ಸಾಲದ ಕೂಪಕ್ಕೆ ತಳ್ಳಿದ್ದೇ ಕೈ ಸಾಧನೆ


Team Udayavani, May 4, 2018, 11:51 AM IST

bell-1.jpg

ಬಳ್ಳಾರಿ: ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ “ಸಿದ್ದರುಪಯ್ನಾ’ ಸರಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿದೆ. ರಾಜ್ಯದ ಪ್ರಜೆಗಳೆಲ್ಲ ಸಾಲಗಾರರಾಗಿದ್ದಾರೆ. ಇದೇ ಕಾಂಗ್ರೆಸ್‌ ಸರಕರದ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿರೋದು ಭ್ರಷ್ಟಾಚಾರ ಮುಕ್ತ ಸರಕಾರ ಎನ್ನುತ್ತಾರೆ. ಆದರೆ ಇವರ ಸಂಪುಟದಲ್ಲಿರುವ ಸಚಿವರ ಮನೆಯಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಗುತ್ತಿದೆ. ಸರಕಾರದಲ್ಲಿರುವ ಅನೇಕ ಸಚಿವರು ಕೋಟ್ಯಂತರ ರೂ. ಲೂಟಿ ಹೊಡೆದಿದ್ದಾರೆ. ಭ್ರಷ್ಟ ರಹಿತ ಎನ್ನುವ ಕಾಂಗ್ರೆಸ್ಸಿನವರು ಈ ಹಣ ಎಲ್ಲಿಂದ ಬಂತು ಎಂಬುದಕ್ಕೆ ಜನರಿಗೆ ಲೆಕ್ಕ ಕೊಡಲಿ ಎಂದು ಸವಾಲು ಹಾಕಿದರು.

ಐತಿಹಾಸಿಕ ಹಿನ್ನೆಲೆಯುಳ್ಳ ಬಳ್ಳಾರಿ ಜಿಲ್ಲೆ ಸಾಕಷ್ಟು ನೈಸರ್ಗಿಕ ಸಂಪನ್ಮೂಲ ಹೊಂದಿದೆ. ಆದರೆ ಈ ಸಂಪನ್ಮೂಲವನ್ನೂ ರಾಜ್ಯ ಸರಕಾರ ಸರಿಯಾಗಿ ಬಳಸಿಕೊಂಡಿಲ್ಲ. ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಬಳ್ಳಾರಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿ ಹಿಂದುಳಿದ ಪ್ರದೇಶದ ಸಾಲಿನಲ್ಲಿ ಸೇರಿಸಿದೆ ಎಂದು ಪ್ರಧಾನಿ ಆರೋಪಿಸಿದರು.

ವಿಶ್ವದ ಗಮನ ಸೆಳೆದ ಇತಿಹಾಸ ಪ್ರಸಿದ್ಧ ಹಂಪಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಸರಕಾರ ಆ ಕೆಲಸ ಮಾಡಿಲ್ಲ. ಆದರೆ ಕೇಂದ್ರ ಸರಕಾರ ಹಂಪಿಯ ಕಲ್ಲಿನ ರಥವನ್ನು 50 ರೂ. ನೋಟಿನಲ್ಲಿ ಮುದ್ರಿಸಲು ಕ್ರಮ ಕೈಗೊಳ್ಳುವ ಮೂಲಕ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯ ಮಾಡಿದೆ ಎಂದರು. 

