ವಿನಾಯ್ತಿಗಾಗಿ ಕಾಯುತ್ತಿವೆ ಕಂಪ್ಲಿ ಅಕ್ಕಿ ಗಿರಣಿಗಳು

ಕೆಲಸ ಮಾಡುವ ಕಾರ್ಮಿಕರಿಗೆ ಪಾಸ್‌ಗಳ ಕೊರತೆ  ಹೊರ ರಾಜ್ಯದಿಂದ ಭತ್ತದ ಆಮದಿಗೆ ಕಡಿವಾಣ

Team Udayavani, Apr 30, 2020, 3:18 PM IST

30-April-17

ಕಂಪ್ಲಿ: ಪಟ್ಟಣದ ಅಕ್ಕಿ ಗಿರಣಿವೊಂದರ ಒಳನೋಟ

ಕಂಪ್ಲಿ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಿಂಗಾರು ಹಂಗಾಮಿನ ಭತ್ತದ ಕಟಾವು ಭರದಿಂದ ನಡೆದಿದೆ. ಆದರೆ, ಕೊರೊನಾ ಲಾಕ್‌ ಡೌನ್‌ ಜಾರಿಯಿಂದ ಅಕ್ಕಿಗಿರಣಿ ಮಾಲೀಕರ, ಕಾರ್ಮಿಕರ ನಿದ್ದೆಗೆಡಿಸಿದೆ.

ತಾಲ್ಲೂಕಿನ ಕಂಪ್ಲಿ ಪಟ್ಟಣ ಹಾಗೂ ಒಂದೆರಡು ಗ್ರಾಮಗಳಲ್ಲಿ ಮಾತ್ರ ಅಕ್ಕಿ ಗಿರಣಿಗಳಿದ್ದು, ಪಟ್ಟಣದಲ್ಲಿರುವ ಸುಮಾರು 20 ಅಕ್ಕಿ ಗಿರಣಿಗಳಲ್ಲಿ ಸದ್ಯ 5-6 ಗಿರಣಿಗಳು ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದವು ನಿಧಾನವಾಗಿ ನಡೆಯುತ್ತಿವೆ. ಪ್ರತಿ ಹಂಗಾಮಿನಲ್ಲಿ ತಿಂಗಳಿಗೆ ಸರಾಸರಿ 3 ರಿಂದ 4 ಸಾವಿರ ಟನ್‌ ಭತ್ತ ಮಿಲ್ಲಿಂಗ್‌ ಆಗುತ್ತದೆ. ಕೊರೊನಾದಿಂದಾಗಿ ಸದ್ಯ ಹದಿನೈದು ದಿನಗಳಿಗೆ ಸರಾಸರಿ 500 ಟನ್‌ ಭತ್ತದ ಮಿಲ್ಲಿಂಗ್‌ ಆಗಿದೆ. ಹೊರ ರಾಜ್ಯದಿಂದ ಭತ್ತದ ಆಮದಿಗೆ ಕೊಂಚ ಕಡಿವಾಣ ಹಾಕಿರುವುದರಿಂದ ಭತ್ತದ ಬೆಲೆಯಲ್ಲಿಯೂ ಅಲ್ಪ ಚೇತರಿಕೆ ಕಂಡಿದ್ದು, ಅಕ್ಕಿ ಗಿರಣಿಗಳ ಆರಂಭಕ್ಕೂ ಮುನ್ನ ಕ್ವಿಂಟಲ್‌ಗೆ 1500 ಇದ್ದ ಬೆಲೆ ಇದೀಗ 1600 ರಿಂದ 1650 ಆಗಿದೆ. ಆದರೆ ಸರ್ಕಾರ ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲವೆಂದು ಹೇಳುತ್ತಿದೆ. ಆದರೆ ಅಕ್ಕಿಗಿರಣಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಪಾಸ್‌ಗಳ ಕೊರತೆ ಕಾಡುತ್ತಿದೆ.

ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುವ ಮೂರ್‍ನಾಲ್ಕು ಡ್ರೈವರ್‌ಗಳು, 5-6 ಜನ ಒಳ ಮತ್ತು ಹೊರ ಹಮಾಲರು, ಮೂವರು ಗುಮಾಸ್ತರು, ಪಾಲುದಾರರು ಅಕ್ಕಿಗಿರಣಿಯಲ್ಲಿ ಕಾರ್ಯದಲ್ಲಿರುತ್ತಾರೆ. ಕನಿಷ್ಠ ಒಂದು ಅಕ್ಕಿಗಿರಣಿಗೆ 25 ಪಾಸ್‌ಗಳ ಅಗತ್ಯವಿದೆ. ಆದರೆ ಸದ್ಯ ಒಂದು ಮಿಲ್ಲಿಗೆ 17 ಪಾಸ್‌ ಗಳನ್ನು ಮಾತ್ರ ನೀಡಲಾಗಿದೆ. ಅಕ್ಕಿಗಿರಣಿಗಳಿಗೆ ನಿತ್ಯ ಕಾರ್ಮಿಕರು ಕೂಗಳತೆ ದೂರದ ಗಂಗಾವತಿ ತಾಲ್ಲೂಕಿನ ಚಿಕ್ಕ ಜಂತಕಲ್ಲಿನಿಂದ ಬಂದು ಹೋಗಬೇಕಾಗಿದೆ. ಆದರೆ ಇದು ಅಂತರ್‌ ಜಿಲ್ಲಾ ಸಮಸ್ಯೆಯಾಗಿರುವುದರಿಂದ ಅಂತರ್‌ ಜಿಲ್ಲಾ ಗಡಿ ಚೆಕ್‌ಪೋಸ್ಟ್‌ನಲ್ಲಿ ನಿತ್ಯವೂ ಕಿರಿಕಿರಿಯಾಗುತ್ತಿದೆ. ಇದರಿಂದಾಗಿ ಅಕ್ಕಿಗಿರಣಿಗಳಲ್ಲಿ ಕಾರ್ಮಿಕರ ಕೊರತೆ ಕಾಡುತ್ತಿದೆ.

