ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ : ಹಂಪಿ ಭೇಟಿಗೆ ಪ್ರವಾಸಿಗರಿಗೆ ಮುಕ್ತ ಅವಕಾಶ
ನಿರ್ಬಂಧ ತೆರವುಗೊಳಿಸಿದ ಜಿಲ್ಲಾಡಳಿತ
Team Udayavani, Sep 10, 2021, 4:55 PM IST
ಹೊಸಪೇಟೆ: ಕೋವಿಡ್ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ವಿಶ್ವವಿಖ್ಯಾತ ಹಂಪಿಗೆ ಭೇಟಿಗೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ಗುರುವಾರ (ಸೆ.9) ತೆರವುಗೊಳಿಸಿ, ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಿದೆ.
ಕಳೆದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯ ದೇವಾಲಯ ಹಾಗೂ ಸ್ಮಾರಕಗಳ ವೀಕ್ಷಣೆಗೆ ಆ.14ರಂದು ನಿಷೇಧ ಹೇರಿದ್ದ ಜಿಲ್ಲಾಡಳಿ ನಿರ್ಬಂಧ ತೆರವುಗೊಳಿಸಿ, ಪ್ರವಾಸಿಗರ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿದೆ.
ಶನಿವಾರ ಹಾಗೂ ಭಾನುವಾರ ರಜೆ ದಿನಗಳಲ್ಲಿ ಇನ್ನುಂದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಲಿದ್ದು,ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಲಿವೆ. ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಪ್ರತಿ ಶನಿವಾರ, ಭಾನುವಾರ ಸೋಮವಾರ ಹಾಗೂ ಅಮವಾಸ್ಯೆ ದಿನದಲ್ಲಿ ಕೂಡ ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಕಡಿವಾಣ ಹಾಕಿತ್ತು. ಇದರಿಂದಾಗಿ ವಾರದಲ್ಲಿ ನಾಲ್ಕು ದಿನ ಮಾತ್ರ ಪ್ರವಾಸಿಗರು ಹಂಪಿಗೆ ಭೇಟಿ ನೀಡಬಹುದಿತ್ತು. ಕೋವಿಡ್ ಎರಡೂ ಅಲೆಗಳಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಹಂಪಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿತ್ತು. ಹಂಪಿ ಪ್ರವಾಸೋದ್ಯಮದಿಂದ ಬದುಕು ಕಟ್ಟಿಕೊಂಡಿದ್ದ ಗೈಡ್‌ಗಳು, ಹೋಟೆಲ್, ರೆಸ್ಟೋರೆಂಟ್ ಸಣ್ಣ-ಪುಟ್ಟ ವ್ಯಾಪಾರ -ವಹಿವಾಟು ನಡೆಸಿಕೊಂಡು ಅನೇಕರು ತೊಂದರೆಗೆ ಒಳಗಾಗಿದ್ದರು. ಈಗ ಹಂಪಿಗೆ ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು, ಹಂಪಿಯ ಕಡೆ ಮುಖ ಮಾಡಲಿದ್ದು, ಪ್ರವಾಸೊದ್ಯಮದಲ್ಲಿ ಕೊಂಚ ಮಟ್ಟಿಗೆ ಚೇತರಿಕೆ ಕಾಣುವ ಲಕ್ಷಣಗಳು ಗೋಚರವಾಗುತ್ತಿವೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯಹಂಪಿ,ಕಮಲಾಪುರ ಹಾಗೂ ವೆಂಕಟಾಪುರ ವ್ಯಾಪ್ತಿಗೆ ಒಳಪಡುವ ದೇವಾಲಯ
ಹಾಗೂ ಸ್ಮಾರಕಗಳ ವೀಕ್ಷಣೆಗೆ ಆ.14ರಂದುಹೇರಿದ್ದ ನಿರ್ಬಂಧ ಗುರುವಾರ ತೆರವುಗೊಳಿಸಿ, ಪ್ರವಾಸಿಗರಿಗೆ ಮುಕ್ತ ಅವಕಾಶಕಲ್ಪಿಸಿದೆ.
-ಪವನ್ ಕುಮಾರ್ ಮಾಲಿಪಾಟಿ,
ಜಿಲ್ಲಾಧಿಕಾರಿಗಳು, ಬಳ್ಳಾರಿ ಮತ್ತು ವಿಜಯನಗರ
ಕೋವಿಡ್ ಎರಡು ಅಲೆಗಳ ಲಾಕ್‌ಡೌನ್‌ನಿಂದ ಎಲ್ಲೂ ಹೊರ ಹೋಗಲು ಸಾಧ್ಯವಾಗಿರಲ್ಲಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ದಿನಗಳಲ್ಲಿ ಹಂಪಿಗೆ ಭೇಟಿ ನೀಡಿ ಸ್ಮಾರಕ ವೀಕ್ಷಣೆ ಮಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ.
-ಸುರೇಶ್, ಪ್ರವಾಸಿಗ, ದಾವಣಗೆರೆ
ಕಳೆದ ಕೋವಿಡ್ ಒಂದು ಮತ್ತು ಎರಡನೇ ಅಲೆ ಹೊಡೆತಕ್ಕೆ ಹಂಪಿ ಪ್ರವಾಸೋದ್ಯಮಕ್ಕೆ ತೀವ್ರ ಆರ್ಥಿಕ ಹೊಡೆತ ಬಿದ್ದಿತ್ತು. ಇದರ ನಡುವೆಯೂ ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕಳೆದ ಹಂಪಿ ಭೇಟಿಗೆ ನಿಷೇಧ ಹೇರಲಾಗಿತ್ತು. ಇದರಿಂದಾಗಿ ಹೊಟೇಲ್, ರೆಸ್ಟೋರೆಂಟ್, ಸಣ್ಣ-ಪುಟ್ಟವ್ಯಾಪಾರ ವಹಿವಾಟಿಗೆಹಿನ್ನಡೆಯಾಗಿತ್ತು. ಇದೀಗಹಂಪಿಗೆಭೇಟಿಗೆಅವಕಾಶ ನೀಡಿದಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ.
-ಅಂಬರೇಶ್ ವಾಲ್ಮೀಕಿ, ಗೈಡ್,
ಕಮಲಾಪುರ.
-ಪಿ.ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.