ಹಂಪಿ ಶುಗರ್ಸ್ಗ್ ಗೆ ನೀಡಿದ್ದ ಭೂ ಮಂಜೂರಾತಿ ಆದೇಶ ಸ್ಥಗಿತಕ್ಕೆ ಶಾಸಕರಿಂದ ಪತ್ರ
ಮಾಜಿ ಸಚಿವ ಆನಂದ ಸಿಂಗ್ ಸಕ್ಕರೆ ಕಾರ್ಖಾನೆ ಕನಸು ಭಗ್ನ
Team Udayavani, Aug 2, 2023, 10:13 AM IST
ಹೊಸಪೇಟೆ: ಇಲ್ಲಿನ ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಮಾಜಿ ಸಚಿವ ಆನಂದ ಸಿಂಗ್, ನಗರದ ಜಂಬುನಾಥಹಳ್ಳಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಹಂಪಿ ಶುಗರ್ಸ್ ಕಂಪನಿಗೆ ಸರ್ಕಾರದಿಂದ 81.86 ಭೂಮಿಗೆ ಹೊರಡಿಸಿದ್ದ ಮಂಜೂರಾತಿ ಆದೇಶವನ್ನು ರದ್ದುಗೊಳಿಸುವಂತೆ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಈ ಭೂಮಿಯನ್ನು ನಗರದ ವಸತಿ ರಹಿತ ಬಡವರಿಗೆ ಮೀಸಲಿಡಬೇಕು ಎಂದು ಕೋರಿದ್ದಾರೆ.
ನಗರದ ಜಂಬುನಾಥ ಹಳ್ಳಿ ವ್ಯಾಪ್ತಿಯ ಸರ್ವೆ ನಂಬರ್ 11/1 ಇತರೆ ಸರ್ವೆ ನಂಬರ್‌ಗಳ ಒಟ್ಟು 81.86 ಎಕರೆ ಭೂಮಿಯಲ್ಲಿ ಎಥೆನಾಲ್ ಕಾರ್ಖಾನೆ ಸ್ಥಾಪನೆಗಾಗಿ ಮೆ.ಹಂಪಿ ಶುಗರ್ಸ್ ಕಂಪನಿಗೆ ಸರ್ಕಾರ ಹೊರಡಿಸಿರುವ ಭೂ ಮಂಜೂರಾತಿ ಆದೇಶ ಸ್ಥಗಿತಗೊಳಿಸುವಂತೆ ಕಳೆದ ಜುಲೈ 17 ರಂದು ಪತ್ರ ಬರೆದಿದ್ದಾರೆ.
ಸರ್ಕಾರಕ್ಕೆ ನಷ್ಟ:
ಜಂಬುಗನಾಥಹಳ್ಳಿ ಗ್ರಾಮದ ಜಮೀನು ಭೂ ಭಾಗವು ಹೊಸಪೇಟೆ ನಗರಸಭೆಗೆ ಸೇರಲಿದೆ. ಈ ಜಮೀನಿಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ. ಪ್ರತಿ ಎಕರೆ ಸುಮಾರು 2 ಕೋಟಿ ರೂ ಬೆಲೆಯಷ್ಟು ಬೆಲೆ ಬಾಳಲಿದೆ. ಬರಿ ಮಾರ್ಗಸೂಚಿ ದರದಲ್ಲಿ ಭೂ ಪರಿವರ್ತನ ಶುಲ್ಕವನ್ನು ಕೂಡ ಪವತಿಸಿಕೊಳದೇ ತರಾತುರಿಯಲ್ಲಿ 84,86 ಎಕರೆ ಜಮೀನುನನ್ನು ಕೇವಲ 13 ರಿಂದ 14 ಕೋಟಿ ರೂ.ಗಳಿಗೆ ಖಾಸಗಿ ಕಂಪನಿಯೊಂದಕ್ಕೆ ಮಾರಾಟ ಮಾಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಲಿದೆ. ಸುಮಾರು 150 ಕೋಟಿ ರೂ.ಗಳಷ್ಟು ಸರ್ಕಾರಕ್ಕೆ ನಷ್ಟವಾಗಲಿದೆ. ನಗರ ವ್ಯಾಪ್ತಿಯ ವಸತಿ ರಹಿತ ಬಡಜನರಿಗೆ ಈ ಭೂಮಿ ಕಾಯ್ದಿರುವಂತೆ ಮನವಿ ಮಾಡಿದ್ದಾರೆ.
