ಹೊಸಪೇಟೆ- ಕೊಟ್ಟೂರು ಮಾರ್ಗದಲ್ಲಿರೈಲು ಆರಂಭಿಸಲು ಒತ್ತಾಯ
Team Udayavani, Jul 24, 2018, 4:12 PM IST
ಹೊಸಪೇಟೆ: ಹೊಸಪೇಟೆ-ಕೊಟ್ಟೂರು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವಂತೆ ಒತ್ತಾಯಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ರೈಲ್ವೆ ನಿಲ್ದಾಣದ ಮುಖ್ಯಸ್ಥ ಉಮರ್‌ಬಾನಿ ಅವರ ಮೂಲಕ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಅವರಿಗೆ ಮನವಿ ಸಲ್ಲಿಸಿದರು.
ಹೊಸಪೇಟೆ ಕೊಟ್ಟೂರು ಬ್ರಾಡ್‌ಗೆಜ್ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ರೈಲು ಹಾಗೂ ಹೊಸಪೇಟೆ-ಬೆಂಗಳೂರು ನಡುವೆ ಇಂಟರ್ ಸಿಟಿ ರೈಲು ಆರಂಭಿಸಬೇಕು. ಹೊಸಪೇಟೆ ರೈಲು ನಿಲ್ದಾಣದಲ್ಲಿ ರೈಲ್ವೆ ಕೋಚ್‌ಗಳ ದುರಸ್ತಿ ಕಾರ್ಯಗಾರ ಸ್ಥಾಪಿಸಬೇಕು. ನೂತನ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭಕ್ಕೆ ಅನುಕೂಲವಾಗುವಂತೆ ನಿಲ್ದಾಣದಲ್ಲಿ ಪ್ಯಾಸೆಂಜರ್ ಕೋಚ್‌ಗಳ ದುರಸ್ತಿ, ಸ್ವತ್ಛತೆ, ಹಾಗೂ ಪಿಟ್‌ಲೈನ್ ಕಾರ್ಯಗಾರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಪ್ರಸಿದ್ಧ ಯಾತ್ರಾ ಸ್ಥಳ ಹುಲಗಿಗೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಕೊಲ್ಲಾಪುರ-ಹೈದ್ರಾಬಾದ್ (ಮಣಗೂರು) (11303/304) ರೈಲು ಮುನಿರಾಬಾದ್‌ನಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಕೊಲ್ಲಾಪುರ-ತಿರುಪತಿ, ಹರಿಪ್ರಿಯ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ಹೊಸಪೇಟೆ-ಬಳ್ಳಾರಿಯಿಂದ ತಿರುಪತಿಗೆ ತೆರಳುವ ಪ್ರಯಾಣಿಕರಿಗೆ ಸದರಿ ರೈಲಿನಲ್ಲಿ ಪ್ರತ್ಯೇಕ ಹೆಚ್ಚುವರಿ ಸೀಟು (ಕೋಟಾ) ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ವಿಭಾಗೀಯ ರೈಲ್ವೆ ಸಲಹಾ ಸಮಿತಿ ಸದಸ್ಯ ಚಂದ್ರಕಾಂತ್ ಕಾಮತ್, ಪ್ರಹ್ಲಾದ ಸ್ವಾಮೀಜಿ, ಶ್ಯಾಮಪ್ಪ ಅಗೋಲಿ, ಟಿ.ಆರ್.ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಬಿ.ಜಹಂಗೀರ್, ಎಚ್.ಮಹೇಶ್, ಡಿ.ರಾಮಕೃಷ್ಣ, ಪಿ.ಪ್ರಭಾಕರ್, ರವಿಶಂಕರ ದೇವರ ಮನೆ, ಕೆ.ರಘವೇಂದ್ರ, ಇ.ಕುಮಾರಸ್ವಾಮಿ. ಇ.ಪ್ರಸಾದ್, ವೈ.ಶೇಖರ್, ಸಿದ್ದೇಶ್ ಉತ್ತಂಗಿ, ಪೀರನ್ ಸಾಬ್, ಎಲ್.ರಮೇಶ್‌ಲಮಾಣಿ, ಕುರುಳಿ ವಾಸಪ್ಪ, ಎಸ್.ಡಿ. ಏಕನಾಥ, ಜಿ.ವೀರೇಶಪ್ಪ, ಜಿ.ದೇವರೆಡ್ಡಿ, ಬಿ.ಶ್ರೀನಿವಾಸ್ ಸೇರಿದಂತೆ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.