ಹಣ-ಅಧಿಕಾರದ ದಾಹದಿಂದ ಮಾನವೀಯತೆ ಕ್ಷೀಣ
Team Udayavani, Feb 17, 2019, 10:50 AM IST
ಸಂಡೂರು: ಒಂದು ಕಾಲದಲ್ಲಿ ಕೂಪ ಮಂಡೂಕನಾಗಿದ್ದ ನಾನು ಸಮಾಜದಲ್ಲಿ ಏಕೆ ಜನತೆ ಸಂಕಷ್ಟದಲ್ಲಿದ್ದಾರೆ, ಕೆಟ್ಟ ಕಾರ್ಯ ಮಾಡುತ್ತಾರೆ, ಜೈಲು ಸೇರುತ್ತಾರೆ ಎನ್ನುವುದನ್ನು ಕಂಡಾಗ ಇಂದು ಮನುಷ್ಯರಲ್ಲಿ ಹಣ ಮತ್ತು ಅಧಿಕಾರದ ದಾಹ ಹೆಚ್ಚಾಗಿ, ಮಾನವೀಯತೆ ಇಲ್ಲವಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಸ್ ಹೆಗಡೆ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸಂಡೂರು ವಸತಿ ಶಾಲೆಯ 60ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಆದರ್ಶ ಉಪನ್ಯಾಸ ಕಾರ್ಯಕ್ರಮದಲ್ಲಿ “ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಪರಿಣಾಮ’ ವಿಷಯ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ಕಿಂಚಿತ್ತಾದರೂ ಬದಲಾವಣೆ ತರಬಹುದು ಎಂಬ ಆಶಯದೊಂದಿಗೆ 1046 ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿ ಸ್ವಲ್ಪ ಮಟ್ಟಿಗಾದರೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಪ್ರಯತ್ನ ಆಗಿದೆ ಎಂದರು.
ಇಂದು ನಾವೆಲ್ಲರೂ ಎರಡು ಪ್ರಮುಖ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಮೊದಲು ತೃಪ್ತಿ ಹಾಗೂ ಮಾನವೀಯತೆ ಮುಖ್ಯವಾಗಿದೆ. ನಮ್ಮ ದೇಶ ಬಹು ವಿಶೇಷವಾದ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಹೊಂದಿದೆ. ಇಂತಹ ದೇಶಕ್ಕೆ ಪ್ರಜಾಪ್ರಭುತ್ವ ಹೊಂದಿಕೊಂಡಿದೆ. ಆದರೆ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಪ್ರಜೆಗಳೆ ನಡೆಸುವ ಸರ್ಕಾರ ಇರಬೇಕಾಗಿದೆ ಎಂದರು.
2014ರಲ್ಲಿ ಜಿಎಸ್‌ಟಿ ಬಿಲ್ ಜಾರಿಗೆ ತರಲು ಯುಪಿಎ ಪ್ರಯತ್ನಿಸಿತು. ಆದರೆ ಎನ್‌ಡಿಎ ವಿರೋಧಿಸಿತು. 2016ರಲ್ಲಿ ಎನ್‌ಡಿಎ ಸರ್ಕಾರ ಅದೇ ಬಿಲ್ ಜಾರಿಗೆ ತರಲು ಹೊರಟಾಗ ಯುಪಿಎ ವಿರೋಧಿಸಿತು. ಆದರೂ ಇಂದು ಎರಡು ಜಿಎಸ್‌ಟಿಗಳು ಹುಟ್ಟಿಕೊಂಡವು. ಅಂದರೆ ನಮ್ಮ ಪ್ರತಿನಿಧಿಗಳಿಗೆ ನಿಜವಾದ ಆಡಳಿತ ಬೇಕಾಗಿರಲಿಲ್ಲ ಎನ್ನುವುದು.