ಮೇ.12 ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲದ ಚಿಹ್ನೆಗೆ ಮತ ಚಲಾಯಿಸುವ ಮೂಲಕ ಪೈಸೆ, ಪೈಸೆ ಲೆಕ್ಕವನ್ನು ಚುಕ್ತಾ ಮಾಡಬೇಕಾಗಿದೆ ಎಂದು ಲೇವಡಿ ಮಾಡಿದರು. ಜಿಲ್ಲೆಯಲ್ಲಿ ತುಂಗಭದ್ರಾ ನದಿ, ಜಲಾಶಯವಿದೆ. ಅತ್ಯಂತ ಹೇರಳವಾಗಿ ನೈಸರ್ಗಿಕ ಸಂಪನ್ಮೂಲವಿದೆ. ಆದರೆ, ಕಾಂಗ್ರೆಸ್‌ ಕೇವಲ ರಾಜಕಾರಣ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಪರ ಚಿಂತನೆ ನಡೆಸಿಲ್ಲ. ಕಳೆದ ಐದು ವರ್ಷದ ಅವಧಿಯಲ್ಲಿ ಒಂದೇ ಒಂದು ಮೈನಿಂಗ್‌ ಪಾಲಿಸಿ ಜಾರಿಗೆ ತರದೆ ಸಮಯವನ್ನೆಲ್ಲ ಹಾಳು ಮಾಡಿದೆ ಎಂದು ಆರೋಪಿಸಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾಗಾಂಧಿ ಸ್ಪರ್ಧಿಸಿದ್ದಾಗ ಕ್ಷೇತ್ರಕ್ಕೆ 3 ಸಾವಿರ ಕೋಟಿ ರೂ. ಪ್ಯಾಕೇಜ್‌ ನೀಡಿದ್ದರು. ಆದರೆ ಗೆಲುವು ಸಾಧಿಸಿದ ನಂತರ ರಾಜೀನಾಮೆ ನೀಡಿ ಕ್ಷೇತ್ರ ಬಿಟ್ಟರು. ಅವರ ಹಿಂದೆಯೇ ಪ್ಯಾಕೇಜ್‌ ಸಹ ಹೋಯಿತು. ಇದು ಕಾಂಗ್ರೆಸ್ಸಿನ ಮನೋಧರ್ಮ. ಮತದಾರರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಇಲ್ಲಿರುವ ತುಂಗಭದ್ರಾ ನದಿ, ಜಲಾಶಯದ ಲಾಭ ಪಡೆಯುವಲ್ಲೂ ಸರ್ಕಾರ ವಿಫಲವಾಗಿದೆ. ಅದರಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯಲು ಕೂಡ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಅಲ್ಲಿ ಕೆರೆ, ಚೆಕ್‌ಡ್ಯಾಮ್‌, ಜಲಾಶಯಗಳಲ್ಲಿ ಸಂಗ್ರಹವಾಗಿದ್ದ ಹೂಳನ್ನು ತೆಗೆದು, ಕುಡಿಯಲು, ಹಾಗೂ ಕೃಷಿಕಾರ್ಯಕ್ಕಾಗಿ ಸಮರ್ಪಕವಾಗಿ ನೀರು ಒದಗಿಸಲಾಗುತ್ತಿದೆ. ಇದಕ್ಕಾಗಿ ಅಲ್ಲಿನ ಸರ್ಕಾರ 6 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಇದಕ್ಕಾಗಿ ಅಲ್ಲಿ ಜನಾಂದೋಲನವೇ ನಡೆದಿತ್ತು. ಸರಕಾರಕ್ಕೆ ಜನ ಸಹಕಾರ ನೀಡಿದ್ದರು. ಇದೀಗ ಅಲ್ಲಿನ ಜನ ಅದರ ಲಾಭ ಪಡೆಯುತ್ತಿದ್ದಾರೆ. ಇದನ್ನು ನೋಡಿಯಾದ್ರೂ, ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜಲಾಶಯದಲ್ಲಿನ ಹೂಳು ತೆಗೆಯಲು ಮುಂದಾಗಬೇಕಿತ್ತು ಎಂದರು.

ಕಾರ್ಯಕ್ರಮದಲ್ಲಿ ಸಂಸದ ಬಿ.ಶ್ರೀರಾಮುಲು, ಬಳ್ಳಾರಿ ಜಿಲ್ಲೆ 8 ಕ್ಷೇತ್ರಗಳ ಅಭ್ಯರ್ಥಿಗಳಾದ ಜಿ.ಸೋಮಶೇಖರರೆಡ್ಡಿ, ಸಣ್ಣ ಫಕ್ಕೀರಪ್ಪ, ಟಿ.ಎಚ್‌. ಸುರೇಶ್‌ಬಾಬು, ಡಿ.ರಾಘವೇಂದ್ರ, ಎಂ.ಎಸ್‌. ಸೋಮಲಿಂಗಪ್ಪ, ಎಚ್‌.ಆರ್‌. ಗವಿಯಪ್ಪ, ನೇಮಿರಾಜ್‌ ನಾಯ್ಕ, ಎನ್‌.ವೈ. ಗೋಪಾಲಕೃಷ್ಣ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮೃತ್ಯುಂಜಯ ಜಿನಗಾ ಸೇರಿದಂತೆ ಇನ್ನಿತರರಿದ್ದರು. 

ಮೋದಿ ನಾಮ ಸ್ಮರಿಸಿದ ಕಾರ್ಯಕರ್ತರು
ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೋದಿ ಭಾಷಣದುದ್ದಕ್ಕೂ ಮೋದಿ… ಮೋದಿ.. ಎಂಬ ಘೋಷಣೆಗಳು ಕೇಳಿ ಬಂದವು. ವೇದಿಕೆ ಮೇಲಿದ್ದ ಸಂಸದ ಬಿ.ಶ್ರೀರಾಮುಲು ಕೈ ಸನ್ನೆಯ ಮೂಲಕ ಕಾರ್ಯಕರ್ತರನ್ನು ಮೋದಿ ಪರ ಘೋಷಣೆ ಕೂಗುವಂತೆ ಮತ್ತಷ್ಟು ಪ್ರೇರೇಪಿಸಿದರು.

