ಕೃಷಿ ಇಲಾಖೆಯಿಂದ ಪರಿಶೀಲನೆ ; ಸರಿಯಾದ ದಾಖಲೆ ನಿರ್ವಹಿಸದ ಅಂಗಡಿಗಳಿಗೆ ಬೀಗ-ನೋಟಿಸ್ ಜಾರಿ
Team Udayavani, Aug 1, 2020, 2:18 PM IST
ಸಿರುಗುಪ್ಪ: ನಗರದ ಶ್ರೀ ಗುರುದತ್ತಾತ್ರೇಯ ಟ್ರೇಡರ್ಗೆ ಜಿಲ್ಲಾ ಕೃಷಿ ಇಲಾಖೆ ಜಿಲ್ಲಾ ಜಾಗೃತಿ ದಳದ ಅಧಿ ಕಾರಿಗಳು ಭೇಟಿ ನೀಡಿ ದಾಖಲೆ ಮತ್ತು ದಾಸ್ತಾನು ಪರಿಶೀಲನೆ ನಡೆಸಿ ಅಂಗಡಿ ಮಾಲೀಕರಿಂದ ಮಾಹಿತಿ ಪಡೆದುಕೊಂಡರು.
ಸಿರುಗುಪ್ಪ: ನಗರದ ವಿವಿಧ ರಸಗೊಬ್ಬರ, ಕೀಟನಾಶಕ, ಬೀಜ ಮಾರಾಟ ಅಂಗಡಿಗಳ ಮೇಲೆ ಜಿಲ್ಲಾ ಕೃಷಿ ಇಲಾಖೆಯ ಜಿಲ್ಲಾ ಜಾಗೃತಿ ದಳದ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಮತ್ತು ದಾಸ್ತಾನು ಪರಿಶೀಲನೆ ನಡೆಸಿ ಅಂಗಡಿ ಮಾಲೀಕರಿಂದ ಮಾಹಿತಿ ಪಡೆದುಕೊಂಡರು. ಸರಿಯಾದ ದಾಖಲೆ ನಿರ್ವಹಿಸದ ಅಂಗಡಿಗಳಿಗೆ ಬೀಗ ಹಾಕಿ ನೋಟಿಸ್ ಜಾರಿ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಜಿಲ್ಲಾ ಉಪ ಕೃಷಿ ನಿರ್ದೇಶಕ ಸಿ.ಆರ್. ಚಂದ್ರಶೇಖರ್ ಮಾತನಾಡಿ, ವಿವಿಧ ರಸಗೊಬ್ಬರ ಕಂಪನಿಗಳಿಂದ ಮಾರಾಟಗಾರರು ಖರೀದಿಸಿದ ರಸಗೊಬ್ಬರವನ್ನು ನೇರವಾಗಿ ರೈತರಿಗೆ ಮಾರಾಟ ಮಾಡಬೇಕು. ರೈತರಿಗೆ ಮಾರಾಟ ಮಾಡಿದ ಸಂಪೂರ್ಣ ವಿವರವನ್ನು ದಾಖಲಿಸಬೇಕು ಮತ್ತು ಈ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಗೊಬ್ಬರ ಖರೀದಿಸಿದ ಮತ್ತು ರೈತರಿಗೆ ಮಾರಾಟ ಮಾಡಿದ ಹಾಗೂ ಉಳಿದ ದಾಸ್ತಾನಿನ ಬಗ್ಗೆ ಮಾಹಿತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ.
ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಯೂರಿಯಾ ಮಾರಾಟ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆಯೂ ದೂರುಗಳು
ಬಂದಿದ್ದು ರೈತರ ಪಾಲಿನ ಯೂರಿಯಾವನ್ನು ಸೀಮಾಂಧ್ರ ಪ್ರದೇಶದ ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಾರೆನ್ನುವ ದೂರುಗಳ ಹಿನ್ನೆಲೆಯಲ್ಲಿ ನಗರದ 8 ಪ್ರಮುಖ ಸಗಟು ರಸಗೊಬ್ಬರ ಮಾರಾಟ ಅಂಗಡಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ.
ರಸಗೊಬ್ಬರ ಕಂಪನಿಗಳಿಂದ ತಾಲೂಕಿಗೆ ಸರಬರಾಜಾಗಿರುವ ರಸಗೊಬ್ಬರದ ಮಾಹಿತಿಯೊಂದಿಗೆ ಸಗಟು ರಸಗೊಬ್ಬರ ಮಾರಾಟದ ಅಂಗಡಿಗಳ ದಾಖಲೆ ಪರಿಶೀಲಿಸಲಾಗುತ್ತಿದೆ. ರಸಗೊಬ್ಬರ ಮಾರಾಟಗಾರರು ಪಿವಿಎಸ್ ಮಿಷನ್ ಗಳಲ್ಲಿ ರೈತರಿಂದ ಬೆರಳಚ್ಚು, ಆಧಾರ್ ಕಾರ್ಡ್ ಲಿಂಕ್ ಪಡೆದು ಮಾರಾಟ ಮಾಡಿದ ವಿವರ ಹಾಗೂ ದಾಸ್ತಾನಿಗೆ ಹೊಂದಾಣಿಕೆ ಪರಿಶೀಲಿಸಲಾಗುತ್ತಿದ್ದು, ಇದರಲ್ಲಿ ವ್ಯತ್ಯಾಸ ಕಂಡುಬಂದರೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದರೆ ಹಾಗೂ ದಾಸ್ತಾನು ವಹಿ ಇಡದೇ ರೈತರಿಗೆ ಅಧಿಕೃತವಾಗಿ ನೀಡಿದ ರಸೀದಿಯಲ್ಲಿ ರೈತರ ಸಹಿ ಪಡೆಯದೇ ಇರುವುದು ಕಂಡುಬಂದರೆ ಅಂತಹ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ಪರವಾನಗಿಯನ್ನು ತಾತ್ಕಾಲಿಕವಾಗಿ ತಡೆಹಿಡಿದು ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ಮಾರಾಟಗಾರರು ಅಂಗಡಿಗಳ ಫಲಕದಲ್ಲಿ ಬೀಜ, ಕೀಟನಾಶಕ, ರಸಗೊಬ್ಬರಗಳ ದರಪಟ್ಟಿ ಹಾಗೂ ದಾಸ್ತಾನು ವಿವರ ಪ್ರದರ್ಶಿಸದೇ ಇರುವ ಮತ್ತು ಪರವಾನಗಿಯನ್ನು ನವೀಕರಿಸಿಕೊಳ್ಳದೇ ಇರುವ ಅಂಗಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮ್ಮದ್, ಜಿಲ್ಲಾ ಜಾಗೃತಿ ದಳದ ಅಧಿಕಾರಿಗಳಾದ ಕೆ. ನಾಗರಾಜ, ಮುಜಬಿರ್ ರಹೆಮಾನ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೌಮ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.