ಭಾರೀ ಮಳೆ-ಗಾಳಿಗೆ 5 ಮನೆ ಜಖಂ
•ನಾಲ್ಕು ಜಾನುವಾರು ಸಾವು•ನೊಂದ ಕುಟುಂಬಗಳಿಂದ ಪುನರ್ವಸತಿ ಕಲ್ಪಿಸಲು ಮನವಿ
Team Udayavani, May 21, 2019, 7:32 AM IST
ಕೂಡ್ಲಿಗಿ: ತಾಲೂಕಿನ ಹೊಸಹಳ್ಳಿ ಮತ್ತು ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿರುಗಾಳಿ ಪರಿಣಾಮ 5 ಮನೆಗಳ ಜಖಂಗೊಂಡ ಘಟನೆ ರವಿವಾರ ತಡರಾತ್ರಿ ನಡೆದಿದೆ.
ತಾಲೂಕಿನ ಗುಡೇಕೋಟೆ ಹೋಬಳಿಯ ಗಂಡಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ನುಂಕನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಗೆ ಗ್ರಾಮದ ಗ್ರಾಮದ ಕಾಂಚನಮ್ಮ, ಭಾಗ್ಯಮ್ಮ, ರತ್ನಮ್ಮ, ಹೇಮಾವತಿ, ಸಾಕಮ್ಮ ಎಂಬುವರ 5 ವಾಸದ ಮನೆಗಳು ಜಖಂ ಆಗಿದ್ದು, ಮನೆ ಕಳೆದುಕೊಂಡ ರೈತ ಕುಟುಂಬಗಳು ಬೀದಿಗೆ ಬಿದ್ದಿದ್ದು, ಕಂದಾಯ ಇಲಾಖೆ ಇವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ನೊಂದ ಕುಟುಂಬಗಳು ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ತಡರಾತ್ರಿ ಗುಡುಗು ಸಹಿತ ಬಿರುಗಾಳಿ ಮಳೆ ಆರಂಭವಾಗಿದ್ದನ್ನು ತಿಳಿದು ತಾಲೂಕಿನ ಪಿಚ್ಚಾರಹಟ್ಟಿ ಗ್ರಾಮದಲ್ಲಿ ಇಮಾಮ್ ಸಾಬ್ ಮರದಡಿ ಕಟ್ಟಿದ್ದ ಎತ್ತುಗಳನ್ನು ಮನೆಯೊಳಗೆ ಕಟ್ಟಲು ಯತ್ನಿಸುತ್ತಿರುವಾಗ ಮನೆಯ ಒಡೆಯನನ್ನು ಕೊಂಬಿನಿಂದ ತಿವಿಯುವ ಮೂಲಕ ದೂರ ತಳ್ಳಿದೆ. ಮನೆ ಮಾಲೀಕ ಅಲ್ಲಿಂದ ಮನೆಯೊಳಗೆ ಹೋಗುವಷ್ಟರಲ್ಲಿ ಎತ್ತುಗಳಿಗೆ ಸಿಡಿಲು ಬಡಿದಿದೆ. ಮಾಲೀಕನ ಕಣ್ಣೆದುರಿಗೆ ಎರಡು ಎತ್ತು ಸಾವನ್ನಪ್ಪಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
“ಕೈ’ ಬಿಡದ ಸಂಡೂರು ಮತದಾರ; ಬಿಜೆಪಿಗೆ ಜಯದ ಕಾತರ: 13 ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.