ಗಜಮಾಲೆಯಿಂದ ಸನ್ಮಾನ
ಪ್ರಧಾನಿ ನರೇಂದ್ರ ಮೋದಿಯವರು ವೇದಿಕೆಗೆ ಆಗಮಿಸುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಬೃಹತ್‌ ಗಾತ್ರದ ಗಜಮಾಲೆ ಹಾಕಿ ಗೌರವಿಸಿದರು. ಇವರೊಂದಿಗೆ ನಗರ ಕ್ಷೇತ್ರದ ಅಭ್ಯರ್ಥಿ ಜಿ.ಸೋಮಶೇಖರರೆಡ್ಡಿ ಹನುಮನ ವಿಗ್ರಹ ಮತ್ತು ರೈತರು ಉಳುವೆ ಮಾಡಲು ಬಳಸುವ ನೇಗಿಲನ್ನು ಉಡುಗೊರೆಯಾಗಿ ನೀಡಿ, ಶಾಲುಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿದರು. 

ಬಿಸಿಲಿಗೆ ಸುಸ್ತಾದ ಭದ್ರತಾ ಪಡೆ 
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಪೊಲೀಸ್‌, ಗೃಹರಕ್ಷಕ, ಸಿಆರ್‌ಪಿಎಫ್‌ ಪೇದೆಗಳನ್ನು ನಿಯೋಜಿಸಿ, ಭಾರಿ ಭದ್ರತೆ ಒದಗಿಸಿತ್ತು. ಆದರೆ, ಬೆಳಗ್ಗೆಯಿಂದ ಬಿಸಿಲಲ್ಲಿ ನಿಂತು ಭದ್ರತೆ ಒದಗಿಸಿದ್ದ ಸಿಬ್ಬಂದಿಗಳು ಮೋದಿಯವರು ಬಂದು
ಹೋಗುವುದರೊಳಗಾಗಿ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದು, ಬ್ಯಾನರ್‌ ಮತ್ತು ಮರದ ನೆರಳಿನ ಮೊರೆ ಹೋದರು.

ಮೋದಿ ಕನ್ನಡ ಮಾತು…
ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ “ಬಳ್ಳಾರಿ ಮಹಾಜನತೆಗೆ ನನ್ನ ನಮಸ್ಕಾರಗಳು ಎನ್ನುತ್ತಿದ್ದಂತೆ ಜನರ ಹರ್ಷೋದ್ಘಾರ ಮುಗುಲು ಮುಟ್ಟಿತ್ತು. ನಂತರ ಮೋದಿ ಅವರು ಹಂಪಿಯ ವಿರೂಪಾಕ್ಷೇಶ್ವರ, ಹಜಾರರಾಮ, ಉಗ್ರನರಸಿಂಹ ಸ್ವಾಮಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು. ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯ, ರಾಮಭಕ್ತ ಹನುಮ ಜನ್ಮಸ್ಥಾನ, ಪುರಂದರದಾಸ, ಕನಕದಾಸರ ಪಾದ ಸ್ಪರ್ಶವಾದ ಹಾಗೂ ಹಕ್ಕಬುಕ್ಕರು ಓಡಾಡಿದ ಈ ನೆಲಕ್ಕೆ ಹಾಗೂ ಎಲ್ಲ ಮಹಾತ್ಮರಿಗೂ ನನ್ನ ನಮಸ್ಕಾರಗಳು. ಎಂದು ಭಾಷಣದಲ್ಲಿ ಮಹಾತ್ಮರನ್ನು ಸ್ಮರಿಸಿ ಸಭೆಯಲ್ಲಿ ನೆರೆದಿದ್ದ ಜನರ ಉತ್ಸಾಹ ಇಮ್ಮಡಿಗೊಳಿಸಿದರು.

ಕಾರ್ಯಕ್ರಮದಲ್ಲಿ ಮೋದಿ ಮುಖವಾಡ ಧರಿಸಿಕೊಂಡಿದ್ದ ಯುವಕನೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಂಡು ಗಮನ ಸೆಳೆದನು.

ಕಾರ್ಯಕ್ರಮದಲ್ಲಿ ಹೆಚ್ಚಿದ ಗಾಂಧಿ ಟೋಪಿಗಳ ಕಲರವ ಮಧ್ಯಾಹ್ನ 2.50ಕ್ಕೆ ವೇದಿಕೆ ಆಗಮನ, 3.30ಕ್ಕೆ ಪೂರ್ಣಗೊಳಿಸಿದ ಭಾಷಣ 

ಬಾನೆತ್ತರಕ್ಕೆ ಹಾರುತ್ತಿದ್ದ ಹೆಲಿಕ್ಯಾಪ್ಟರ್‌ ನೋಡಲು ಮುಗಿಬಿದ್ದ ಜನರು. ಪಕ್ಕದ ಮೇಲ್ಸೇತುವೆ ಮೇಲೂ ನಿಂತು ಕಾರ್ಯಕ್ರಮ ವೀಕ್ಷಿಸಿದ ಜನರು.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.