6 ತಿಂಗಳೋಳಗೆ ಜಮೀನು ವಾಪಸ್ ನೀಡದಿದ್ದರೆ ನಾನೇ ಕುಂಟೆ ಹೊಡೆಯುತ್ತೇನೆ: ಶಾಸಕ ತುಕಾರಾಂ
ಕಾರ್ಖಾನೆಗಳ ವಿಷಯ ಶಾಸಕರಿಂದ ಮುಖ್ಯಮಂತ್ರಿಗಳಿಗೆ ಪ್ರಸ್ತಾಪ
Team Udayavani, Jan 6, 2023, 6:44 PM IST
ಕುರುಗೋಡು : 6 ತಿಂಗಳ ಒಳಗೆ ರೈತರ ಜಮೀನುಗಳನ್ನು ವಾಪಸ್ಸು ನೀಡದಿದ್ದಲ್ಲಿ ಸ್ವತ ನಾನೆ ನಿಮ್ಮ ಮುಂದೆ ನಿಂತು ಮಡಿಕೆ ಹೊಡೆಯುತ್ತೇನೆ ಎಂದು ಶಾಸಕ ಈ ತುಕಾರಾಂ ರೈತರಿಗೆ ಭರವಸೆ ನೀಡಿದರು.
ಸಮೀಪದ ಕುಡತಿನಿ ಪಟ್ಟಣದಲ್ಲಿ ರೈತರ ಜಮೀನುಗಳನ್ನು ಕಾರ್ಖಾನೆಗಳ ಮಾಲೀಕರು ವಶಪಡಿಸಿಕೊಂಡ ನಿಟ್ಟಿನಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರು ಮತ್ತು ವಿವಿಧ ಸಂಘಟನೆ ಮುಖಂಡರು ಹಾಗೂ ಪಟ್ಟಣದ ಸಾರ್ವಜನಿಕರು ಸುಮಾರು 20 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕುಡತಿನಿ ಪಟ್ಟಣ ಸೇರಿ ಸುತ್ತಮುತ್ತಲಿನ ವಿವಿಧ ಭಾಗದಲ್ಲಿ ಸುಮಾರು ವರ್ಷಗಳಿಂದ ಕಾರ್ಖಾನೆಗಳು ರೈತರ ಜಮೀನುಗಳನ್ನು ವಶಪಡಿಸಿಕೊಂಡಿವೆ. ಆದರೆ ಕಾರ್ಖಾನೆಗಳು ಪ್ರಾರಂಭವಾಗದೆ, ಸ್ಥಳೀಯರಿಗೆ ಉದ್ಯೋಗ ನೀಡದೆ ಮೋಸ ಎಸಗಿವೆ ಎಂದರು.
ಅಲ್ಲದೆ ಕಾರ್ಖಾನೆ ಅಭಿವೃದ್ಧಿಯ ಹೆಸರಲ್ಲಿ ರೈತರಿಂದ ಜಮೀನುಗಳನ್ನು ವಶಪಡಿಸಿಕೊಂಡು 12 ವರ್ಷ ಗಳಾಗಿವೆ. ಇದುವರೆಗೂ ಕಾರ್ಖಾನೆ ಸ್ಥಾಪನೆಗೊಂಡಿಲ್ಲ. ಕೆಲ ಕಂಪನಿಯವರು ವಶಪಡಿಸಿಕೊಂಡ ಜಮೀನನ್ನು ಅಕ್ರಮವಾಗಿ ಹೆಚ್ಚಿನ ದರಕ್ಕೆ ಬೇರೇ ಕಂಪನಿಗೆ ಮಾರಾಟ ಮಾಡಿ ರೈತರಿಗೆ ಹಾಗೂ ಸರಕಾರಕ್ಕೆ ದ್ರೋಹವೆಸಗಿದ್ದಾರೆ. ಈ ವಿಷಯವನ್ನು ಈಗಾಗಲೇ ಕಳೆದ ತಿಂಗಳ ನಡೆದ ವಿಧಾನಸಭಾ ಸಭೆಯಲ್ಲಿ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸಿದ್ದೇನೆ 6 ತಿಂಗಳ ಒಳಗೆ ರೈತರ ಜಮೀನು ಗಳನ್ನು ವಾಪಸ್ಸು ನೀಡುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ ವಾಪಸ್ ನೀಡದಿದ್ದಾರೆ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ನೀಡಿ, ನಿಮ್ಮೊಂದಿಗೆ ನಿಮ್ಮ ಜಮೀನುಗಳಲ್ಲಿ ಮಡಿಕೆ ಹೊಡಿಯುತ್ತೇನೆ ಎಂದು ಖಡಕ್ ಹಾಗಿ ಮಾತನಾಡಿದರು.
ಹೋರಾಟದ ಮನೋಭಾವನೆ ಹೊಂದಿದ್ದಾರೆ ಮಾತ್ರ ಇಂತಹ ಹೋರಾಟ ಗಳು ಮಾಡುವುದಕ್ಕೆ ಸಾಧ್ಯ, ನಾನು ಕೂಡ ಮೊದಲು ಹೋರಾಟಗಳು ಮಾಡಿಕೊಂಡು ಬಂದಿದ್ದೇನೆ ಇದರಿಂದ ನಾನು 3 ಬಾರಿ ಶಾಸಕನಾಗಿದ್ದೇನೆ ಇದು ಸಾಮಾನ್ಯ ವಿಷಯವಲ್ಲ ಎಂದು ಹೋರಾಟಗಾರರ ಮುಂದೆ ಸ್ಮರಿಸಿದರು.
