ತುಂಡಾದ ಹೆಬ್ಬೆರಳು ಮರು ಜೋಡಣೆ
Team Udayavani, May 15, 2020, 5:09 PM IST
ಹೊಸಪೇಟೆ: ನಗರದ ಪುತ್ತೂರು ಆಸ್ಪತ್ರೆಯಲ್ಲಿ ಕಾರ್ಮಿಕನೊಂದಿಗೆ ವೈದ್ಯರು ಹಾಗೂ ಸಿಬ್ಬಂದಿ.
ಹೊಸಪೇಟೆ: ಲಾಕ್‌ಡೌನ್ ಸಂಕಷ್ಟದ ನಡುವೆ ಹೆಬ್ಬೆರಳು ಕಳೆದುಕೊಂಡು ದಿನಗೂಲಿ ಕಾರ್ಮಿಕನಿಗೆ ನಗರದ ಪುತ್ತೂರು ಆಸ್ಪತ್ರೆಯಲ್ಲಿ ಯಶ್ವಸಿ ಚಿಕಿತ್ಸೆ ನಡೆಸಲಾಗಿದೆ. ಐದು ದಿನಗಳ ಹಿಂದೆ ಎಸ್. ಆರ್. ನಗರದ ನಿವಾಸಿ ವಿರುಪಾಕ್ಷಿ, ರಾಡ್ ಕಟ್ಟಿಂಗ್ ಮಾಡುವಾಗ ಎಡಗೈ ಹೆಬ್ಬೆರಳು ತುಂಡಾಗಿತ್ತು. ಇದೇ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿದ್ದ ಬೆಂಗಳೂರಿನ ಪ್ಲಾಸ್ಟಿಕ್ ಸರ್ಜನ್ ಡಾ| ಸೋಮಶೇಖರ ಗೆಜ್ಜೆ, ವೈದ್ಯರು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದಾರೆ. ಯಶ್ವಸಿ ಚಿಕಿತ್ಸೆಗೆ ರೋಗಿ ಹೆಬ್ಬರಳು ಅಂಟಿಕೊಂಡು, ಚಲನವಲನ ಮಾಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ವೈದ್ಯ ಸೋಮಶೇಖರ ಗೆಜ್ಜೆ ಮಾತನಾಡಿ, ಕೈ ಬೆರಳು ಕತ್ತರಿಸಿದ ಆರು ಗಂಟೆ ಒಳಗಡೆ ಚಿಕಿತ್ಸೆ ಮಾಡಬೇಕಾಗುತ್ತದೆ. ಆದರೆ, ಈ ಚಿಕಿತ್ಸೆ ನಾಲ್ಕು ಗಂಟೆ ಒಳಗಡೆ ಮಾಡಲಾಗಿದೆ. ರಿ ಪ್ಲಾಂಟೇಷನ್ ಪ್ರೋಸಿಜರ್ ಮೂಲಕ ಹೆಬ್ಬೆರಳನ್ನು ಜೋಡಿಸಲಾಗಿದೆ. ಈಗ ಹೆಬ್ಬರಳು ಚಲನವಲನ ಮಾಡುತ್ತಿದೆ ಎಂದರು. ಕಾರ್ಮಿಕನ ಎಡಗೈ ಹೆಬ್ಬೆರಳು ಸಂಪೂರ್ಣ ಕತ್ತರಿಸಿತ್ತು. ಅದನ್ನು ಚಿಕಿತ್ಸೆ ಮಾಡುವ ಮೂಲಕ ಮರು ಜೋಡಿಸಲಾಗಿದೆ. ಚಿಕಿತ್ಸೆಯಲ್ಲಿ ಪುತ್ತೂರು ಆಸ್ಪತ್ರೆಯ ವೈದ್ಯ ಯುವರಾಜ್ ಹಾಗೂ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಮನುಷ್ಯನ ಕೈಯಲ್ಲಿ ಹೆಬ್ಬರಳು ಪ್ರಮುಖವಾಗಿ ಕೆಲಸದಲ್ಲಿ ಬಳಸಲಾಗುತ್ತದೆ. ಹೆಬ್ಬರಳು ಇರದಿದ್ದರೆ ಕೆಲಸ ಮಾಡುವುದು ಕಷ್ಟಕರವಾಗಿದೆ ಎಂದು ಹೇಳಿದರು.
ಮನುಷ್ಯನ ದೇಹದಲ್ಲಿನ ಕೈ ಭಾಗ ಕತ್ತರಿಸಿದಾಗ ತಕ್ಷಣ ಪ್ಲಾಸ್ಟಿಕ್ ಕವರನಲ್ಲಿ ಆ ಭಾಗವನ್ನು ಹಾಕಬೇಕು. ಬಳಿಕ ಪ್ಲಾಸ್ಟಿಕ್ ಕವರಿನ ಐಸ್‌ನಲ್ಲಿ ಹಾಕಬೇಕು. ಇದರಿಂದ ಆ ಭಾಗ ಹೆಚ್ಚುಕಾಲ ಜೀವಂತವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ರೋಗಿ ವಿರುಪಾಕ್ಷಿ ಮಾತನಾಡಿ, ಸರಿಯಾದ ಸಂದರ್ಭದಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇಲ್ಲದಿದ್ದರೇ ಹೆಬ್ಬರಳು ಉಳಿಯುತ್ತಿರಲಿಲ್ಲ. ಹೆಬ್ಬರಳು ಇಲ್ಲದೇ ಕೆಲಸ ಮಾಡಲು ಹರಸಾಹಸ ಮಾಡಬೇಕಾಗಿತ್ತು. ವೈದ್ಯರ ಚಿಕಿತ್ಸೆಯನ್ನು ಜೀವನ ಪರ್ಯಂತ ಮೆರೆಯುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.