Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Team Udayavani, Nov 16, 2024, 12:26 PM IST
ಸಿರುಗುಪ್ಪ: ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಶನಿವಾರ ಮುಂಜಾನೆ ಆವರಿಸಿಕೊಂಡಿದ್ದ ಮಂಜಿನಿಂದ ಕೆಲವೊತ್ತು ವಾಹನ ಸವಾರರು ಪರದಾಡುವಂತಾಯಿತು.
ಮಂಜು ಮುಸುಕಿದ ಕಾರಣ ಮಂದ ಬೆಳಕು ಆವರಿಸಿತು. ಸವಾರರು ಹೆಡ್‌ಲೈಟ್ ಹಾಕಿಕೊಂಡು ಚಲಾಯಿಸಿದರು. ಇದರಿಂದ ಬಳ್ಳಾರಿ – ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿತು. ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿರುವ ಕಾರಣ ನಿಗದಿತ ಸಮಯಕ್ಕೆ ಬೆಳೆಗಳಿಗೆ ಔಷಧಿ ಸಿಂಪಡಣೆ ಸಾಧ್ಯವಾಗುತ್ತಿಲ್ಲ. ಇದರಿಂದ ರೋಗ ಮತ್ತಷ್ಟು ಉಲ್ಬಣವಾಗಬಹುದೆಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ದಟ್ಟವಾದ ಮಂಜಿನ ಕಾರಣದಿಂದ ಭತ್ತ, ಹೂವಿನ ಬೆಳೆ ಕಟಾವಿಗೆ ತೊಂದರೆ ಆಗುತ್ತಿದೆ. ಕೆಲವೊಂದು ಬೆಳೆಗಳಿಗೆ ರೋಗಬಾಧೆಯ ಆತಂಕ ಮನೆ ಮಾಡಿದೆ. ಪ್ರಕೃತಿಯ ನರ್ತನಕ್ಕೆ ಕಳೆದ ಮೂರು ದಿನದಿಂದ ದಟ್ಟ ಮಂಜು ಆವರಿಸಿದ ಪರಿಣಾಮ ಜನರ ಹಾಗೂ ವಾಹನ ಸವಾರರ ಪೀಕಲಾಟಕ್ಕೆ ನಾಂದಿಯಾಯಿತು. ಈಗಾಗಲೇ ಚಳಿ ಹೆಚ್ಚಾಗುತ್ತಿದ್ದು, ಇದರ ನಡುವೆ ದಟ್ಟ ಮಂಜಿನಿಂದ ಮತ್ತಷ್ಟು ಥಂಡಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತಾಲೂಕಿನೆಲ್ಲೆಡೆ ಮಂಜು ಬಿದ್ದಿದ್ದು, ಇದೇನಪ್ಪಾದಾರಿ ಕಾಣದಂತಾಗಿದೆ ಎಂಬ ಪ್ರಸಂಗ ಸೃಷ್ಟಿಯಾಗಿತ್ತು.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಹೆಡ್‌ಲೈಟ್ಹಾಕಿಕೊಂಡು, ವಾಹನಗಳನ್ನು ಜಾಗ್ರತೆಯಿಂದ ಓಡಿಸುತ್ತಿರುವುದುಕಂಡು ಬಂತು. ಮತ್ತು ಮಂಜಿನ ವಾತಾವರಣ ಮಕ್ಕಳ ಮತ್ತು ಜನರನ್ನು ಆಕರ್ಷಣೆಗೆ ಕಾರಣವಾಗಿದೆ. ಕಳೆದ ಮೂರು ದಿನಗಳಿಂದ ಬೆಳಗಿನ ಜಾವ ಆವರಿಸುತ್ತಿರುವ ಮಂಜು ಮಲೆನಾಡನ್ನು ನೆನಪಿಸುವಂತಿದೆ.
ಇದನ್ನೂ ಓದಿ: Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು
Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ
ಇದು 0 ಪರ್ಸೆಂಟ್ ಅಭಿವೃದ್ಧಿ,100 ಪರ್ಸೆಂಟ್ ಭ್ರಷ್ಟಾಚಾರದ ಸರಕಾರ: ಸುನಿಲ್
ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ
Belagavi, ಮಂಡ್ಯ, ಶಿವಮೊಗ್ಗ ಸೇರಿ 6 ಕಡೆ ಕ್ಯಾನ್ಸರ್ ಆಸ್ಪತ್ರೆ: ಶರಣಪ್ರಕಾಶ್ ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.