![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 30, 2020, 6:01 PM IST
ಕಂಪ್ಲಿ: ಕೋವಿಡ್ ಜಾಗೃತಿಯ ಕಲಾ ತಂಡಗಳ ಪ್ರದರ್ಶನಕ್ಕೆ ತಹಶೀಲ್ದಾರ್ ಎಂ.ರೇಣುಕಾ ಹಾಗೂ ಸಿಪಿಐ ಡಿ.ಹುಲುಗಪ್ಪ ಚಾಲನೆ ನೀಡಿದರು.
ಕಂಪ್ಲಿ: ದಿನದಿಂದ-ದಿನಕ್ಕೆ ಕೆಲವರು ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಸಾಮಾಜಿಕ ಅಂತರ ಮರೆತು ಹಾಗೂ ಮಾಸ್ಕ್ ಧರಿಸುತ್ತಿಲ್ಲ. ಹೀಗಾಗಿ ಪಟ್ಟಣದಲ್ಲಿ ಹಗಲು ವೇಷಗಾರರು, ಅಲೆಮಾರಿ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಬುಧವಾರ ಸಾರ್ವಜನಿಕರಲ್ಲಿ ಕೋವಿಡ್ ಜಾಗೃತಿ ಮೂಡಿಸಲಾಯಿತು.
ಪೊಲೀಸ್ ಠಾಣಾ ಆವರಣದಿಂದ ಆರಂಭಗೊಂಡ ಕೋವಿಡ್ ವೈರಸ್ ಜಾಗೃತಿಯ ಕಲಾ ತಂಡಗಳ ಪ್ರದರ್ಶನವು ಪಟ್ಟಣದ ನಡುವಲ ಮಸೀದಿ, ಡಾ| ರಾಜಕುಮಾರ್ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಎಸ್‌ಎನ್ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯ ಮುಖ್ಯರಸ್ತೆವರೆಗೆ ಸಂಚರಿಸಿದ ನಂತರ ಪುನಃ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.
ಈ ಜಾಗೃತಿ ಪ್ರದರ್ಶನದಲ್ಲಿ ಕಂಪ್ಲಿಯ ಎಚ್‌ಪಿ ಶಿಕಾರಿರಾಮು ಅವರ ಜೈ ಆದಿವಾಸಿ ತಾಷಾರಾಂಡೋಲ್ ಕಲಾ ತಂಡ, ಹಳೇ ದರೋಜಿಯ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್
ಟ್ರಸ್ಟ್, ಹಳೇ ದರೋಜಿಯ ಗಂಗಾಧರಪ್ಪ ಹಗಲುವೇಷ ಕಲಾ ಸಂಘ, ಕಂಪ್ಲಿಯ ರಾಹುಲ್ ನಾಗಪ್ಪ ಸಿಂಧೋಳ್ ಪೋತ್ ರಾಜ್ ನೃತ್ಯ ಕಲಾ ತಂಡದ ಸಹಯೋಗದಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯಗಳ ಪಾರಂಪರಿಕ ಕಲೆಗಳಾದ ಹಗಲು ವೇಷ, ತಾಷಾರಾಂಡೋಲ್, ಸಿಂಧೋಲ್ ನೃತ್ಯದ ಪ್ರದರ್ಶನದೊಂದಿಗೆ ಕೊರೊನಾ ಜಾಗೃತಿಗೆ ಮೆರಗು ನೀಡಿದರು.
ತಹಶೀಲ್ದಾರ್ ಎಂ.ರೇಣುಕಾ ಹಾಗೂ ಸಿಪಿಐ ಡಿ.ಹುಲುಗಪ್ಪ ಅವರು ಕೋವಿಡ್ ಜಾಗೃತಿಯ ಕಲಾ ತಂಡದ ಪ್ರದರ್ಶನಕ್ಕೆ ಚಾಲನೆ ನೀಡಿ, ಹೆಮ್ಮಾರಿ ಕೊರೊನಾ ವೈರಸ್‌ನಿಂದ ಮನುಷ್ಯ ಸಂಕುಲವೇ ತಲ್ಲಣಗೊಳ್ಳುವಂತೆ ಮಾಡಿದೆ. ಈ ಕೊರೊನಾ ವೈರಸ್ ತಡೆಗಾಗಿ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ಅಗತ್ಯವಿದ್ದಾಗ ಮಾತ್ರ ಜನರು ಮಾಸ್ಕ್ಗಳನ್ನು ಧರಿಸಿ ಹೊರಗಡೆ ಬರಬೇಕು. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಸಾರ್ವಜನಿಕರು ಜಾಗೃತಿ ಹೊಂದುವ ಮೂಲಕ ಕೊರೊನಾ ಮುಕ್ತ ದೇಶವನ್ನಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಕ್ರೈಂ ಪಿಎಸ್‌ಐ ಬಸಪ್ಪ ಲಮಾಣಿ, ಎಎಸ್‌ಐ ಸಿ.ಪರಶುರಾಮ, ಕರ್ನಾಟಕ ರಾಜ್ಯ ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಎಚ್.ಪಿ. ಶಿಕಾರಿರಾಮು, ಕರ್ನಾಟಕ ರಾಜ್ಯ ಅಲೆಮಾರಿ, ಅರೆಅಲೆಮಾರಿ ಯುವಜನ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ವಿ.ರಾಮಾಂಜನೇಯ (ಅಶ್ವರಾಮು), ಸಿಂಧೋಳ್ ಸಮಾಜದ ರಾಜ್ಯ ಅಧ್ಯಕ್ಷ ರಾಹುಲ್ ನಾಗಪ್ಪ, ಕಲಾವಿದರಾದ ಸೂರಿ, ಅಂಬಣ್ಣ, ವಿಜಯ, ತಾಯಪ್ಪ, ಶರಬಯ್ಯ, ಬಾಲು, ಬಸುವ, ಅಶ್ವರಾಮಣ್ಣ ಇದ್ದರು.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.