ಅಲ್ಲದೆ ಅಧಿವೇಶನದ ಮೂಲಕ ಜನರ ಹಣ ಹಾಳು ಮಾಡಬೇಡಿ ಎಂದು ಸ್ವೀಕರ್ ಚಟರ್ಜಿ ಸ್ವಷ್ಟವಾಗಿ ತಿಳಿಸಿದ್ದರು. ಆದರೆ 2014ರಲ್ಲಿ 14 ಬಾರಿ ಅಧಿವೇಶನ ಮುಂದೂಡಿದರು. 1 ದಿನದ ಅಧಿವೇಶನಕ್ಕೆ 10 ಕೋಟಿ ರೂ. ಖರ್ಚು ಬರುತ್ತದೆ. ಇನ್ನು ನಿಮಿಷಕ್ಕೆ ಲಕ್ಷಾಂತರ ರೂ.ಹಣ ಖರ್ಚಾಯಿತು. ಇಂತಹ ಘಟನೆಗಳು ಕಂಡಾಗ ನಮ್ಮ ಪ್ರತಿನಿಧಿಗಳು ಕರ್ತವ್ಯ ಮರೆತಿದ್ದಾರೆ. ಬಹು ಹಿಂದಿನಿಂದಲೂ ಸಹ ಒಂದಲ್ಲಾ ಒಂದು ಹಗರಣಗಳು ನಡೆಯುತ್ತಲೇ ಇವೆ. ಮೇವು ಹಗರಣದಿಂದ 2ಜಿ ಹಗರಣ, ಬೋಫೋರ್ಸ್ ಹಗರಣ. ಇವು ಕೋಟ್ಯಂತರ ರೂ. ಹಣವನ್ನು ದೇಶಕ್ಕೆ ನಷ್ಟ ಮಾಡಿವೆ ಎಂದು ವರದಿ ಇದೆ. ಸಂಸತ್ತಿನಲ್ಲಿ 552 ಸದಸ್ಯರಿದ್ದರೆ ಮಾತನಾಡಿದವರು, ಕೇವಲ 174 ಮಂದಿ ಮಾತ್ರ. ಇನ್ನು ಶುದ್ಧ ಶಾಸಕಾಂಗ ಎಲ್ಲಿಯದು ಎಂದರು.
ಸಂವಿಧಾನದ 2ನೇ ಅಂಗ ಕಾರ್ಯಾಂಗ. ಆದರೆ ಅವರು ಶಾಸಕಾಂಗ ಜಾರಿಗೆ ತಂದ ಯುಪಿಎಸ್ಸಿ, ಕೆಪಿಎಸ್ಸಿಗಳು (ಕಮಿಷನ್ ಕೇಂದ್ರಗಳು) ಕೋಟ್ಯಂತರ ರೂ. ಹಣದಿಂದ ಕಾರ್ಯಾಂಗಕ್ಕೆ ಅಧಿಕಾರಿಗಳಾಗಿ ಆಯ್ಕೆಯಾಗಿ ಬಂದರೆ ಅವರು ಭ್ರಷ್ಟ ರಹಿತನಾಗಿ ಇರಲು ಸಾಧ್ಯವೇ. ಕೇಳಿದರೆ ಸ್ವಾಮಿ ನಾನು ಹಣ ಕೊಟ್ಟು ಬಂದಿದ್ದೇನೆ ಎನ್ನುತ್ತಾನೆ. ಊಹಿಸಿಕೊಳ್ಳಿ ಎಂತಹ ಮೌಲ್ಯ ಕುಸಿದಿದೆ ಎನ್ನುವುದು. 3ನೇ ಪ್ರಮುಖ ಅಂಗ ನ್ಯಾಯಾಂಗ. ಅಲ್ಲಿಯೂ ಸಹ ಭ್ರಷ್ಟಾಚಾರ. ಲಾಲು ಪ್ರಸಾದ್ ಕೇಸ್ ತೆಗೆದುಕೊಂಡಾಗ 14-15 ವರ್ಷಗಳೇ ಬೇಕಾಯಿತು. ಶಿಕ್ಷೆ ನೀಡಲು 5 ರಿಂದ 6 ವರ್ಷ.
ಇನ್ನು 25 ವರ್ಷದ ಯುವಕ ಮುದುಕನಾದಾಗ ತೀರ್ಪು ಬಂದರೆ ಉಪಯೋಗವೇನು. ಕಾರಣ ಹಲವಾರು ಹಂತದ ಕೋರ್ಟ್ ಇರುವುದರಿಂದ ಈ ರೀತಿಯಾಗುತ್ತಿದೆ. ಇದಕ್ಕೆ ನಮ್ಮ ವಿರೋಧ ವಿಲ್ಲ. ಆದರೆ ಅನುಷ್ಠಾನ ಸರಿಯಾಗಿ ಆಗಬೇಕೆಂದರು.
