ಮೆಕ್ಕೆಜೋಳಕ್ಕೆ ಸೈನಿಕಹುಳು ಬಾಧೆ: ಅಧಿಕಾರಿಗಳ ತಂಡ ಭೇಟಿ
Team Udayavani, Jul 4, 2020, 5:40 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೂವಿನಹಡಗಲಿ: ತಾಲೂಕಿನಲ್ಲಿ ರೈತರಿಗೆ ಒಂದಿಲ್ಲೊಂದು ಕಾಟ ತಪ್ಪಿದಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದ್ದು ತಾಲೂಕಿನ ರೈತರ ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ ಕಾಡಲಾರಂಬಿಸಿದೆ.
ನಿನ್ನೆ ದಿವಸ ಹುಳು ಬಾಧೆ ಕಾಣಿಸಿಕೊಂಡಿರುವ ತಾಲೂಕಿನ ಹಗರನೂರು, ಕೊಳಚಿ, ಚಿಕ್ಕ ಕೊಳಚಿ, ನಾಗ್ತಿಬಸಾಪುರ ಹಾಗೂ ಹಡಗಲಿ ಹೊಬಳಿ ರೈತ ಹೊಲಗಳಿಗೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಸೈನಿಕ ಹುಳು ಬಾಧೆ ತಡೆಗಟ್ಟಲು ಸೂಕ್ತ ಮಾಹಿತಿ ನೀಡಿದರು. ಸೈನಿಕ ಹುಳುನಿಯಂತ್ರಣಕ್ಕಾಗಿ ಇಮ್ಯಾಕ್ವಿನ್ ಬೆಂಜಿಯೇಟ್ ಶಿಫಾರಸ್ಸು ಮಾಡಲಾಗಿದ್ದು ಈಗಾಗಲೇ ಆವಶ್ಯಕ ರೈತರಿಗೆ ವಿತರಣೆ ಮಾಡಲಾಗುತ್ತಿದ್ದು ಹೆಚ್ಚಿನ ಬೇಡಿಕೆ ಕಂಡು ಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಪ್ರಸ್ತುತ ಓಷಧಿಯನ್ನು ಯಾವ ರೀತಿ ಸಿಂಪಡಣೆ ಮಾಡಬೇಕು ಎನ್ನುವ ಮಾಹಿತಿ ಸಮಗ್ರವಾಗಿ ರೈತರಿಗೆ ತಿಳಿ ಹೇಳಿದರು. ಪ್ರತಿ ಲೀಟರ್ ಗೆ 0.4ರಿಂದ 0.5 ಗ್ರಾಂನಂತೆ ಇಆಮ್ಯಾಕ್ವಿನ್ ಬೆಂಜೋಯೇಟ್ ಬೆರಸಿ ಮೆಕ್ಕೆಜೋಳ ಬೆಳೆ ಸುಳಿಗೆ ಸಿಂಪಡಣೆ ಮಾಡಬೇಕು. ರೈತರು ಸಂಜೆ ವೇಳೆ ಔಷಧಿ ಸಿಂಪಡಣೆ ಮಾಡುವುದರಿಂದಾಗಿ ಹೆಚ್ಚು ಪರಿಣಾಮಕಾರಿಯಾಗಿ ಹುಳು ಸಾಯುವುದು ಎಂದು ಕೃಷಿ ಅಧಿಕಾರಿ ನೀಲಾನಾಯ್ಕ ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ರಾಜಶೇಖರ್ ನಿಂಗಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.