ಮಲ್ಲಿಗೆ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ
Team Udayavani, Apr 19, 2020, 4:03 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಂಜಾರು ಹೆಗ್ಡಾಳ್ ಗ್ರಾಮದ ರೈತರ ಮಲ್ಲಿಗೆ ಹೂವಿನ ತೋಟಗಳಿಗೆ ಶಾಸಕ ಭೀಮಾನಾಯ್ಕ ಭೇಟಿ ನೀಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು
ಹಗರಿಬೊಮ್ಮನಹಳ್ಳಿ: ಶಿವಮೊಗ್ಗ ಮಾರುಕಟ್ಟೆಗೆ ಮಲ್ಲಿಗೆ ಮೊಗ್ಗು ಸಾಗಣೆಗೆ ವಾಹನದ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ ತಿಳಿಸಿದರು.
ತಾಲೂಕಿನ ಪಿಂಜಾರಹೆಗ್ಡಾಳ್ ಗ್ರಾಮದ ಮಲ್ಲಿಗೆ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ತೋಟಗಾರಿಕೆ ಬೆಳೆನಷ್ಟ ಪರಿಹಾರಕ್ಕೆ ಸಿಎಂ ಬಳಿ ಚರ್ಚೆ ನಡೆಸಲಾಗುವುದು. ಕೊಟ್ಟೂರಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಮಾರಾಟಕ್ಕೆ ಅನುವು ಮಾಡಲು ತಹಸೀಲ್ದಾರ್‌ಗೆ ಸೂಚನೆ ನೀಡಿದರು. ಒಟ್ಟು 600 ಎಕರೆ ಪ್ರದೇಶದಲ್ಲಿ ನಿತ್ಯ 4 ಟನ್‌ಗೂ ಹೆಚ್ಚು ಮಲ್ಲಿಗೆ ಒಕ್ಕಣೆಯಾಗುತ್ತಿದೆ. ಗಂಗಾವತಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ರೈತರಿಗೆ ಅಡ್ಡಿಪಡಿಸಿದಂತೆ ದೂರವಾಣಿಯಲ್ಲೇ ಕೋರಿದರು. ಶಾಸಕರ ಕ್ರಮಕ್ಕೆ ಮಲ್ಲಿಗೆ ಬೆಳೆಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳೆಗಾರರಾದ ಜೆ.ಎಂ. ವೀರಸಂಗಯ್ಯ, ಆರ್. ಎಸ್. ಬಸವರಾಜ, ಹೆಗಾxಳ್ ರಾಮಣ್ಣ ಇತರರು ಒತ್ತಾಯಿಸಿದರು. ನಾಗಭೂಷಣ, ಹನುಮಂತಪ್ಪ, ವೆಂಕಟೇಶ, ಬಿ.ಕೆ. ಬಸವರಾಜ, ಹೆಗ್ಡಾಳ್ ರಾಜ ಮುಂತಾದ ಬೆಳೆಗಾರರಿದ್ದರು. ತಹಶೀಲ್ದಾರ್ ಆಶಪ್ಪ ಪೂಜಾರ್, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ| ಜಿ. ಪರಮೇಶ್ವರ, ಎಡಿಎ ಹುಸೇನ್ ಸಾಬ್ ರೈತರಿಂದ ಮಾಹಿತಿ ಪಡೆದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ, ಹಾಲ್ದಾಳ್ ವಿಜಯಕುಮಾರ, ಪವಾಡಿ ಹನುಮಂತಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.