Hosapete: ಕರಡಿ ಕೊರಳಿಗೆ ಕಾಲರ್ ಐಡಿ ಕ್ಯಾಮೆರಾ
ಕರಡಿಗಳ ದಾಳಿ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ.
Team Udayavani, Nov 8, 2023, 6:01 PM IST
ಹೊಸಪೇಟೆ: ಮಾನವ-ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ ಇಲಾಖೆ, ಕರಡಿಗಳ ಚಲನವಲನ ನಿಗಾವಹಿಸಲು ಕರಡಿಗಳ ಕೊರಳಿಗೆ ಕಾಲರ್ ಐಡಿ ಕ್ಯಾಮೆರಾ ಟ್ರಾಪ್ ಅಳವಡಿಸಿದೆ. ಮಳೆ ಕೊರತೆಯಿಂದ ಕಾಡಿನಲ್ಲಿ ಆಹಾರ-ನೀರು ಸಿಗದೇ ನಾಡಿನತ್ತ ಧಾವಿಸುತ್ತಿರುವ ಕರಡಿಗಳನ್ನು ಮರಳಿ ಕಾಡಿಗೆ ಕಳಿಸಲು ಇಲಾಖೆ ಈ ಕ್ರಮ ಕೈಗೊಂಡಿದೆ.
ದರೋಜಿ ಕರಡಿಧಾಮದಲ್ಲಿ 5 ಮತ್ತು ಗುಡೇಕೋಟೆ ಕರಡಿಧಾಮದಲ್ಲಿ 5 ಸೇರಿ ಜಿಲ್ಲೆಯಲ್ಲಿ ಒಟ್ಟು 10 ಕರಡಿಗಳಿಗೆ ಕಾಲರ್ ಐಡಿ
ಕ್ಯಾಮೆರಾ ಟ್ರ್ಯಾಪ್ ಅಳವಡಿಸಿದ್ದು, ಈ ಕರಡಿಗಳ ಮೇಲೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕಾಡು ಪ್ರಾಣಿಗಳು ಜನ ಮತ್ತು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದು ಆತಂಕ ಮೂಡಿಸಿದೆ. ಹೀಗಾಗಿ ಕರಡಿಗಳ ಚಲನವಲನ ತಿಳಿದು ಅವುಗಳು ಜನವಸತಿ ಪ್ರದೇಶಗಳತ್ತ ಬಂದಾಗ ಮರಳಿ ಕಾಡು ಸೇರಿಸಲು ಈ ಕಾಲರ್
ಐಡಿ ಕ್ಯಾಮೆರಾ ಟ್ರ್ಯಾಪ್ ಅನುಕೂಲವಾಗಿದೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಹೊಂದಿಕೊಂಡಿರುವ ದರೋಜಿ ಕರಡಿಧಾಮದಲ್ಲಿ ಸುಮಾರು 80ರಿಂದ 120 ಕರಡಿಗಳು ವಾಸಿಸುತ್ತಿವೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮದಲ್ಲಿ ಕರಡಿಗಳಿವೆ. ಈ ಎರಡೂ ಕರಡಿಧಾಮಗಳ ಸುತ್ತಮುತ್ತ ಹೆಚ್ಚಿನ ಗ್ರಾಮಗಳಿವೆ.
ಹಾಗಾಗಿ ಕರಡಿಗಳ ದಾಳಿ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ಕಳೆದ ತಿಂಗಳು ಹರಪನಹಳ್ಳಿಯಲ್ಲಿ ಜೋಡಿ ಕರಡಿಗಳು ರೈತನ ಮೇಲೆ ದಾಳಿ ಮಾಡಿದ್ದವು. ಕೂಡ್ಲಿಗಿಯಲ್ಲಿ ಕೂಡ ಹಲವಾರು ಪ್ರಕರಣಗಳು ವರದಿಯಾಗಿವೆ. ನ.4ರಂದು ಮನೆ ಬಳಿ ಬಂದು ಮಹಿಳೆ ಮೇಲೆ ಕರಡಿ ದಾಳಿ ಮಾಡಿದ ನಂತರ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇಂಥ ಪ್ರಕರಣಗಳ ಕುರಿತು ಮುನ್ನೆಚ್ಚರಿಕೆ ವಹಿಸಿ ತಡೆಯುವಲ್ಲಿ ಈ ಕ್ಯಾಮೆರಾ ಟ್ರ್ಯಾಪ್ ಸಹಕಾರಿಯಾಗಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಕಾಲರ್ ಐಡಿ ಕ್ಯಾಮೆರಾ ಟ್ರ್ಯಾಪ್ ವಿಶೇಷ ಜನವಸತಿ ಪ್ರದೇಶಗಳು, ರೈತರ ಹೊಲಗಳಲ್ಲಿ ಮತ್ತು ಕಾಡು ಬಿಟ್ಟು ಹೊರಗಡೆ ಕಾಣಿಸಿಕೊಳ್ಳುವ ಜತೆಗೆ ಬೋನ್‌ಗಳಲ್ಲಿ ಸೆರೆಯಾದ ಕರಡಿಗಳಿಗೆ ಈ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ಇದರಲ್ಲಿ ಜಿಪಿಎಸ್
ಅಳವಡಿಸಲಾಗಿದ್ದು, ಕರಡಿಗಳ ಸ್ಥಳ ಇರುವ ಮಾಹಿತಿ ಗೊತ್ತಾಗುತ್ತದೆ. ಕ್ಯಾಮೆರಾದಲ್ಲಿ ಕರಡಿಗಳ ಚಲನವಲನ, ವಾಸಸ್ಥಳ, ಅವುಗಳು ಎಷ್ಟು ಕಿಲೋ ಮೀಟರ್ ಸಂಚರಿಸಿವೆ, ಎಷ್ಟು ಮರಿಗಳಿಗೆ ಜನ್ಮ ನೀಡಿವೆ ಎಂಬ ಮಾಹಿತಿ ತಿಳಿಯುತ್ತದೆ.