ಸ್ಥಳಕ್ಕೆ ಶಾಸಕ ಭೇಟಿ ನೀಡಿ ಹೋರಾಟಗಾರರಿಗೆ ಅಸ್ವಾಸನೆ ನೀಡಿದರೂ ಮಣಿಯದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಇದೆ ವೇಳೆ ವಿವಿಧ ಸಂಘಟನೆಯ ಮುಖಂಡರು ಮಾತನಾಡಿ,ಕುಡತಿನಿ ಪಟ್ಟಣದ ಮಿತ್ತಲ್, ಉತ್ತಮ್ ಗಾಲ್ವಾ ಹಾಗೂ ಎನ್ ಎಂಡಿಸಿ ಕಂಪನಿಗಳು 2010 ರಲ್ಲಿ 13 ಸಾವಿರ ಎಕರೆ ಜಮೀನುಗಳನ್ನು ವಶಪಡಿಸಿಕೊಂಡು 12 ವರ್ಷ ಕಳೆದರೂ ಕಾರ್ಖಾನೆಗಳನ್ನು ಕಾರ್ಖಾನೆಗಳು ಪ್ರಾರಂಭವಾಗದೆ ಮತ್ತು ಉದ್ಯೋಗ ನೀಡದೇ ಹಾಗೂ ರೈತರಿಗೆ ಉಳುಮೆ ಮಾಡಲು ಮರು ಜಮೀನು ನೀಡದೆ ಅನ್ಯಾಯ ಎಸಗಿದ್ದಾರೆ.
ಕುಡತಿನಿ, ವೇಣಿ ವೀರಾಪುರ, ಹರಗಿನಡೋಣಿ, ಜಾನೆಕುಂಟೆ, ಕೊಳಗಲ್ಲು,ಯರಂಗಳಿ ಗ್ರಾಮಗಳ ಸಾವಿರಾರು ಕುಟುಂಬಗಳು ವಿವಿಧ ಸೌಲಭ್ಯಗಳಿಂದ ವಂಚಿತರಾಗಿ ಜಮೀನುಗಳು ಇಲ್ಲದೇ ಬದುಕು ಅಡಕತ್ತರಿಯಲ್ಲಿ ಸಿಲುಕಿ ಜೀವನ ನಿರ್ವಹಣೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಸರ್ಕಾರ ಕೂಡಲೇ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಇಲ್ಲವೇ ನಮ್ಮ ಜಮೀನುಗಳನ್ನು ವಾಪಸ್ಸು ನೀಡಬೇಕು. ಅಲ್ಲಿಯವರೆಗೆ ಮಾಸಿಕ 25 ಸಾವಿರ ಉದ್ಯೋಗ ಭತ್ಯೆ ನೀಡಬೇಕೆಂದು ಸರ್ಕಾರಕ್ಕೆ ಮತ್ತು ಕಂಪನಿಗಳಿಗೆ ಒತ್ತಾಯಿಸಿದರು.
ಅಲ್ಲದೆ ಜಮೀನುಗಳ ರೈತರಿಗೆ ಕಾರ್ಖಾನೆ ಗಳಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಕಡಿಮೆ ವೆಚ್ಚದಲ್ಲಿ ಕಂಪನಿ ಮಾಲೀಕರು ರೈತರ ಜಮೀನು ಗಳನ್ನು ವಶಪಡಿಸಿಕೊಂಡು 13 ವರ್ಷಗಳು ಕಳೆದರೂ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಕಂಪನಿಗಳು ಬಂದ್ ಆಗಿರುವುದರಿಂದ ರೈತರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ, ಇದನ್ನೇ ನಂಬಿಕೊಂಡ ರೈತರು ಬೀದಿಗೆ ಬಂದಿದ್ದಾರೆ. ಒಂದು ಒತ್ತು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನೂ ಕೆಲ ರೈತರು ಇದರಿಂದ ಮೋಸ ಹೋಗಿ ಜೀವನ ನಿರ್ವಹಣೆಗೆ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಜೀವನ ಮಾಡುವಂತ ಪರಿಸ್ಥಿತಿ ಬಂದೋಗಿದೆ. ಇದರ ಬಗ್ಗೆ ಅನೇಕ ವರ್ಷ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರು ಸರಕಾರ ಸ್ಪಂದಿಸಿದೆ ಮತ್ತು ಮಾಲೀಕರು ಇತ್ತಕಡೆ ತಲೆ ಹಾಕದೆ ಮೌನವಾಗಿದ್ದರೆ ಎಂದು ಆಕ್ರೋಶ ಹೊರಹಾಕಿದರು.
ಸುಮಾರು 20 ದಿನದಿಂದ ಪ್ರತಿಭಟನೆ ಮಾಡಿದರು ಇದಕ್ಕೆ ಯಾರು ಕೂಡ ಇತ್ತಕಡೆ ತಲೆ ಹಾಕದೆ ಇರುವುದು ದುರಂತವಾಗಿದೆ ಎಂದರು.
ಇದಕ್ಕೆ ಸಂಬಂದಿಸಿದ ಇಲಾಖೆ ಅಧಿಕಾರಿಗಳು, ಹರಿಯ ಅಧಿಕಾರಿಗಳು ಬಂದು ಸೂಕ್ತ ಭರವಸೆ ನೀಡುವವರಿಗೂ ಪ್ರತಿಭಟನೆ ಮಾತ್ರ ಹಿಂಪಡಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.