ಅಕ್ಕಿ ಗಿರಣಿಗಳನ್ನು ಲೋನ್‌ ಮೂಲಕ ನಿರ್ಮಾಣ ಮಾಡಿರುವುದರಿಂದ ಸಾಲದ ಕಂತುಗಳನ್ನು ಪಾವತಿಸಲು ಕಾಲಾವಕಾಶದ ಅಗತ್ಯವಿದೆ. ಸ್ವಯಂ ಆಸ್ತಿ ಘೋಷಣೆ ತೆರಿಗೆ ಪದ್ಧತಿಯೂ ಹೊರೆಯಾಗಿದೆ. ಅಕ್ಕಿಗಿರಣಿಗಳು ಕೃಷಿ ಆಧಾರಿತ ಕೈಗಾರಿಕೆಗಳಾಗಿದ್ದು, ತೆರಿಗೆ ದರದಲ್ಲಿ ಸಾಕಷ್ಟು ವಿನಾಯಿತಿ ನೀಡಬೇಕಾಗಿದೆ. ಸೆಸ್‌ ವಿನಾಯಿತಿ ನೀಡುವುದರ ಜೊತೆಗೆ ಬಡ್ಡಿಯನ್ನು ಕೈಬಿಡಬೇಕು ಅಥವಾ ಸರಳೀಕರಣಗೊಳಿಸಬೇಕು ಎನ್ನುವುದು ಅಕ್ಕಿಗಿರಣಿ ಮಾಲೀಕರ ಆಗ್ರಹವಾಗಿದೆ.

ಹೊರೆಯಾದ ನಿಗದಿತ ವಿದ್ಯುತ್‌ ಶುಲ್ಕ: ಅಕ್ಕಿ ಗಿರಣಿಗಳಿಗೆ ನಿಗ ದಿತ ವಿದ್ಯುತ್‌ ಶುಲ್ಕವು ಒಂದು ಲಕ್ಷದಿಂದ ಎರಡುವರೆ ಲಕ್ಷದವರೆಗೆ ಇದ್ದು, ಇದು ಗಿರಣಿ ಮಾಲೀಕರಿಗೆ ಶೂಲವಾಗಿ ಪರಿಣಮಿಸಿದೆ. ವರ್ಷದಲ್ಲಿ ಎರಡು ಹಂಗಾಮು ಸೇರಿ 5-6 ತಿಂಗಳು ಮಾತ್ರ ಚಾಲನೆಯಲ್ಲಿರುತ್ತವೆ. ಉಳಿದ 5-6 ತಿಂಗಳು ಗಿರಣಿಗಳನ್ನು ಬಿಳಿಯಾನೆಯಂತೆ ಸಾಕಾಬೇಕಾಗಿದೆ. ನಿಗದಿ ತ ವಿದ್ಯುತ್‌ ಶುಲ್ಕ ಪದ್ಧತಿ ತೆಗೆದು, ಬಳಸಿದ ವಿದ್ಯುತ್‌ ಶುಲ್ಕ ಪಾವತಿಸುವ ಪದ್ಧತಿ ಜಾರಿಗೆ ತರಬೇಕು ಎನ್ನುವ ಮನವಿ ಸರ್ಕಾರಕ್ಕೆ ತಲುಪುತ್ತಿಲ್ಲ.

ಅಕ್ಕಿಗಿರಣಿಗಳ ಉಳಿವಿಗಾಗಿ ಸರ್ಕಾರವೇ ಭತ್ತವನ್ನು ಖರೀದಿಸಿ ಅಕ್ಕಿಗಿರಣಿಗಳಿಗೆ ನೀಡಬೇಕು. ನಿಗ ದಿತ ಶುಲ್ಕ ಪದ್ಧತಿ ತೆಗೆದು ಹಾಕಬೇಕು. ಕಾರ್ಮಿಕರಿಗೆ ಹೆಚ್ಚಿನ ಪಾಸ್‌ ಗಳನ್ನು ನೀಡಬೇಕು ಹಾಗೂ ಪೊಲೀಸರು ಅನಗತ್ಯ ಕಿರಿಕಿರಿ ಮಾಡಬಾರದು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ತಿಳಿಸಿದರು.

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

Ballari–Minister

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

1-dinnu

Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.