ಆಟೋ ಹುಲಗಪ್ಪನ ರಾಜ್ಯೋತ್ಸವ ಸಂಭ್ರಮ
Team Udayavani, Nov 1, 2021, 3:54 PM IST
ಹೊಸಪೇಟೆ: ಕನ್ನಡ ರಾಜ್ಯೋತ್ಸವ ಆಚರಣೆ ಬಂತ್ತೆಂದರೆ ನೂತನ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಆಟೋ ಚಾಲಕರೊಬ್ಬರಿಗೆ ಸಡಗರ-ಸಂಭ್ರಮ.
ಹೌದು! ನಗರದ ಆಟೋಚಾಲಕ ಗುಜ್ಜಲ ಹುಲಗಪ್ಪ ಎಂಬ ಕನ್ನಡಾಭಿಮಾನಿಗೆ ಕನ್ನಡ ಬಾವುಟ ಹಾರಿಸುವುದು, ಕನ್ನಡ ಗೀತೆಗಳನ್ನು ಕೇಳಿಸುವುದು ಎಂದರೆ ಎಲ್ಲಿಲ್ಲದ ಖುಷಿ.
ಕನ್ನಡ ರಾಜ್ಯೋತ್ಸವ ದಿನ ಅವರು ತಮ್ಮ ಆಟೋ ತುಂಬೆಲ್ಲ ಕನ್ನಡ ಧ್ವಜ ರಾರಾಜಿಸುವಂತೆಅಲಂಕಾರ ಮಾಡುವುದು, ಜತೆಗೆ ಧ್ವನಿವರ್ಧಕದ ಮೂಲಕ ಕನ್ನಡ ಅಭಿಮಾನ ಸಾರುವ ಖ್ಯಾತ ಗಾಯಕರ ಕನ್ನಡ ಗೀತೆಗಳನ್ನು ಜನರಿಗೆ ಕೇಳಿಸುವುದು, ಇಡೀ ದಿನ ನಗರ ಪ್ರದಕ್ಷಣೆ ಮಾಡಿ, ಕನ್ನಡಾಭಿಮಾನ ಮೆರೆಯುತ್ತಾರೆ. ಕುವೆಂಪು, ದ.ರಾ. ಬೇಂದ್ರೆ, ಡಾ| ರಾಜಕುಮಾರ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಮಹಾತ್ಮ ಗಾಂಧೀ ಜಿ, ಸುಭಾಷ್ ಚಂದ್ರಭೋಷ್ ಮುಂತಾದ ಮಹನೀಯರ ಭಾವಚಿತ್ರಗಳನ್ನುಆಟೋದಲ್ಲಿ ಅಳವಡಿಸಿ ಖುಷಿ ಪಡುತ್ತಾರೆ.
ಕಳೆದ 25 ವರ್ಷಗಳಿಂದಲೂ ಕನ್ನಡದ ಮೇಲಿನ ಪ್ರೀತಿಯನ್ನು ಈ ಮೂಲಕ ವ್ಯಕ್ತಪಡಿಸುತ್ತಿರುವ ಆಟೋಚಾಲಕ ಗುಜ್ಜಲ ಹುಲಗಪ್ಪನವರು ಮುಂದಿನ ವರ್ಷ ತಮ್ಮಆಟೋವನ್ನು ಕನ್ನಡ ಧ್ವಜದಿಂದ ಸಿಂಗರಿಸಿಕೊಂಡು ರಾಜಧಾನಿ ಬೆಂಗಳೂರಿನಿಂದ ಹೊಸಪೇಟೆವರೆಗೆಆಗಮಿಸಬೇಕು. ದಾರಿಯುದಕ್ಕೂ ಬರುವ ಗ್ರಾಮ, ಪಟ್ಟಣಗಳಲ್ಲಿ ಕನ್ನಡ ಪ್ರೇಮವನ್ನುಹೊರ ಹಾಕಬೇಕು ಎಂಬುದು ಬಹುದಿನದ ಆಸೆಯಾಗಿದೆ.
