ಸೋಂಕು ಹರಡದಂತೆ ಜಾಗೃತಿ ಅಭಿಯಾನ ನಡೆಸಿ
Team Udayavani, Jun 18, 2020, 5:45 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸಪೇಟೆ: ನಗರದಲ್ಲಿ ತ್ರೀವಗತಿಯಲ್ಲಿ ಹರುಡುತ್ತಿರುವ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ವಿಜಯನಗರ ನಾಗರೀಕ ವೇದಿಕೆ, ತಾಲೂಕು ಡಾ|| ಬಿ.ಆರ್.ಅಂಬೇಡ್ಕರ್ ಸಂಘ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ನಾಗರೀಕ ವೇದಿಕೆ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ಜಿಂದಾಲ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಂದಾಲ್ ನೌಕರರು ಹೆಚ್ಚು ಇರುವುದರಿಂದ ನಗರದಲ್ಲಿ ಭಯದ ವಾತಾವರಣ ಉಂಟಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಮನೆ ಮನೆ ಆರೋಗ್ಯ ತಪಾಸಣೆ ಹಾಗೂ ಸೋಂಕು ಪತ್ತೆ ಹಚ್ಚುವಿಕೆ ಕಾರ್ಯಕ್ಕೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.
ತಾಲೂಕು ಡಾ| ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ವೀರಸ್ವಾಮಿಯವರು ಮಾತನಾಡಿ, ಮಾಸ್ಕ್ ಧರಿಸದೇ ತಿರುಗಾಡುವ ಹಾಗೂ ಸಾಮಾಜಿಕ ಅಂತರ ಪಾಲಿಸದವರಿಗೆ ದಂಡ ವಿಧಿಸಿ, ನಗರದ ಎಲ್ಲ ವಾರ್ಡ್ಗಳಲ್ಲಿ ಸೋಂಕು ರಾಸಾಯನಿಕ ದ್ರಾವಣ ಸಿಂಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಯು. ಅಶ್ವತಪ್ಪ, ಮಾರೆಣ್ಣ, ಕೆ.ಎಫ್. ಬೇವೂರ್, ಸಿ.ಎ. ಮಲ್ಲಿಕಾರ್ಜುನ, ಎಚ್. ತಿಪ್ಪೇಸ್ವಾಮಿ, ಎಂ. ಕೃಷ್ಣಮೂರ್ತಿ, ಎಚ್.ಜಿ.ಪಾಂಡುರಂಗ, ಎಂ.ವೆಂಕಟೇಶ್, ಭೋಜರಾಜ್, ಎಸ್.ವೇಣುಗೋಪಾಲ್, ಬಿ.ಜಹಂಗೀರ್, ಎಸ್.ಕೋದಂಡಪಾಣಿ, ವೈ. ಸೋಮಣ್ಣ, ಎಂ.ಬಿ.ಗೌಡಣ್ಣನವರ್, ಎಸ್. ಎಂ. ರೇವಣ್ಣ ಇನ್ನಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.