ದಾಖಲೆ ಪ್ರಮಾಣದ ಮದ್ಯ ಮಾರಾಟ
Team Udayavani, May 7, 2020, 4:36 PM IST
ಸಾಂದರ್ಭಿಕ ಚಿತ್ರ
ಹರಿಹರ: ಹೆಚ್ಚಿನ ದರ ವಸೂಲಿ, ರಶೀದಿ ನೀಡದಿರುವುದು, ಕನಿಷ್ಠ ಮಿತಿ ಮೀರಿ ಬೇಕಾದವರಿಗೆ ಬಾಕ್ಸ್ಗಟ್ಟಲೆ ಮದ್ಯ ಮಾರಾಟ ಮಾಡುವ ಆರೋಪದ ಮಧ್ಯೆ ಮದ್ಯದ ವ್ಯಾಪಾರ ನಗರದಲ್ಲಿ ಎರಡನೇ ದಿನವಾದ ಮಂಗಳವಾರ ನಡೆಯಿತು.
ದಾವಣಗೆರೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದ ಕಾರಣ ಅಲ್ಲಿನ ಹಲವಾರು ಜನರು ಕದ್ದು, ಮುಚ್ಚಿ ಬೈಕ್, ಕಾರುಗಳಲ್ಲಿ ಬಂದು ಮದ್ಯ ಖರೀದಿಸಿದರು. ಸಂಜೆ 6 ಗಂಟೆಯಾಗುತ್ತಿದ್ದಂತೆ ಪೊಲೀಸರು ಮದ್ಯದಂಗಡಿಗಳ ಮುಂದೆ ಸಾಲಾಗಿ ನಿಂತಿದ್ದ ಜನರನ್ನು ಚದುರಿಸಿದರು. 7 ಗಂಟೆವರೆಗೆ ಅವಕಾಶ ನೀಡಬೇಕೆಂದು ವಾಗ್ವಾದ ಮಾಡಿದವರಿಗೆ ಲಾಠಿ ರುಚಿ ತೋರಿಸಿದರು.
35 ಲಕ್ಷ ರೂ. ವ್ಯಾಪಾರ: ಸೋಮವಾರ ಒಂದೇ ದಿನ ತಾಲೂಕಿನಲ್ಲಿ ದಾಖಲೆಯ 35 ಲಕ್ಷ ರೂ.ಗೂ ಅಧಿಕ ಮದ್ಯ ಮಾರಾಟವಾಗಿದೆ. ಅನುಮತಿ ಪಡೆದ 23 ಅಂಗಡಿಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಬಹುತೇಕ ಬ್ರಾಂಡ್ ಗಳು ಖಾಲಿಯಾಗಿದ್ದವು. ಎರಡನೇ ದಿನವೂ ಭರ್ಜರಿ ವ್ಯಾಪಾರದ ನಿರೀಕ್ಷೆ ಇತ್ತಾದರೂ ಅಬಕಾರಿ ಇಲಾಖೆಯ ಸರ್ವರ್ ಡೌನ್ ಆಗಿ ವ್ಯಾಪಾರಿಗಳಿಗೆ ಮದ್ಯ ಸರಬರಾಜು ಮಾಡುವಲ್ಲಿ ವ್ಯತ್ಯಯವಾಯಿತು. ವ್ಯಾಪಾರಿಗಳು ಬ್ಯಾಂಕಿನಲ್ಲಿ ಹಣ ಪಾವತಿಸಿ ಆನ್ ಲೈನ್ನಲ್ಲೇ ಇಂಡೆಂಟ್ ದಾಖಲಿಸಿ, ನಂತರ ಅಬಕಾರಿ ಡಿಪೋದಲ್ಲಿ ಬೇಕಾದ ಸ್ಟಾಕ್ ಪಡೆಯಬೇಕಾಗಿತ್ತು. ಸರ್ವರ್ ಸಮಸ್ಯೆಯಿಂದ ಇಂಡೆಂಟ್ ಹಾಕಲಾಗದೆ ವ್ಯಾಪಾರಿಗಳು ಪರದಾಡಿದರು. ಬೆಳಿಗ್ಗೆ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಸ್ಟಾಕ್ ಸರಬರಾಜಾಯಿತು. ನಂತರ ಕೈಕೊಟ್ಟ ಸರ್ವರ್ ಸಂಜೆ 4ಕ್ಕೆ ಸರಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.