ಕೆರೆ ಭರ್ತಿಗಾಗಿ ಒತ್ತಾಯಿಸಿ ಹೆದ್ದಾರಿ ಬಂದ್
Team Udayavani, Jan 22, 2020, 2:54 PM IST
ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ಕಾರ್ಖಾನೆ ನೀರು ಪಡೆಯುತ್ತಿರುವ ಜೆಎಸ್‌ಡಬ್ಲ್ಯೂ ಸಂಸ್ಥೆ, ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಬೈಲುವದ್ದಿಗೇರಿ ಗ್ರಾಮದ ಕೆರೆ ಭರ್ತಿ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಗ್ರಾಮದ ಕೆರೆ ಪಕ್ಕದಲ್ಲಿ ಜಮಾವಣೆಗೊಂಡ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ತಮ್ಮೆಲ್ಲ ದನ-ಕರು-ಕುರಿ-ಮೇಕೆಗಳನ್ನು ರಸ್ತೆಯಲ್ಲಿ ಬಿಟ್ಟು, ಪ್ರತಿಭಟನೆ ನಡೆಸಿದರು. ಬೈಲುವದ್ದಿಗೇರಿ ಕೆರೆ ಪುರಾತನ ಕಾಲದಲ್ಲಿ ನಿರ್ಮಿಸಿರುವುದು. ಸಾರ್ವಜನಿಕರ ಕುಡಿಯುವ ನೀರಿನ ಸಲುವಾಗಿ ಹಾಗೂ ಜಾನುವಾರುಗಳಿಗಾಗಿ 35 ಎಕರೆಯಲ್ಲಿ ಕೆರೆ ನಿರ್ಮಿಸಲಾಗಿದೆ. ಮಳೆ ಅಭಾವದಿಂದ ಕೆರೆ ಬತ್ತಿ ಹೋಗಿದೆ. ಹಾಗಾಗಿ ಜಿಂದಾಲ್ ಸಂಸ್ಥೆಯ ನೀರಿನ ಪೈಪ್ ಲೈನ್ ಗ್ರಾಮದಿಂದ ಹಾದು ಹೋಗಿದೆ. ಆ ಪೈಪ್‌ಲೈನ್‌ನಿಂದ ವರ್ಷಕ್ಕೆ ಎರಡು ಬಾರಿ ಕೆರೆ ಭರ್ತಿ ಮಾಡಿಸಬೇಕು ಎಂದು ಆಗ್ರಹಿಸಿದರು.
ಬೇಸಿಗೆ ಕಾಲದಲ್ಲಿ ಜನರು ನೀರಿಗಾಗಿ ತತ್ತರಿಸಿ ಹೋಗಿದ್ದಾರೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಒಂದು ವೇಳೆ ಬೇಡಿಕೆ ಈಡೇರದಿದ್ದರೇ ಪೈಪ್‌ಲೈನ್‌ನಿಂದ ಸ್ವತಃ ತಾವೇ ಕೆರೆಗೆ ನೀರು ಹರಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಬೈಲವದ್ದಗೇರಿ ಫಣೀಂದ್ರಗೌಡ, ಅಪ್ಪಣಹಳ್ಳಿ ಗಂಗಾಧರಪ್ಪ, ಹನುವಾಳ ವಿಶ್ವನಾಥ, ಬಸವರಾಜ, ಯತ್ನಟ್ಟಿ ಯಂಕಪ್ಪ, ಕಪಗಲ್ಲ ವೀರೇಶಪ್ಪ, ಮೂಲಿಮನಿ ಗೋವಿಂದ ರೆಡ್ಡಿ, ಕೋರಿ ಫಕೀರಪ್ಪ, ಮೂಕಪ್ಪ, ಕಾಕುಬಾಳ ಜಡಿಯಪ್ಪ, ಒಳಚಿ ಜಡಿಯಪ್ಪ, ಹೊನ್ನೂರಪ್ಪ ಇನ್ನಿತರರಿದ್ದರು. ಬೈಲುವದ್ದಗೇರಿ, ಧರ್ಮಸಾಗರ, ಗುಂಡ್ಲವದ್ದಗೇರಿ ಹಾಗೂ ಕಾಕುಬಾಳು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.