ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಳ
Team Udayavani, May 22, 2022, 5:28 PM IST
ಹೊಸಪೇಟೆ: ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, 72 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಶನಿವಾರ ಜಲಾಶಯಕ್ಕೆ ಹರಿದು ಬಂದಿದೆ.
ಮಲೆನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣ ದ್ವಿಗುಣಗೊಂಡಿದೆ. ಕೇವಲ ಮೂರು ದಿನದ ಅವಧಿಯಲ್ಲಿ ಜಲಾಶಯಕ್ಕೆ 8 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದೆ.
ಕಳೆದ ಮೇ 18 ರಂದು ಜಲಾಶಯದಲ್ಲಿ ಕೇವಲ 650 ಕ್ಯೂಸೆಕ್, ಮೇ 19ಕ್ಕೆ 5269 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಮೇ 20ಕ್ಕೆ 33 ಸಾವಿರ ಕ್ಯೂಸೆಕ್ ಅಧಿಕ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಶನಿವಾರ ಒಳಹರಿವು ದ್ವಿಗುಣಗೊಂಡಿದ್ದು, 72 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.
ಜಲಾಶಯದ ಗರಿಷ್ಟ: 1633 ಅಡಿಗಳು, ಇಂದಿನ ಮಟ್ಟ 1600.11 ಅಡಿ, ಒಳಹರಿವು: 72592 ಕ್ಯೂಸೆಕ್, ಹೊರ ಹರಿವು: 229 ಕ್ಯೂಸೆಕ್, ಸಂಗ್ರಹ ಸಾಮರ್ಥ್ಯ ಗಿರಿಷ್ಠ: 100.855 ಟಿಎಂಸಿ, ಇಂದು (ಮೇ21)19.766 ಟಿಎಂಸಿಯಷ್ಟು ಸಂಗ್ರಹವಿದೆ. ಕಳೆದ ವರ್ಷ ಈ ದಿನದಲ್ಲಿ ನೀರಿನ ಮಟ್ಟ: 1585.63 ಅಡಿ, ಸಂಗ್ರಹ ಸಾಮರ್ಥ್ಯ: 6.925 ಟಿಎಂಸಿ, ಒಳಹರಿವು: 3995 ಕ್ಯೂಸೆಕ್, ಹೊರ ಹರಿವು: 241 ಕ್ಯೂಸೆಕ್ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಜಲಾಶಯದಲ್ಲಿ 13 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ ಹೀಗೆ ಮುಂದುವರಿದರೆ ಜೂನ್ ತಿಂಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
“ಕೈ’ ಬಿಡದ ಸಂಡೂರು ಮತದಾರ; ಬಿಜೆಪಿಗೆ ಜಯದ ಕಾತರ: 13 ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.