ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಗೆ ಅಧಿಕೃತ ಚಾಲನೆ
Team Udayavani, Feb 2, 2020, 4:32 PM IST
ಹೂವಿನಹಡಗಲಿ: ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ರಥ ಸಪ್ತಮಿಯಂದು ದೇವಸ್ಥಾನದ ಆವರಣದಲ್ಲಿ ಹಾಲು ಉಕ್ಕಿಸುವ ಮೂಲಕ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಂಪ್ರದಾಯದಂತೆ ದೈವವಾಣಿ “ಕಾರ್ಣಿಕ’ ನುಡಿಯುವ ಗೊರವಯ್ಯಗೆ ಕಂಕಣ ಕಟ್ಟಿ ಡೆಂಕನಮರಡಿಗೆ ಕಳುಹಿಸಲಾಗಿದೆ. ಗೊರವಯ್ಯ 11 ದಿನಗಳ ಕಾಲ ಉಪವಾಸ ವೃತ ಆಚರಿಸಲಿದ್ದಾರೆ.
ಫೆ. 1ರಂದು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಾಲು ಉಕ್ಕಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದ್ದು, ಫೆ. 9ರ ಭಾರತ ಹುಣ್ಣಿಮೆ ದಿನ ಧ್ವಜಾರೋಹಣ, ಮರುದಿನ ತ್ರಿಶೂಲ ಪೂಜೆ ನಡೆಯಲಿದೆ. ಫೆ. 11ರಂದು ಲಕ್ಷಾಂತರ ಭಕ್ತರ ಮಧ್ಯೆ ಕಾರ್ಣಿಕ ಉತ್ಸವ ನಡೆಯಲಿದೆ. ಕಾರ್ಣಿಕದ ಮರುದಿನ ಫೆ. 12ರಂದು ಕಂಚಿ ವೀರರು ಹಾಗೂ ಇತರ ಬಾಬುದಾರರಿಂದ ಸರಪಳಿ ಪವಾಡ ನಡೆಯಲಿವೆ. ಕಾರ್ಣಿಕ ನುಡಿ ಆಲಿಸಲು ನಾಡು ಹಾಗೂ ಹೊರ ನಾಡಿನಿಂದ ಲಕ್ಷೋಪಲಕ್ಷ ಭಕ್ತರು ಆಗಮಿಸುತ್ತಾರೆ.
ಕಂಕಣ ಧಾರಣೆ: ಧಾರ್ಮಿಕ ಸಂಪ್ರದಾಯದಂತೆ ಕಾರ್ಣಿಕದ ಗೊರವಯ್ಯ 11 ದಿನಗಳ ಕಾಲ ಉಪವಾಸವಿರಲಿದ್ದು, ಗೊರವಯ್ಯಗೆ ವಂಶ ಪಾರಂಪರ್ಯ ಧರ್ಮಕತೃì ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಈ ಬಾರಿ ಕಂಕಣ ಧಾರಣೆ ಮಾಡಿಲ್ಲ. ನಂತರ ದೇವಾಲಯದ ಪ್ರಧಾನ ಅರ್ಚಕರು ಕಂಕಣ ಕಟ್ಟುವ ಮೂಲಕ ಧಾರ್ಮಿಕ ಕಾರ್ಯ ಆರಂಭಿಸಿದ್ದಾರೆ. ಕಂಕಣ ಧಾರಣೆ ನಂತರ ಮೈಲಾರಲಿಂಗ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೌನ ಮೆರವಣಿಗೆಯಲ್ಲಿ ಡೆಂಕನಮರಡಿಗೆ ತೆರಳಲಾಯಿತು. ಗೊರವಯ್ಯನ ಉಪವಾಸ ವ್ರತ ಮುಗಿಯುವ ತನಕ ಡೆಂಕನ ಮರಡಿ ಯಲ್ಲೇ ಮೈಲಾರಲಿಂಗ ಸ್ವಾಮಿ ನೆಲೆಸಲಿದ್ದು, ಫೆ.
11ರಂದು ಕಾರ್ಣಿಕದ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನೆರವೇರಲಿವೆ. ಪ್ರತಿ ದಿನ ಬೆಳಗ್ಗೆ ಅರ್ಚಕರು ಇಲ್ಲಿಗೆ ಬಂದು ಶ್ರೀ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ.
ಜಾತ್ರೆ ಕಾರ್ಯಕ್ರಮಗಳು: ಫೆ. 1ರಂದು ಕಾರ್ಣಿಕದ ಗೊರವಯ್ಯನಿಗೆ ಕಂಕಣ ಧಾರಣೆ. ಫೆ. 9ರಂದು ಭಾರತ ಹುಣ್ಣಿಮೆ ದಿವಸ ವಿಶೇಷ ಧಾರ್ಮಿಕ ಕಾರ್ಯಕ್ರಮ. ಫೆ. 10ರಂದು ತ್ರಿಶೂಲ ಪೂಜೆ. ಫೆ. 11ರಂದು ನಾಡಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ. ಫೆ. 12ರಂದು ಸಂಜೆ ಗಂಗಿಮಾಳವ್ವ ದೇವಸ್ಥಾನದ ಮುಂಭಾಗದಲ್ಲಿ ಗುರು ವೆಂಕಪ್ಪಯ್ಯ ಒಡೆಯರ್ ಸಾನ್ನಿಧ್ಯದಲ್ಲಿ ಸರಪಳಿ ಪವಾಡ, ವಿವಿಧ ಪವಾಡ ಕಾರ್ಯಕ್ರಮಗಳು. ಹೀಗೆ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಪ್ರಯುಕ್ತವಾಗಿ ರಥಸಪ್ತಮಿ ದಿನವಾದ ಶನಿವಾರದಿಂದ 11 ದಿನಗಳ ಕಾಲ ವಿಶೇಷವಾದ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.