೀಡುತ್ತ ಶಿಲಾ ಕಲಾ ಐಸಿರಿಯನ್ನು ತದೇಕ ಚಿತ್ತದಿಂದ ಸವಿಯುತ್ತಿರುವುದು ಕಂಡು ಬಂದಿತು.

ಕೆಲವೆಡೆಗಳಲ್ಲಿದ್ದ ಸಣ್ಣ ಹೋಟೆಲ್‌ಗ‌ಳಲ್ಲಿ ಜನರು ಮಿರ್ಚಿ, ಬಜಿ, ಚಹಾ ಸೇವನೆ ಮಾಡುತ್ತ ವಿರಮಿಸುತ್ತಿದ್ದರು. ಅಲ್ಲಲ್ಲಿ ಸುತ್ತುತ್ತಿದ್ದ ಕೆಲ ವಿದೇಶಿ ಮಹಿಳೆಯರು ದೇಶಿ ಸೀರೆಗಳನ್ನು ಧರಿಸಿ ಗಮನ ಸೆಳೆದರು. ಸಂಜೆ ಮೋಡ ಕೆಂಪೇರುತ್ತಿದ್ದಂತೆ ಇಡೀ ಹಂಪಿ ತಾಣವೇ ಬಗೆಬಗೆಯ ವಿದ್ಯುದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದುದನ್ನು ಜನತೆ ಬಂಡೆಗಲ್ಲುಗಳ ಮೇಲೆ ನಿಂತು ನೋಡುತ್ತ, ಮೊಬೈಲ್‌ ಕ್ಯಾಮೆರಾಗಳಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ನೋಟ ಸಾಮಾನ್ಯವಾಗಿತ್ತು. ಭಿನ್ನ, ವಿಭಿನ್ನ ಬೆಳಕಿನ ಕಿರಣಗಳಿಂದ ಹಂಪಿ ಸುತ್ತಲಿನ ದೊಡ್ಡ ದೊಡ್ಡ ಬಂಡೆಗಳು ಎದ್ದು ಕಾಣುತ್ತಿದ್ದವು. ಹಿಂದಿನ ಹಂಪಿಯ ಗತವೈಭವವು ಮೂರು ದಿನಗಳ ಕಾಲ ನಡೆದ ಹಂಪಿ ಉತ್ಸವದಲ್ಲಿ ಜನೋತ್ಸಾಹದೊಂದಿಗೆ ಮತ್ತೆ ಮರುಕಳಿಸಿದಂತೆ ಗೋಚರಿಸಿತು. ಕಣ್ಣಿದ್ದವರು ಕನಕಗಿರಿ ನೋಡಬೇಕು..  ಕಾಲಿದ್ದವರು ಹಂಪಿ ನೋಡಬೇಕು ಎನ್ನುವ ನಾಣ್ಣುಡಿಯಂತೆ ವಿಶಾಲ ಹಂಪಿಯನ್ನು ಸುತ್ತುತ್ತಲೇ ಜನರು ಕಾಲು ಸೋಲುವಷ್ಟು ನಡೆದರೂ ಉತ್ಸವದ ಸಂದರ್ಭದಲ್ಲಿ ಅವರ ಮೊಗದಲ್ಲಿದ್ದ ಉತ್ಸಾಹ ಕುಂದಲಿಲ್ಲ.

ವರುಣನ ಸಿಂಚನ: ಈಚೆಗಷ್ಟೇ ವಿರಾಮ ನೀಡಿರುವ ಮಳೆರಾಯ ಹಂಪಿ ಉತ್ಸವದ ಸದ್ದಿಗೆ ಧರೆಗೆ ಇಳಿದು ಬಂದಂತೆ ರವಿವಾರ ನಸುಕಿನ ವೇಳೆ ಸಿಂಚನಗೈದ. ಮತ್ತೇ ದೊಡ್ಡ ಮಳೆ ಬಂತೆನೋ ಎನ್ನುವ ಆತಂಕ ಕ್ಷಣಕಾಲ ಆವರಿಸಿತ್ತು. ಜನೋತ್ಸಾಹಕ್ಕೆ ಭಂಗ ತರುವುದು ಬೇಡ ಎಂದು ತೀರ್ಮಾನಿಸಿದಂತೆ ಮರೆಯಾದ.

ಟಾಪ್ ನ್ಯೂಸ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

13-

Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

Sanduru-BJP-Cong-Candidates

Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.