ವಲಯ ಮಟ್ಟದ ಕ್ರೀಡಾಕೂಟದಲ್ಲಿ 600 ಮಕ್ಕಳು ಭಾಗಿ
Team Udayavani, Aug 4, 2018, 4:49 PM IST
ಹಗರಿಬೊಮ್ಮನಹಳ್ಳಿ: ಪಟ್ಟಣದ ಪಾಪುಸ್ವಾಮಿ ಪ್ರೌಢಶಾಲೆಯ ಮೈದಾನದಲ್ಲಿ ಮಕ್ಕಳ ಕ್ರೀಡಾಕೂಟದಲ್ಲಿ ಚಪ್ಪಾಳೆ, ಕೇಕೆಯೊಂದಿಗೆ ಆಟಗಾರರನ್ನು ಹುರಿದುಂಬಿಸುತ್ತಿರುವುದು ಕಣ್ಮನ ಸೆಳೆಯುವಂತಿತ್ತು.
ಪಟ್ಟಣದ ಪಾಪುಸ್ವಾಮಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ, ಖೋಖೋ
ಪಂದ್ಯಗಳು ರೋಚಕದಿಂದ ಕೂಡಿದ್ದವು. ಆದರ್ಶ ಶಾಲೆ ಹಾಗೂ ಕ್ರಿಸ್ತಶರಣ ವಿದ್ಯಾಪೀಠ ನಡುವೆ ನಡೆದ ಬಾಲಕರ ಕಬಡ್ಡಿ ಫೈನಲ್ ಪಂದ್ಯ ಪರಸ್ಪರ ಟೈ ಮೂಲಕ ಅಂತ್ಯಗೊಂಡಿತ್ತು. ಆಗ ತೀರ್ಪುಗಾರರು ಗೋಲ್ಡನ್ ರೈಡ್ ಮೂಲಕ ಪುನಃ ಪಂದ್ಯ ಪ್ರಾರಂಭಿಸಿದರು. ಇದರಲ್ಲಿ ಆದರ್ಶ ಶಾಲೆಯ ಮಕ್ಕಳು ಗೋಲ್ಡನ್ ರೈಡ್ ನಲ್ಲಿ 3 ಅಂಕಗಳನ್ನು ಹೆಚ್ಚು ಗಳಿಸುವ ಮೂಲಕ ವಿಜೇತರಾದರು. ಇದರೊಂದಿಗೆ ಆದರ್ಶ ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆಯಾಯಿತು.
ಬಾಲಕಿಯರ ಕಬಡ್ಡಿಯಲ್ಲಿ ವಲ್ಲಬಾಪುರ ಮೊರಾರ್ಜಿ, ಬಾಲಕರ ಖೋಖೋ ಪಂದ್ಯದಲ್ಲಿ ಕ್ರಿಸ್ತಶರಣ ಶಾಲೆ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ವಲ್ಲಬಾಪುರ, ಉಪನಾಯಕನಹಳ್ಳಿ, ಜ್ಞಾನಗಂಗ ಪ್ರೌಢಶಾಲೆ ಸೇರಿದಂತೆ ಒಟ್ಟು 10 ಶಾಲೆಯ 600 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಪಾಪುಸ್ವಾಮಿ ಪ್ರೌಢಶಾಲೆಯ ಮುಖ್ಯ ಗುರು ಎಂ.ನಾಗಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಪೂರಕ. ದೈಹಿಕ ಶಿಕ್ಷಕರ ತೀರ್ಪುಗಳು ಮುಗª ಮನಸ್ಸುಗಳ ಮೇಲೆ ಪರಿಣಾಮ ಬೀರದಂತಿರಲಿ. ಮಕ್ಕಳಿಗೆ ಉತ್ತೇಜನ ನೀಡುವಂತಹ ಯುವಕರು ಎಲ್ಲೆ ಮೀರದೆ ಪ್ರೋತ್ಸಾಹಿಸಬೇಕು ಎಂದರು.
ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ, ಉಜ್ಜನಗೌಡ, ವೀರೇಶಸ್ವಾಮಿ, ಕೊಟ್ರಗೌಡ, ಸಿ.ಕೊಟ್ರೇಶ, ಈಶ್ವರಗೌಡ ಸತೀಶ, ರಾಜು ಸೋಗಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.