ಇನ್ನು ನಾಲ್ಕನೇ ಅಂಗ ಮಾಧ್ಯಮ ಕ್ಷೇತ. ಇಂದು ಏನಾಗಿದೆ. ಹಣ ಪಡೆಯುವುದು ಸುಳ್ಳು ಸುದ್ದಿ ಬಿತ್ತರಿಸುವುದು. ಅಂದರೆ ಅಲ್ಲಿಯೂ ಸಹ ಮೌಲ್ಯ ಇಲ್ಲವಾಗಿದೆ. ಹೀಗಾಗಿ ನಾವು ಸಂವಿಧಾನದ ಕರ್ತವ್ಯಗಳನ್ನು ಮರೆಯುತ್ತಿದ್ದೇವೆ.ಆದ್ದರಿಂದ ನಮ್ಮ ಯುವಕರಿಗೆ ಉತ್ತಮ ಮೌಲ್ಯಗಳನ್ನು ನೀಡುವ
ಮೂಲಕ ಉತ್ತಮ ಪ್ರಜೆಗಳಾಗಿ ಮಾಡಬೇಕಾಗಿದೆ. ದುಡಿಯುವುದನ್ನು ಬೇಡ ಎನ್ನುವುದಿಲ್ಲ, ದುಡಿಯಿರಿ. ಆದರೆ ನ್ಯಾಯಯುತವಾಗಿ ದುಡಿಯಿರಿ.
ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ಅದು ಶಿಕ್ಷಕರಿಂದ, ಪಾಲಕರಿಂದ ಅಗಬೇಕಾಗಿದೆ ಹೊರತು ಯಾವುದೇ ಕಾನೂನಿಂದ ಅಲ್ಲ. ಕವಿ ಹೇಳುವಂತೆ ಏನಾದರೂ ಆಗು ಮೊದಲು ಮಾನವನಾಗು ಎನ್ನುವಂತೆ ಮನುಷ್ಯತ್ವ ಅಳವಡಿಸಿಕೊಂಡು ಬದುಕಬೇಕು ಎಂದು ಕಿವಿಮಾತು ಹೇಳಿದರು.
ಕಂಪನಿಯ ಛರ್ಮನ್ ಎಸ್. ಘೋರ್ಪಡೆ ಮಾತನಾಡಿದರು. ಲೋಕಾಯುಕ್ತ ವಿಶ್ವನಾಥ್‌ಶೆಟ್ಟಿ, ನಾಜಿಂ ಶೇಖ್, ಎಸ್. ವೈ. ಘೋರ್ಪಡೆ ಹಾಗೂ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ನಮ್ಮ ಪ್ರಜಾಪ್ರತಿನಿಧಿಗಳಿಗೆ ಕನಿಷ್ಠ ಶಿಕ್ಷಣ ಬೇಕು ಎನ್ನುವುದನ್ನು ಅಂಬೇಡ್ಕರ್ ಸಂಸತ್ತಿನಲ್ಲಿ ಇಟ್ಟಾಗ ಯಾರು ಬೆಂಬಲಿಸಲಿಲ್ಲ. ಅಂದರೆ ಶಿಕ್ಷಣದ ಅಗತ್ಯತೆ ಬೇಡವೆಂದರು. ಆದರೆ ಭ್ರಷ್ಟಾಚಾರ ಹಿಂದೆ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಹಿಂದೆ ಕಡಿಮೆ ಇತ್ತು, ಈಗ ಮಿತಿ ಮೀರಿದೆ. ಆಡಳಿತ ನಡೆಸುವ ರಾಜಕಾರಣಿಗಳು ತಮ್ಮ ಕರ್ತವ್ಯ ಮರೆತಿದ್ದಾರೆ.
ಸಂತೋಷ್ ಹೆಗಡೆ, ನಿವೃತ್ತ ಲೋಕಾಯುಕ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.