ಸಾಮೂಹಿಕ ವಿವಾಹಗಳು ಸರಳತೆ ಸಂಕೇತ: ಸ್ವಾಮೀಜಿ
ಮಠಗಳು ನಾಡಿನ ಸಂಸ್ಕೃತಿ ಸಂಸ್ಕಾರದ ಮಾರ್ಗದರ್ಶಕ
Team Udayavani, Feb 14, 2020, 6:16 PM IST
ಹೂವಿನಹಡಗಲಿ: ಪಟ್ಟಣದ ಗವಿಸಿದ್ಧೇಶ್ವರ ಮಠದಲ್ಲಿ 25ನೇ ಗವಿಸಿದ್ಧೇಶ್ವರ ಜಾತ್ರೆ ಪ್ರಯುಕ್ತವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಬಿಜಾಪುರದ ಇಟಗಿ ಗುರುಶಾಂತ ವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮಠಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಸರಳವಾಗಿದ್ದು ಮದುವೆ ನೆಪದಲ್ಲಿ ಆಗುವ ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತವೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದೇ ಸಾಮೂಹಿಕ ವಿವಾಹಗಳ ಉದ್ದೇಶವಾಗಿದೆ ಎಂದರು.
ಸಮಾಜದಲ್ಲಿ ಮಠಗಳು ಸಂಸ್ಕೃತಿ, ಸಂಸ್ಕಾರ, ಶಿಕ್ಷಣವನ್ನು ಕಲಿಸುತ್ತವೆ. ಎಲ್ಲ ವರ್ಗದ ಜನರ ಹಿತವನ್ನು ಮಠಗಳು ಕಾಪಾಡುತ್ತವೆ. ಸಮಾಜಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಗವಿಸಿದ್ಧೇಶ್ವರ ಮಠದ ಡಾ| ಹಿರಿ ಶಾಂತವೀರಸ್ವಾಮೀಜಿಯವರು ಭಕ್ತರ ಮನದಲ್ಲಿ ನೆಲೆಸಿದ್ದಾರೆ. ಈ ಭಾಗದ ನಡೆದಾಡುವ ದೇವರಾಗಿದ್ದಾರೆ. ಅವರ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ ಎಂದರು.
ನೀಲಗುಂದ ಮಠದ ಚನ್ನಬಸವ ಶಿವಯೋಗಿಗಳು ಮಾತನಾಡಿ, ಮಠಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರ ಮುಖ್ಯವಾಗಿದೆ. ಅದರಂತೆ ಗವಿಸಿದ್ಧೇಶ್ವರ ಮಠಕ್ಕೆ ಭಕ್ತರ ಅಪಾರ ಕೊಡುಗೆ ಇದೆ ಎಂದು ಹೇಳಿದರು. ಅರಸಿಕೇರಿ ಮಠದ ಕೋಲಶಾಂತೇಶ್ವರ ಸ್ವಾಮೀಜಿ, ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ, ಮೈನಹಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ನಾಗತಿಬಸಾಪುರ ಗಿರಿರಾಜ ಹಾಲಸ್ವಾಮೀಜಿ, ಎಚ್.ಬಿ. ಹಳ್ಳಿ ಹಾಲಶಂಕರಸ್ವಾಮೀಜಿ, ಗವಿಮಠದ ಡಾ| ಹಿರಿಶಾಂತವೀರಸ್ವಾಮೀಜಿ, ಅಗಡಿಯ ಗುರುಸಿದ್ದ ಶಿವಯೋಗಿಗಳು ಸಾನ್ನಿಧ್ಯವಹಿಸಿದ್ದರು. ಹರಪನಹಳ್ಳಿ ನಿವೃತ್ತ ಶಿಕ್ಷಕಿ ಎಚ್.ಎಂ.ಲಲಿತಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಇಂಜಿನಿಯರ್ ಓದೋಗಂಗಪ್ಪ, ನಿವೃತ್ತ ಶಿಕ್ಷಣಾಧಿಕಾರಿ ಎಚ್.ಎಂ. ಬೆಟ್ಟಯ್ಯ, ಕೋಡಿಹಳ್ಳಿ ಮುದುಕಪ್ಪ, ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಹಂಸಾನಂದಚಾರ್ಯ, ಎ.ಎಂ. ಹಾಲಯ್ಯ ಶಾಸ್ತ್ರೀ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಐದು ಜೊತೆ ಸಾಮೂಹಿಕ ವಿವಾಹಗಳು ನಡೆದವು.ಬೆ. ಮಾನಿಹಳ್ಳಿ ಪುರವರ್ಗ ಮಠದ ಮಳೇ ಯೋಗೀಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶಿವದಿಧೀಕ್ಷೆ ಅಯ್ನಾಚಾರ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.