ರೈತರ ಸಂಕಷ್ಟ:
ಭಾಗದ ಕಬ್ಬು ಬೆಳೆಗಾಗರರಿಗೆ ಆಸರೆಯಾಗಿದ್ದ ನಗರದ ಚಿತ್ತವಾಡ್ಗಿಯ ಐಎಎಸ್‌ಆರ್ ಸಕ್ಕರೆ ಕಾರ್ಖಾನೆ ಮುಚ್ಚಿ ಆರೇಳು ವರ್ಷ. ಸಣ್ಣ, ಅತಿ ಸಣ್ಣ ರೈತರು ಈ ಕಾರ್ಖಾನೆ ಮೇಲೆ ಅವಲಂಬಿತರಾಗಿದ್ದರು. ಕಾರ್ಖಾನೆ ಅಚ್ಚುಕಟ್ಟು ಪ್ರದೇಶದ ರೈತರು ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಕಬ್ಬು ಸಾಗಿಸುತ್ತಿದ್ದರು. ಆರಂಭದಿಂದಲೂ ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಕಾರ್ಖಾನೆ ಆಡಳತ ಮಂಡಳಿ, ಕಾಲ ಕಳೆದಂತೆ ರೈತರಿಗೆ ಕಬ್ಬಿನ ಹಣ ಪಾವತಿಯನ್ನು ವಿಳಂಬ ಮಾಡಿ, ಬಾಕಿ ಉಳಿಸಿಕೊಂಡಿತು. ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಯಿತು. ಕೊನೆಗೆ ರೈತರ ತಾಳ್ಮೆಯ ಕಟ್ಟೆ ಹೊಡೆಯಿತು.
ರೈತರಿಂದ ಧರಣಿ:
ರೈತರ ಬಾಕಿ ಹಣ ಪಾವತಿಗಾಗಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಹಲವು ಧರಣಿ ನಡೆಸಿ, ಆಕ್ರೋಶ ಹೊರ ಹಾಕಿದರು. ಆದರೂ ಕಾರ್ಖಾನೆಯಿಂದ ಬಾಕಿ ಹಣ ಬರಲ್ಲಿಲ್ಲ. ಅನಿವಾರ‍್ಯವಾಗಿ ಅಂದಿನ ಶಾಸಕರಾಗಿದ್ದ ಮಾಜಿ ಸಚಿವ ಆನಂದ ಸಿಂಗ್ ಅವರ ಮೊರೆ ಹೋದರು. ಆಗ ರೈತರ ಮನವಿಗೆ ಸ್ಪಂದಿಸಿದ ಆನಂದ ಸಿಂಗ್ ಅವರು, ಕಾರ್ಖಾನೆ ಮಾಲೀಕರನ್ನು ಚೆರ್ಚಿಸಿ ರೈತರ ಬಾಕಿ ಹಣ ನೀಡುವಂತೆ ಮನವಿ ಮಾಡಿದರು. ರೈತರೊಂದಿಗೆ ಪ್ರತಿಭಟನೆ ಕೂಡ ನಡೆಸಿದರು. ಇದ್ಯಾವುದಕ್ಕೂ ಜಗ್ಗದ ಕಾರ್ಖಾನೆ ಮಾಲೀಕರು, ಕಾರ್ಖಾನೆ ಸ್ಥಗಿತಗೊಳಿಸಿದರು. ಕಾರ್ಖಾನೆ ಆಡಳಿತ ಮಂಡಳಿಯ ಹಠಮಾರಿ ಧೋರಣೆಗೆ ಈ ಭಾಗದ ಜನರಿಗೆ ವರದಾನವಾಗಿದ್ದ ಸಕ್ಕರೆ ಕಾರ್ಖಾನೆ ಇದ್ದು ಇಲ್ಲದಾಗಿ ಪರದಾಡುತ್ತಿದ್ದಾರೆ.
