ಹೊಸಪೇಟೆ: ಸೀರೆ ಖರೀದಿ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಪರಾರಿಯಾದ ದರೋಡೆಕೋರರು.!
Team Udayavani, Oct 23, 2021, 1:13 PM IST
ಹೊಸಪೇಟೆ: ಸೀರೆ ಖರೀದಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ದರೋಡೆಕೋರರು, ಓರ್ವ ಮಹಿಳೆಯನ್ನು ಕೊಲೆಗೈದು, ನಗನಾಣ್ಯ ದೋಚಿ ಪರಾರಿಯಾದ ಘಟನೆ ನಗರದ ರಾಣಿಪೇಟೆಯಲ್ಲಿ ಶುಕ್ರವಾರ ನಡೆದಿದೆ.
ಮದುವೆಗಾಗಿ ಸೀರೆ ಖರೀದಿ ಮಾಡುವರಂತೆ ಮನೆಗೆ ನುಗ್ಗಿದ ಐದಾರು ಜನ ದರೋಡೆಕೋರ ತಂಡ, ಇಬ್ಬರು ಮಹಿಳೆಯರನ್ನು ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಭುವನೇಶ್ವರಿ(೬೮) ವರ್ಷದ ವೃದ್ದೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಕ್ಕ (55) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭುವನೇಶ್ವರಿ ಹಾಗೂ ಶಿವಕ್ಕ ಇಬ್ಬರು ಸಹೋದರಿಯರು, ತಮ್ಮ ಮನೆಯಲ್ಲಿ ಸೀರೆ ವ್ಯಾಪಾರ ಮಾಡಿಕೊಂಡಿದ್ದರು. ಮದುವೆ ಸೀರೆ ಖರೀದಿಗೆ ಬಂದವರಂತೆ ಮನೆಗೆ ನುಗ್ಗಿದ ದರೋಡೆಕೋರರು, ಮನೆಯ ಕಿಟಕಿ, ಬಾಗಿಲು ಭದ್ರಪಡಿಸಿ, ಕೈಕಾಲು ಕಟ್ಟಿ ಹಾಕಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಭುವನೇಶ್ವರಿ ಎಂಬ ವೃದ್ದೆ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾರೆ. ಶಿವಕ್ಕ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಡಾ.ಕೆ.ಅರುಣ್ ಐದಾರು ಜನರ ದರೋಡೆಕೋರರ ತಂಡ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hospete: ಹಂಪಿ ವಿರೂಪಾಕ್ಷನ ಆನೆ ಲಕ್ಮೀ ಭಕ್ತರಿಂದ ದೂರ!
Hospete: ಮಕರ ಸಂಕ್ರಾತಿ: ಅಯ್ಯಪ್ಪನಿಗೆ ವಿಶೇಷ ಪೂಜೆ
Viral Video: ವೇದಿಕೆಯಲ್ಲಿ ಕುಳಿತಿದ್ದ ಡಿಸಿಯನ್ನೇ ಗದರಿಸಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ!
Mass Marriage: ಹೆಚ್ಚು ಮಕ್ಕಳು ಬೇಡ, ಎರಡೇ ಸಾಕು: ಸಿಎಂ ಸಿದ್ದರಾಮಯ್ಯ ಸಲಹೆ
Hampi: ಹಂಪಿ ಉತ್ಸವಕ್ಕೆ ಮಹೂರ್ತ ಫಿಕ್ಸ್! ಫೆ.28 ರಿಂದ 3 ದಿನ ಉತ್ಸವ ಆಚರಣೆ