ವಿಜಯನಗರ ವಸಂತ ವೈಭವ
ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ-ಸ್ತಬ್ಧ ಚಿತ್ರಗಳು ರಸ್ತೆಯಲ್ಲಿ ರಂಗೋಲಿಗಳ ಚಿತ್ತಾರ
Team Udayavani, Jan 10, 2020, 12:52 PM IST
ಹೊಸಪೇಟೆ: ಹಂಪಿ ಉತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಿರುವ ವಿಜಯನಗರ ವಸಂತ ವೈಭವ ಮೆರವಣಿಗೆಗೆ ಗುರುವಾರ ಸಂಜೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.
ಶ್ರೀಕೃಷ್ಣ ದೇವರಾಯನ ಪ್ರತಿಮೆ ವಾಹನ, ನಂದಿಧ್ವಜ, ಶಂಖ, ಕಹಳೆ, ಉದ್ದದ ಮನುಷ್ಯರು, ವಿಚಿತ್ರ ಮನುಷ್ಯರು, ಸುಲ್ತಾನ್ ಹೋರಿಗಳು, ಗೂಳಿ ಮತ್ತು ಕಟ್ಟಪ್ಪ, ಪಾಂಚ್ ಪಂಟರ್, ಬಣ್ಣ ಬಣ್ಣದ ಕೊಡೆ ಹಿಡಿದ ಕಲಾವಿದರು, ಡೈನಾಸರ್, ಊಸರವಲ್ಲಿ, ನಾಸಿಕ್ ಬ್ಯಾಂಡ್, ಹಗಲು ವೇಷಗಾರರು, ಮರಗಾಲು ಕಲಾವಿದರು. ಚಿತ್ರದುರ್ಗದ ಬ್ಯಾಂಡ್ ಸೆಟ್, ಗೊರವರ ಕುಣಿತ, ಸೋಮನ ಕುಣಿತ, ತೆಯ್ಯಮ್, ತಮಿಳುನಾಡು ವಾದ್ಯ, ಪುರುಲಿಯಾ, ಯಕ್ಷಗಾನ ವೇಷ, ಕಾರ್ಟೂನ್ಸ್, ಪ್ರಾಣಿ ಪಕ್ಷಿಗಳು, ಮರಾಠಾ ಸೈನಿಕರು, ಸಾಮಾನ್ಯ ಸೈನಿಕರು, ಮಂಗಲ್ ಪಾಂಡೆ ಸೈನಿಕರು, ಬಾಹುಬಲಿ ಸೈನಿಕರು, ಮಿಲಿಟಿರಿ ಸೈನಿಕರು, ಜೋಕರ್, ಶಾಲಾ ಬ್ಯಾಂಡ್, ಹೊನ್ನಾವರ ಬ್ಯಾಂಡ್, ಡೊಳ್ಳು ಕುಣಿತ, ಜಗ್ಗಳಿಕೆ ಮೇಳ, ತಾಷಾರಾಮ್‌ಡೋಲು, ಪಟದ ಕುಣಿತ, ಲಂಬಾಣಿ ಕುಣಿತ, ಕಂಸಾಳೆ, ವೀರಗಾಸೆ, ಅಲಾಯಿ ಹೆಜ್ಜೆ ಮೇಳ, ದೊಡ್ಡ ಮೋಹನಿಯಾಟಂ, ಧೋಲ್ ಚಲೋಮ್, ಕೊಂಚಾಡಿ ಚೆಂಡೆ, ಅರ್ದನಾರೇಶ್ವರ, ವೀರಭದ್ರ ಕುಣಿತ, ಕೀಲುಕುದುರೆ, ಶಿಲ್ಪಾಗೊಂಬೆ ಬಳಗ, ಚಿಲಿಪಿಲಿ ಬೊಂಬೆ, ವಂಶಿಕಾ ಗೊಂಬೆ ಬಳಗ, ಕಿಂಗ್ ಕೋಂಗ್, ಕೇರಳದ ದೈವ ವೇಷ, ಪೂಜಾ ಕುಣಿತ, ಕುಂದಾಪುರ ಡೊಲು, ಹುಲಿವೇಷ, ಬೆಂಡರಕುಣಿತ, ಕೇರಳ ಚಿಟ್ಟೆ ವೇಷ, ಕೆರಳ ಕಾಳಿ ವೇಷ, ಕೇರಳ ದೇವರ ವೇಷ, ಪಂಜಾಬ್ ಬ್ಯಾಂಡ್, ಸೇರಿದಂತೆ ಸ್ಥಳೀಯ ಶಾಲಾ-ಕಾಲೇಜಿಗಳಿಂದ ಸ್ತಬ್ದ ಚಿತ್ರಗಳು ನಗರದಲ್ಲಿ ನಡೆದ ಮೆರವಣಿಗೆಗೆ ಮೆರಗು ನೀಡಿದವು.
ರಸ್ತೆಯ ಎರಡು ಬದಿಯಲ್ಲಿ ನಾನಾ ಚಿತ್ತಾರದ ರಂಗೋಲಿ, ತಳಿರು ತೋರಣಗಳಿಂದ ಮೇನ್ ಬಜಾರ್ ರಸ್ತೆಯನ್ನು ಸಿಂಗಾರಗೊಳಿಸಲಾಗಿತ್ತು. ಮೇನ್ ಬಜಾರ್ ರಸ್ತೆ ಮೂಲಕ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ಮಾರ್ಡನ್ ವೃತ್ತ, ರೋಟರಿ ವೃತ್ತ, ತಹಶೀಲ್ದಾರ್ ಕಚೇರಿ ಮೂಲಕ ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಕಾಲೇಜು ರಸ್ತೆ ಮೂಲಕ ತಾಲೂಕು ಕ್ರೀಡಾಂಗಣದಲ್ಲಿ ಕಲಾ ತಂಡಗಳು ಸಮಾವೇಶಗೊಂಡವು. ನಂತರ ಕ್ರೀಡಾಂಗಣದಲ್ಲಿ ಬಾಣ ಬಿರಿಸು ಪ್ರದ ರ್ಶನ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಶಾಸಕ ಆನಂದ ಸಿಂಗ್,
ಸಂಸ ದ ವೈ. ದೇವೇಂದ್ರ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಜಿಪಂ ಸಿಇಒ ನಿತೀಶ್, ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್, ತಹಶೀಲ್ದಾರ್ ಎಚ್. ವಿಶ್ವನಾಥ, ಹಿಂಪಿ ವಿಶ್ವಪಂರಪರೆ ಪರಂಪರೆ
ನಿರ್ವಾಹಣಾ ಪ್ರಾಧಿಕಾರದ ಆಯುಕ್ತ ಪಿ.ಎಲ್. ಲೋಕೇಶ್, ತಾಪಂ
ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರು ಬಸವರಾಜ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.