ಈ ಕ್ಯಾಮೆರಾಗಳಿಂದ ಕರಡಿಗಳು ಮನುಷ್ಯರ ಮೇಲೆ ದಾಳಿ ಮಾಡುವುದನ್ನು ಜಮೀನಿನಲ್ಲಿ ಬೆಳೆ ಹಾನಿ ಮಾಡುವ ಸಂಭವಗಳನ್ನು ತಡೆಯಬಹುದು. ಈ ಕರಡಿಗಳು ಕಾಡು ಬಿಟ್ಟು ಜನವಸತಿ ಪ್ರದೇಶಗಳಿಗೆ ಬಂದಾಗ ಜನರಿಗೆ ಯಾವುದೇ ತೊಂದರೆಯಾಗದಂತೆ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಪಟಾಕಿ ಸಿಡಿಸುವುದು ಸೇರಿ ಅಗತ್ಯ ಕ್ರಮ ಕೈಗೊಂಡು ಅವುಗಳನ್ನು ಮರಳಿ ಕಾಡಿನತ್ತ ಓಡಿಸಲು ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಆಂಧ್ರಕ್ಕೆ ಹೆಜ್ಜೆ ಹಾಕಿದ ಕರಡಿ
ಗುಡೇಕೋಟೆ ಕರಡಿಧಾಮದ ಕರಡಿಯೊಂದು ಆಹಾರ ಅರಸಿ ಪಾವಗಡದ ಮೂಲಕ ಆಂಧ್ರಪ್ರದೇಶದ ಪೆನುಕೊಂಡಕ್ಕೆ ಹೋಗಿದೆ. 15 ದಿನದಲ್ಲಿ ಸುಮಾರು 200 ಕಿ.ಮೀ ಸಂಚರಿಸಿರುವ ಕರಡಿಗೆ ಕಾಲರ್ ಐಡಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿದ್ದರಿಂದ ಮಾಹಿತಿ ಗೊತ್ತಾಗಿದೆ. ಇದರ ಜತೆಗೆ ದರೋಜಿ ಕರಡಿಧಾಮದಿಂದ ಗಂಡು ಕರಡಿಯೊಂದು ರಾಯಚೂರಿಗೆ ವಲಸೆ ಹೋಗಿತ್ತು. ತೀವ್ರ ಬರದ ಹಿನ್ನೆಲೆಯಲ್ಲಿ ವನ್ಯಜೀವಿಗಳು ಆಹಾರ, ನೀರು ಅರಸಿ ನಾಡಿನತ್ತ ಬರುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದರ ಜತೆಗೆ ನಾನಾ ಕಡೆಗಳಿಗೆ ವಲಸೆ ಹೋಗಿರುವುದು ಕೂಡ ಈ ಕಾಲರ್ ಐಡಿ ಕ್ಯಾಮೆರಾ ಟ್ರಾಪ್‌ನಿಂದ
ಮಾಹಿತಿ ಗೊತ್ತಾಗುತ್ತಿದೆ.
10 ಕರಡಿಗಳ ಚಲನವಲನ ತಿಳಿಯಲು ಕಾಲರ್ ಐಡಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ಇದರಿಂದ ಜನವಸತಿ ಪ್ರದೇಶಗಳತ್ತ ಬರುತ್ತಿರುವ ಮಾಹಿತಿ ಗೊತ್ತಾಗುತ್ತಿದೆ. ಇದರಿಂದ ಜನವಸತಿ ಪ್ರದೇಶಗಳಿಗೆ ಬಂದಾಗ ಯಾವುದೇ ಹಾನಿಯಾಗದಂತೆ ಕರಡಿಗಳನ್ನು ಮರಳಿ ಕಾಡಿನತ್ತ ಕಳಿಸಲು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತಿದೆ.
ಅರ್ಸಲನ್,
ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿಜಯನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.