ರಾಜ್ಯದಲ್ಲಿ ಕೇರಳ ಮಾದರಿ ಪ್ಲಾಸ್ಮಾ ಟೆಸ್ಟ್ ನಡೆಯಲಿ
ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಶಾಸಕ ಶಿರಾಜ್ ಷೇಕ್ ಅಭಿಪ್ರಾಯ
Team Udayavani, Apr 23, 2020, 3:24 PM IST
ಹೊವಿನಹಡಗಲಿ: ರಕ್ತದಾನ ಶಿಬಿರ ಉದ್ಘಾಟಿಸಿ ಕಾಂಗ್ರೆಸ್ ಹಿರಿಯ ಮುಖಂಡ, ಜಿಲ್ಲಾ ಟಾಸ್ಕ್ಫೋರ್ಸ್ ಅಧ್ಯಕ್ಷ ಶಿರಾಜ್ ಷೇಕ್ ಮಾತನಾಡಿದರು
ಹೂವಿನಹಡಗಲಿ: ಕೋವಿಡ್ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆಯಾದರೂ ರಾಜ್ಯದಲ್ಲಿ ಕೇರಳ ಮಾದರಿ ಪ್ಲಾಸ್ಮಾ ಟೆಸ್ಟ್ ನಡೆಯಬೇಕು ಅದಕ್ಕಾಗಿ ಐಎಂಸಿ ಪರವಾನಗಿಯನ್ನು ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಶಾಸಕ ಶಿರಾಜ್ ಷೇಕ್ ಅಭಿಪ್ರಾಯಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ (ಹಳೇ) ತಾಲೂಕು ಕಾಂಗ್ರೆಸ್ ಟಾಸ್ಕ್ ಫೋರ್ಸ್ ಕಮಿಟಿಯಿಂದ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರುಗಳಿಗೆ ಪಿಪಿ ಕಿಟ್ ಸುಮಾರು 12 ಲಕ್ಷ ಆವಶ್ಯಕತೆ ಇದ್ದು ಈಗ ಕೇವಲ 2.27 ಲಕ್ಷ ಮಾತ್ರ ಲಭ್ಯ ಇವೆ. ಇನ್ನೂ ರಾಜ್ಯದಲ್ಲಿ ಕೊರೊನಾ ಟೆಸ್ಟ್ ಮಾಡಲು 18 ಲ್ಯಾಬ್‌ಗಳು ಮಾತ್ರ ಲಭ್ಯವಿದ್ದು ಅವುಗಳಲ್ಲಿ 9 ಬೆಂಗಳೂರು ನಗರ ಒಂದರಲ್ಲಿಯೇ ಇವೆ. ಇನ್ನುಳಿದ 9 ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯ ಇವೆ ಇವು ಯಾವುದಕ್ಕೂ ಸಾಕಾಗುವುದಿಲ್ಲ. ರಾಜ್ಯದಲ್ಲಿನ ಖಾಸಗಿ ವೈದ್ಯರುಗಳಿಗೂ ಟೆಸ್ಟ್ ಮಾಡುವ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಿಕೊಡಲಿ ಎಂದರು.
ಇನ್ನೂ ರಾಜ್ಯದಲ್ಲಿ ವಲಸೆ ಕಾರ್ಮಿಕರು ಕೊರೊನಾ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆಯೋ ಅವರನ್ನು ತಪಾಸಣೆ ಮಾಡಿ ಕೂಡಲೇ ಆವರನ್ನು ಸೂಕ್ತ ಸ್ಥಳಕ್ಕೆ ತಲುಪಿಸಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಹಶೀಲ್ದಾರ್ ವಿಜಯಕುಮಾರ್, ತಾಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಎಂ.ಪರಮೇಶ್ವರಪ್ಪ, ಇಟಗಿ ಬ್ಲಾಕ್ ಅಧ್ಯಕ್ಷ ಐಗೊಳ್ ಚಿದಾನಂದ್, ತಾಲೂಕು ಟಾಸ್ಕ್ಫೋರ್ಸ್ ಕಮಿಟಿ ಅಧ್ಯಕ್ಷ ವಾರದ ಗೌಸುಮೋಹದ್ದಿನ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎಲ್. ಶ್ರೀಧರ, ಮುಖಂಡರುಗಳಾದ ಪಿ.ಟಿ. ಭರತ್‌ಕುಮಾರ್, ಜಾಸ್ತಿ ಶ್ರೀನಿವಾಸ ರೆಡ್ಡಿ, ಬ್ಯಾಲಹುಣಸಿ ಬಸವನಗೌಡ್, ಅಟವಾಳಗಿ ಕೊಟ್ರೇಶ್, ವಸಂತ ಜ್ಯೋತಿ, ಮಲ್ಲಣ್ಣ ಗಡಗಿ, ಕೃಷ್ಣ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.