ಹರಪನಹಳ್ಳಿ: ಭಾರಿ ಮಳೆಗೆ ಪ್ರಮುಖ ರಸ್ತೆಗಳು ಜಲಾವೃತ
Team Udayavani, May 19, 2020, 1:51 PM IST
ಹರಪನಹಳ್ಳಿ: ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಟ್ಟಣ ಸೇರಿದಂತೆ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಕೆಲವೆಡೆ ಮನೆ ಮೇಲ್ಛಾವಣೆ ಹಾರಿ ಹೋಗಿದ್ದು ಅರಸೀಕೆರೆ ಹೋಬಳಿಯ ಗಡಿಗುಡಾಳು ಗ್ರಾಮದಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ. ಸೋಮವಾರ ಬೆಳಗ್ಗೆ 4 ಗಂಟೆ ಸಮಯದಲ್ಲಿ ಶುರುವಾದ ಮಳೆ ಸತತವಾಗಿ ಮೂರು ತಾಸು ಸುರಿದೆ. ಪರಿಣಾಮ ಪಟ್ಟಣದ ಪ್ರಮುಖ ರಸ್ತೆ, ಚರಂಡಿಗಳು, ಕೋಟೆ ಹನುಮಪ್ಪ ದೇವಸ್ಥಾನ, ರೇಣುಕಾ ಕಲ್ಯಾಣ ಮಂಟಪ ರಸ್ತೆ, ಕೊಟ್ಟೂರು ರಸ್ತೆ, ತೆಗ್ಗಿನಮಠ, ಬಿಎಸ್‌ಎನ್‌ಎಲ್ ಕಚೇರಿ, ದೂರದರ್ಶನ ಕೇಂದ್ರ, ಸಾರ್ವಜನಿಕ ಗ್ರಂಥಾಲಯ, ಡಿವೈಎಸ್‌ಪಿ ಕಚೇರಿ, ಕಾರ್ ಸ್ಟ್ಯಾಂಡ್, ಬಸ್ ನಿಲ್ದಾಣ, ಇನ್ನಿತರ ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡವು.
ಪಟ್ಟಣದ ವಾಲ್ಮೀಕಿ ನಗರ, ಕೊಟ್ಟೂರು ಆಶ್ರಯ ಕಾಲೋನಿ, ಆಂಜನೇಯ ಬಡಾವಣೆ, ಗೋಕರ್ಣೇಶ್ವರ ದೇವಸ್ಥಾನದ ಆವರಣದೊಳಗೆ ನೀರು ನುಗ್ಗಿತು. ಆದರೆ ಯಾವುದೇ ಹಾನಿ
ಸಂಭವಿಸಿಲ್ಲ. ಸತತ 3 ಗಂಟೆಗೆಗೂ ಹೆಚ್ಚು ಸಮಯ ಮಳೆ ಬಿದ್ದ ಪರಿಣಾಮ ಪಟ್ಟಣದ ಹೊಂಡ, ಗುಂಡಿ, ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಂತುಕೊಂಡಿತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ನಗರದ ಎಲ್ಲ ರಸ್ತೆಗಳಲ್ಲಿ ನೀರು ಹರಿಯುವ ದೃಶ್ಯ ಕಂಡು ಬಂತು. ಕೆಲವು ಕಡೆಗಳಲ್ಲಿ ರಸ್ತೆಯಲ್ಲೇ ನೀರು ನಿಂತ್ತಿರುವುದರಿಂದ ಸಂಚಾರಕ್ಕೆ ತೊಡಕು ಉಂಟು ಮಾಡಿತು. ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಗಾಳಿಗೆ ಕೆಲವು ಕಡೆಗಳಲ್ಲಿ ಮನೆ ಮೇಲ್ಛಾವಣೆ ಹಾರಿ ಹೋಗಿವೆ. ಅರಸೀಕೆರೆ ಹೋಬಳಿಯ ಗಡಿಗುಡಾಳು ಗ್ರಾಮದಲ್ಲಿ 15 ಮನೆಗಳಿಗೆ
ನೀರು ನುಗ್ಗಿದೆ. ಹರಪನಹಳ್ಳಿ ಕಸಾಬಾ-84.4 ಮೀ.ಮೀ, ಅರಸೀಕೇರಿ ಹೋಬಳಿ-70.2,. ಚೀಗಟೇರಿ ಹೋಬಳಿ-30, ಹಿರೆಮೇಗಳಗೇರಿ-20, ಉಚ್ಚಂಗಿದುರ್ಗ-33.8, , ತೆಲಿಗಿ 18.2, ಹಲವಾಗಲು 48.2 ಮೀ.ಮೀ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.