ಹಗರಿಗೆ ಅಂತರ್ಜಲ ಜಲಾಶಯ ನಿರ್ಮಿಸಲು ಒತ್ತಾಯ
Team Udayavani, Feb 3, 2019, 7:41 AM IST
ಬಳ್ಳಾರಿ: ನಗರದ ರಾಘವ ಕಲಾಮಂದಿರದಲ್ಲಿ ರಾಜ್ಯ ರೈತ ಸಂಘದಿಂದ ಎರಡು ದಿನಗಳ ಕಾಲ ನಡೆದ ನಮ್ಮ ಭೂಮಿ ನಮ್ಮ ಹೋರಾಟ ಪುಸ್ತಕ ಬಿಡುಗಡೆ, ಲೇಖಕ- ಕಲಾವಿದರ ಸಂಯುಕ್ತ ಸಮಾವೇಶದ 2ನೇ ದಿನವಾದ ಶನಿವಾರ ರೈತರ ವಿವಿಧ ಸಮಸ್ಯೆಗಳ ಕುರಿತ ಸಭೆಯಲ್ಲಿ ಹಗರಿಯಲ್ಲಿ ಅಂತರ್ಜಲ ಬಳಕೆಗೆ ನೂತನ ಪದ್ಧತಿಯಲ್ಲಿ ಅಂತರ್ಜಲ ಆಣೆಕಟ್ಟು ನಿರ್ಮಿಸುವಂತೆ ಸರ್ಕಾರಕ್ಕೆ ಮತ್ತು ವಿಮ್ಸ್‌ನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಳ್ಳಲಾಯಿತು.
ಹಗರಿಯಲ್ಲಿನ ಅಂತರ್ಜಲ ಬಳಕೆಗೆ 10 ಕೋಟಿ ರೂ. ವೆಚ್ಚದಲ್ಲಿ ನೂತನ ಪದ್ಧತಿಯ ಅಂತರ್ಜಲ ಆಣೆಕಟ್ಟು ನಿರ್ಮಾಣ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಯಿತು. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪಾಪಾÿ ನದಿಗೆ ನಿರ್ಮಾಣ ಮಾಡಿರುವ ಆಣೆಕಟ್ಟು ಮಾದರಿಯಲ್ಲಿ ಬರೀ 10 ಕೋಟಿ ರೂ. ವೆಚ್ಚದಲ್ಲಿ 58 ಕಿಮೀ ಉದ್ದದ ನದಿಗೆ ಆಣೆಕಟ್ಟು ಕಟ್ಟಿದರೆ 25 ಟಿಎಂಸಿ ನೀರು ದೊರೆಯಲಿದೆ. ಈಗಾಗಲೇ ಆಂಧ್ರಪ್ರದೇಶದಲ್ಲಿ ಅಂತರ್ಜಲ ಜಲಾಶಯ ನಿರ್ಮಿಸಿರುವ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಇಂಜಿನಿಯರ್ ಪ್ರತಾಪ್ ಅವರು ಪ್ರೊಜೆಕ್ಟರ್‌ನಲ್ಲಿ ಪ್ರಜೆಂಟೇಷನ್ ಮೂಲಕ ಅಂತರ್ಜಲ ಜಲಾಶಯ ನಿರ್ಮಸುವ ಕುರಿತು ವಿವರಿಸಿದರು. ಇದನ್ನೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಜೊತೆಗೆ ವಿಮ್ಸ್ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆ ಮಾಡುವಂತ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಳ್ಳಲಾಯಿತು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಟಿ.ಜಿ.ವಿಠuಲ್, ಹಗರಿ ಉಳಿಸಲು ರೈತರು ಇನ್ನೊಂದು ಸುತ್ತಿನ ಉಗ್ರ ಹೋರಾಟಕ್ಕೆ ಅಣಿಯಾಗಬೇಕಿದೆ. ಹಗರಿ ಒಂದು ವಿಶೇಷ ಜಾಗವಾಗಿದೆ. ಇಲ್ಲಿ ನದಿ ನೀರು ಗುಪ್ತವಾಗಿ ಹರಿದು ಬರುತ್ತಿದೆ. ಇದರ ಮೇಲೆ ಇದೀಗ ಕೈಗಾರಿಕೋದ್ಯಮಿಗಳ ಕಣ್ಣು ಬಿದ್ದಿದೆ. ಇದನ್ನು ಉಳಿಸಿಕೊಳ್ಳಲು ನಾವೆಲ್ಲಾ ಒಂದಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಎಲ್ಲಿಯವರೆಗೆ ಬಹುರಾಷ್ಟ್ರೀಯ ಕಂಪನಿಗಳು ಇರುತ್ತವೆಯೋ ಅಲ್ಲಿಯವರೆಗೆ ಕೃಷಿ ಸುಭೀಕ್ಷವಾಗಿ ಇರಲು ಸಾಧ್ಯವಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಸದಾ ರೈತರ ಹೆಸರಲ್ಲಿ ತಾವು ಉದ್ದಾರ ಆಗುವ ದಾರಿ ಹುಡುಕುತ್ತಲೇ ಇರುತ್ತವೆ. ಇಂತಹ ಸಮಯದಲ್ಲಿ ರೈತರು ಸಂಘಟಿತರಾಗಬೇಕು. ಒಗಟ್ಟಿನಿಂದ ಹೋರಾಟದ ಹಾದಿ ತುಳಿಯಬೇಕಿದೆ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ವಿ. ನಾರಾಯಣಸ್ವಾಮಿ, ಲಕ್ಷ್ಮಮ್ಮ ಚಾಗನೂರು ಅಧ್ಯಕ್ಷತೆ ವಹಿಸಿದ್ದರು.ರೈತ ಮುಖಂಡರಾದ ಬೆಳಗುರ್ಕಿ ಹುನುಮಗೌಡ, ಎಚ್.ಆದಿನಾರಾಯಣ ರೆಡ್ಡಿ, ಆರ್.ಮಾಧವ ರೆಡ್ಡಿ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
Kollywood: ಸೂರ್ಯ – ಕಾರ್ತಿಕ್ ಸುಬ್ಬರಾಜ್ ʼರೆಟ್ರೋʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.