ರಾಜಕೀಯ ಬಣ್ಣ:
ಕಾರ್ಖಾನೆಯ ಅನತಿ ದೂರದಲ್ಲಿ ಆನಂದ ಸಿಂಗ್ ಅವರ ಭವ್ಯ (ನಿವಾಸ) ಅರಮನೆ ಇದೆ. ಅವರ ಅರಮನೆಗೆ ಕಾರ್ಖಾನೆ ಕಬ್ಬು ಬೂದಿ ಗಾಳಿಯಲ್ಲಿ ಬಂದು ಭವ್ಯ ಬಂಗಲೆ ಸೇರಬಹುದು ಎಂಬ ಕಾರಣದಿಂದಲೇ ಆನಂದ ಸಿಂಗ್, ಸಕ್ಕರೆ ಕಾರ್ಖಾನೆ ಸ್ಥಗಿತ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತು. ಈ ಆರೋಪದಿಂದ ಹೊರ ಬರಲು ಆನಂದ ಸಿಂಗ್, ಹೊಸ ಕಾರ್ಖಾನೆ ಸ್ಥಾಪನೆಗೆ ಹೊಸ ಹೆಜ್ಜೆ ಇರಿಸಿದರು. ಆಗ ಮುಂದೆ ಬಂದಿದ್ದು ಮೆ.ಹಂಪಿ ಶುಗರ್ಸ್ ಕಂಪನಿ.
ನಗರದ ಜಂಬುನಾಥ ಹಳ್ಳಿ ಗ್ರಾಮದ ಸರ್ವೆ ನಂಬರ್ 11/1 ಇತರೆ ಸರ್ವೆ ನಂಬರ್‌ಗಳ ಒಟ್ಟು 81.86 ಎಕರೆ ಭೂಮಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಅನಂದ ಸಿಂಗ್ ಸರ್ಕಾರದಿಂದ ಮಂಜೂರಾತಿ ಆದೇಶ ಹೊರಡಿಸಿದರು. ಅಷ್ಟೊತ್ತಿಗೆ ಚುನಾವಣೆ ದಿನಾಂಕ ನಿಗದಿಯಾದ್ದರಿಂದ ಈ ಕಾರ್ಯ ನೆನೆಗುದಿಗೆ ಬಿದ್ದಿತು.
ಈ ವಿಚಾರವನ್ನೇ ವಿರೋಧ ಪಕ್ಷವರು, ಚುನಾವಣೆಯಲ್ಲಿ ಆನಂದ ಸಿಂಗ್ ಅವರನ್ನು ಮಣಿಸಲು ಅಸ್ತ್ರವನ್ನಾಗಿ ಬಳಿಸಿಕೊಂಡರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಆನಂದ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ಅವರ ವಿರುದ್ಧ ಭರ್ಜರಿ ಗೆಲವು ಸಾಧಿಸಿರುವ ಎಚ್.ಆರ್,ಗವಿಯಪ್ಪ ಆನಂದ ಸಿಂಗ್ ಅವರ ಹಂಪಿ ಶುರ‍್ಸ್ ಸಕ್ಕರೆ ಕಾರ್ಖಾನೆ ಸ್ಥಾಪನೆಯ ಕನಸನ್ನು ಭಗ್ನಗೊಳಿಸಿದ್ದಾರೆ.
ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್: 2 ಎಕರೆ ಜಾಗದಲ್ಲಿ ಬೆಳೆದ ಕಬ್ಬು, ತೆಂಗು ಬೆಳೆಗಳು ಬೆಂಕಿಗಾಹುತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Saira Banu: ಎ.ಆರ್.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ
Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
UV Fusion: ನಿಸ್ವಾರ್ಥ ಜೀವ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.