ಗಾಳಿ-ಮಳೆಯಿಂದ ತೋಟಗಾರಿಕೆ ಬೆಳೆ ಹಾನಿ
Team Udayavani, Apr 24, 2020, 4:04 PM IST
ಜಗಳೂರು: ತಾಲೂಕಿನ ಐನಳ್ಳಿ ಗ್ರಾಮದ ಜಮೀನಿನಲ್ಲಿ ಅಡಿಕೆ ಮರಗಳು ನೆಲಕ್ಕುರುಳಿರುವುದು.
ಜಗಳೂರು: ತಾಲೂಕಿನಾದ್ಯಾಂತ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ 13 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಸೇರಿದಂತೆ ಕೆಲವು ಮನೆಗಳ ಮೇಲ್ಛಾವಣಿಗೆ ಧಕ್ಕೆಯಾಗಿದೆ. ಕೆಲವೆಡೆ ಮರಗಳು ಧರೆಗುರುಳಿವೆ ಎಂದು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ತಿಳಿಸಿದ್ದಾರೆ.
ತಾಲೂಕಿನಲ್ಲಿ ಬುಧವಾರ ಸಂಜೆ ಅಶ್ವಿನಿ ಮಳೆಯ ಆರ್ಭಟ ಭಾರೀ ಜೋರಾಗಿದ್ದು, ವಿಪರೀತ ಗಾಳಿ, ಮಳೆಯಿಂದಾಗಿ 8 ಹೆಕ್ಟೇರ್ ಬಾಳೆ , 2 ಹೆಕ್ಟೇರ್ ಅಡಿಕೆ , 1 ಎಕರೆಯಲ್ಲಿದ್ದ ಎಲೆಬಳ್ಳಿಗೆ ಹಾನಿಯಾಗಿದೆ. ಬೈರನಾಯಕನಹಳ್ಳಿ, ಪಟ್ಟಣದ ಅಶ್ವತ್ಥರೆಡ್ಡಿ ನಗರದ ಸಮೀಪವಿರುವ ಅಲೆಮಾರಿ ಸಮುದಾಯದವರ ಗುಡಿಸಲುಗಳಿಗೆ ಧಕ್ಕೆಯಾಗಿದ್ದು, ಕೆಚ್ಚೇನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮರಗಳು ರಸ್ತೆ ಮೇಲೆ ಬಿದ್ದಿವೆ. ಮುಸ್ಟೂರು ಗ್ರಾಮದ ಸಮೀಪ ತೆರೆಯಯಾಗಿದ್ದ ಚೆಕ್‌ಪೋಸ್ಟ್‌ನ ಶಾಮಿಯಾನಾ ಗಾಳಿಗೆ ಹಾರಿ ಹೋಗಿದೆ. ಜಗಳೂರು 28.20 ಮಿಮೀ, ಸಂಗೇನಹಳ್ಳಿ 9, ಬಿಳಿಚೋಡು 7 ಮಿಮೀ ಸೇರಿದಂತೆ ಒಟ್ಟು 44.20 ಮಿಮೀ ದಾಖಲಾಗಿದೆ. ಸರಾಸರಿ 8.84 ರಷ್ಟು ಮಳೆಯಾಗಿದ್ದು ಸೊಕ್ಕೆ ಮತ್ತು ಚಿಕ್ಕಬಂಟನಹಳ್ಳಿ ಭಾಗದಲ್ಲಿ ಮಳೆಯಾಗಿಲ್ಲ. ಉಳಿದಂತೆ ತಾಲೂಕಿನಾದ್ಯಾಂತ ಮಳೆ ಸುರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.