ಊಟ ಬಿಟ್ಟು ವಲಸೆ ನಿರಾಶ್ರಿತರ ಪ್ರತಿಭಟನೆ
ತಮ್ಮ ತಮ್ಮ ಊರಿಗೆ ಕಳುಹಿಸಲು ಒತ್ತಾಯ
Team Udayavani, Apr 16, 2020, 3:12 PM IST
ಹೂವಿನಹಡಗಲಿ: ವಿದ್ಯಾರ್ಥಿ ನಿಲಯದಲ್ಲಿ ಊಟಬಿಟ್ಟು ಕುಳಿತ ಬೆಂಗಳೂರಿನಿಂದ ಕಲಬುರಗಿಗೆ ತೆರಳುವಾಗ ಪಟ್ಟಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸಿಗರು.
ಹೂವಿನಹಡಗಲಿ: ಕೋವಿಡ್ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ವಲಸೆ ನಿರಾಶ್ರಿತರಿಗೆ ವಸತಿ ಸೌಕರ್ಯ ಏರ್ಪಡಿಸಲಾಗಿತ್ತು. ಪ್ರತಿದಿನ ಅವರಿಗೆ ಊಟ ಇತರೆ ಮೂಲ ಸೌಕರ್ಯಗಳನ್ನು ನೀಡಲಾಗುತ್ತಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗದಗ, ಕಲಬುರಗಿ, ನರಗುಂದ ಪ್ರದೇಶಗಳಿಗೆ ತೆರಳುತ್ತಿದ್ದ ಜನತೆ ಹಡಗಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ಸರ್ಕಾರದ ನಿಯಮದಂತೆ ಇವರನ್ನು ಇಲ್ಲಿಯೇ 14 ದಿವಸಗಳ ಕಾಲ ನಿಗಾ ವಹಿಸಲಾಗಿದ್ದು ಬುಧವಾರಕ್ಕೆ 14 ದಿನಗಳು ಪೂರೈಸಿವೆ. ಇಂದು ಇವರು ನಮ್ಮನ್ನು ಊರಿಗೆ ಕಳುಹಿಸಿ ಕೊಡಿ ಎಂದು ಬೆಳಗ್ಗೆಯಿಂದಲೇ ಉಪಹಾರ ಊಟ ಬಿಟ್ಟು ಪ್ರತಿಭಟನಾ ರೂಪದಲ್ಲಿ ಹಠ ಹಿಡಿದಿದ್ದರು. ನಮ್ಮನ್ನು ಇಲ್ಲಿ ಕೂಡಿ ಹಾಕಿ 14 ದಿನಗಳು ಮುಗಿದಿದೆ. ನಮಗೆ ಯಾವುದೇ ರೀತಿಯಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿಲ್ಲ. ಇನ್ನೆಷ್ಟು ದಿವಸ ನಮ್ಮನ್ನು ಇಲ್ಲಿ ಕೂಡಿ ಹಾಕುತ್ತೀರಿ? ನಮ್ಮ ಮನೆಯಲ್ಲಿ ಸೊಸೆ ಹೆರಿಗೆ ಆಗಿದೆ. ಅಲ್ಲಿ ಬಾಣಂತನ ಮಾಡಲು ದಿಕ್ಕಿಲ್ಲದಂಗ ಆಗೈತೆ ಎಂದು ನರಗುಂದದ ಮಹಿಳೆ ಕಣ್ಣೀರು ಈಡುತ್ತಾಳೆ.
ಇನ್ನೂ ಹನುಮಂತಪ್ಪ ನಮ್ಮ ಮನೆಯಲ್ಲಿ ವಯಸ್ಸಾದ ತಂದೆ ಇದ್ದಾನೆ ಅವರಿಗೆ ಆರೋಗ್ಯ ಸರಿಯಿಲ್ಲ. ಅವರನ್ನು ಮನೆಯಲ್ಲಿ ನೊಡಿಕೊಳ್ಳುವವರು ಯಾರೂ ಇಲ್ಲದಾಗಿದೆ. ನಮ್ಮನ್ನು ಇನ್ನೂ ಎಷ್ಟು ದಿನ ಅಂತ ಇಲ್ಲಿ ಕೂಡಿ ಹಾಕುತ್ತೀರಿ ಎಂದು ತಮ್ಮ ಆಳಲನ್ನು ತೋಡಿಕೊಂಡರು. ಒಟ್ಟಾರೆಯಾಗಿ ಇಲ್ಲಿರುವ ಸುಮಾರು 27 ಜನರದು ಒಂದೊಂದು ಕತೆಯಾಗಿದೆ. ನಮಗೆ ಯಾವುದೇ ಕಾಯಿಲೆ ಲಕ್ಷ್ಮಣ ಕಂಡು ಬಾರದಿದ್ದರೂ ನಮ್ಮನ್ನು ಇಲ್ಲಿ ಯಾಕೆ ಕೂಡಿ ಹಾಕಿದ್ದಾರೆಯೋ ಒಂದು ತಿಳಿಯುತ್ತಿಲ್ಲ ಎನ್ನುತ್ತಾರೆ. ಸ್ಥಳಕ್ಕೆ ತಾಪಂ ಇಒ ಸೋಮಶೇಖರ್, ಸಿಪಿಐ ಮಾಲತೇಶ್ ಕೋನಬೇವು ಅಲ್ಲದೆ ಡಿವೈಎಸ್‌ಪಿ ಹೊಸಮನಿ ಆಗಮಿಸಿ ಮೇಲಾಧಿಕಾರಿಗಳ ಜೊತೆಯಲ್ಲಿ ಮಾತನಾಡಿ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಅವರ ಮನವೊಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
MUST WATCH
ಹೊಸ ಸೇರ್ಪಡೆ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.