ಕನ್ನಡ ರಾಜ್ಯೋತ್ಸವ ಆಚರಣೆ ಮಾತ್ರವಲ್ಲದೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನದಲ್ಲಿ ಕೂಡ ಅವರ ಆಟೋದ ಮೇಲೆ ತ್ರೀವರ್ಣ ಧ್ವಜ ಹಾರಾಡುತ್ತಿರುತ್ತದೆ. ನಾಡ ದೇವತೆ ಭುವನೇಶ್ವರಿ ದೇವಿ ಹಾಗೂ ಭಾರತಮಾತೆ ಭಾವಚಿತ್ರ ಹೊಂದಿರುವಧ್ವಜ ಹಾರಿಸುವುದು, ದೇಶಭಕ್ತಿ ಗೀತೆಗಳನ್ನು ಕೇಳಿಸುವುದು, ನಗರ ಸುತ್ತುವುದು ಇವರ ಪ್ರತಿವರ್ಷದ ವಾಡಿಕೆ. ಗೆಳೆಯರೊಂದಿಗೆ ಸೇರಿಕೊಂಡು ನಗರದ ಜೋಳದ ರಾಶಿ ಗುಡ್ಡದ ತುದಿಯಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮ ಪಡುತ್ತಾರೆ. ಪ್ರತಿವರ್ಷ ನ.1, ಆ.15 ಹಾಗೂ ಜ. 26ರಂದು ನಗರದ ಮೃತ್ಯುಂಜಯ ನಗರದ 9 ನೇ ಕ್ರಾಸ್‌ನ ಆಟೋ ಸ್ಟಾಂಡ್‌ನಲ್ಲಿಧ್ವಜಾರೋಹಣ ನೆರವೇರಿಸಿ ದೇಶಾಭಿಮಾನ ತೋರುತ್ತಾರೆ.
ಉಚಿತ ಸೇವೆ: ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ಗರ್ಭಿಣಿ ಹಾಗೂ ವೃದ್ಧರು ಹಾಗೂ ಮಕ್ಕಳಿಗೆ ಹಣ ಪಡೆಯದೇ ತಮ್ಮ ಆಟೋದಲ್ಲಿ ಉಚಿತ ಸೇವೆ ನೀಡುತ್ತಾರೆ.ನ. 1ರಂದು ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕಾಗಿ ತುದಿಗಾಲಿನಲ್ಲಿ ನಿಂತಿರುವ ಹುಲಗಪ್ಪನವರುತಮ್ಮ ಆಟೋವನ್ನು ಈ ವರ್ಷ ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡುವ ಮೂಲಕ ಕನ್ನಡಪ್ರೇಮವನ್ನು ಮೆರೆಯಬೇಕು. ಈ ಮೂಲಕ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದವಿಶೇಷ ಶುಭಾಶಯಗಳನ್ನು ಪರಸ್ಪರಹಂಚಿಕೊಂಡು ನಾಡಿಗೆ ಮಾದರಿಯಾಗಬೇಕು ಎಂಬುದು ಇವರ ಸಂಕಲ್ಪ.
1998ರಿಂದ ನಾನು ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ನನ್ನ ಆಟೋಕ್ಕೆ ಕನ್ನಡ ಬಾವುಟ ಹಾಗೂ ರಾಷ್ಟ್ರಧ್ವಜದಿಂದ ಸಿಂಗಾರ ಮಾಡುತ್ತೇನೆ. ಜತೆಗೆ ನಾಡಿನ ಖ್ಯಾತ ಗಾಯಕರ ಕನ್ನಡ ಅಭಿಮಾನ ಸೂಸುವ ಗೀತೆ ಹಾಗೂ ದೇಶಭಕ್ತಿಗೀತೆಗಳನ್ನು ಧ್ವನಿವರ್ಧಕದ ಮೂಲಕ ದಾರಿಯುದ್ದಕ್ಕೂ ಕೇಳಿಸುತ್ತೇನೆ. ಈ ಮೂಲಕ ದೇಶಾಭಿಮಾನ, ಕನ್ನಡಾಭಿಮಾನ ಮೆರೆಯುತ್ತೇನೆ.– ಗುಜ್ಜಲ ಹುಲಗಪ್ಪ ಆಟೋಚಾಲಕ, ಹೊಸಪೇಟೆ
-ಪಿ. ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.