ಬಸ್ ನಿಲ್ದಾಣಕ್ಕೆ ಡಿಸಿಎಂ ಸವದಿ ಭೇಟಿ
ಅಧಿಕಾರಿ-ಸಿಬ್ಬಂದಿ ಕಾರ್ಯ ವೈಖರಿಗೆ ಪ್ರಶಂಸೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
Team Udayavani, May 23, 2020, 1:42 PM IST
ಹೊಸಪೇಟೆ: ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಉಪಮುಖ್ಯಮಂತ್ರಿ ಲಕ್ಷಣ ಸವದಿ ಭೇಟಿ ನೀಡಿ ಪರಿಶೀಲಿಸಿದರು.
ಹೊಸಪೇಟೆ: ಕೋವಿಡ್-19 ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಕೈಗೊಳ್ಳಲಾಗಿದ್ದ ಮುಂಜಾಗ್ರತ ಕ್ರಮ ಪರಿಶೀಲಿಸಿ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯ ವೈಖರಿ ಪ್ರಶಂಸೆ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಈರಸಾಸಂಸ್ಥೆ ಹೊಸಪೇಟೆ ವಿಭಾಗದ ಮಟ್ಟದ ತಾಲೂಕಿನ ನಿಲ್ದಾಣಗಳಲ್ಲಿ ಮುಂಜಾಗ್ರತ ಕ್ರಮ ಕೈಗೊಂಡು ಉತ್ತಮ ಕೆಲಸ ಮಾಡುತ್ತಿದೆ. ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ, ಸ್ವತ್ಛತೆ ಕಾಪಾಡಿಕೊಳ್ಳುವ ಮೂಲಕ ಸರ್ಕಾರದ ಸುತ್ತೋಲೆ ಪರಿಪಾಲನೆ ಮಾಡುತ್ತಿದ್ದಾರೆ. ಬೇರೆ ವಿಭಾಗಗಳನ್ನು ಗಮಿಸಿದಾಗ ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಈ ವಿಭಾಗದಲ್ಲಿ ಹಾನಿ ಎನ್ನುವುದಕ್ಕಿಂತ ಲಾಭದಾಯಕ ಎನ್ನಬಹುದು. ಈ ಹಿನ್ನೆಲೆಯಲ್ಲಿ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೇ ರಾತ್ರಿ ವೇಳೆಯಲ್ಲಿ ವಿವಿಧೆಡೆ ಬಸ್ ಸಂಚಾರ ನಡೆಸಲು ಕ್ರಮವಹಿಸಲಾಗಿದೆ. ಸರ್ಕಾರದ ಮುಂದಿನ ಆದೇಶ ನಂತರ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಲಾಗುವುದು ಎಂದರು. ಈರಸಾ ಸಂಸ್ಥೆ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ, ಡಿಟಿಒ ಈಶ್ವರಪ್ಪ ಹೊಸಮನಿ, ಡಿಎನ್‌ಇ ಅಲ್ತಾಪ್ ಹುಸೇನ್, ಎಇಇ ಜಗನ್ನಾಥ, ಘಟಕದ ವ್ಯವಸ್ಥಾಪಕ ಸತ್ಯನಾರಾಯಣ ಮೂರ್ತಿ, ಎಎಒ ಸಂಜೀವಮೂರ್ತಿ, ಸ್ಟೋರ್ ಆಫೀಸರ್ ತಳವಾರ್, ಅಕೌಂಟ್ ಆಫೀಸರ್ ಚಿತ್ತವಾಡ್ಗಿಯಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.