ಜವಾನ್ ಯುದ್ಧ ಸ್ಮಾರಕದಲ್ಲಿಕಾರ್ಗಿಲ್ ವಿಜಯೋತ್ಸವ ಆಚರಣೆ
Team Udayavani, Jul 27, 2017, 9:59 AM IST
ಬಳ್ಳಾರಿ: ನಗರದ ಬಳ್ಳಾರಿ ವಲಯ ನಿವೃತ್ತ ಸೈನಿಕರ ಹಾಗೂ ವೀರ ವನಿತೆಯರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ 18ನೇ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಸುಬೇದಾರ್ ಕೆ.ಲಕ್ಷ್ಮಣ ನೇತೃತ್ವದಲ್ಲಿ ನಿವೃತ್ತ ಸೈನಿಕರು ಹಾಗೂ ನೂರಾರು ಯುವಾ ಬ್ರಿಗೇಡ್‌ನ ಯುವಜನರು, ದೇಶಾಭಿಮಾನಿಗಳು ನಗರದ ಇನ್‌ಫ್ಯಾಂಟ್ರಿ ರಸ್ತೆಯಿಂದ ಎಸ್‌ಪಿ ಕಚೇರಿಯ ಬಳಿ ಇರುವ ವೀರ ಯೋಧ ಸ್ಮಾರಕದ ವರೆಗೆ ಬೈಕ್ ರ್ಯಾಲಿ ನಡೆಸಿ ಅಮರ ಜವಾನ್ ಯುದ್ಧ ಸ್ಮಾರಕಕ್ಕೆ ಆಗಮಿಸಿ, ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರಿಗೆ ಗೌರವ ಸಮರ್ಪಿಸಿದರು. ಅಲ್ಲದೇ ನಿವೃತ್ತ ಸೈನಿಕರ ಸಂಘದಿಂದ ಶ್ರದ್ಧಾಂಜಲಿ ಸಭೆ ನಡೆಯಿತು. ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಮುಂತಾದ ಗಣ್ಯರು ಸೈನಿಕರ ತ್ಯಾಗ, ಬಲಿದಾನಗಳನ್ನು ಸ್ಮರಿಸಿದರು.
ಯುವಾ ಬ್ರಿಗೇಡ್‌ನಿಂದ ಮೊಂಬತ್ತಿ ಮೆರವಣಿಗೆ: ಕಾರ್ಗಿಲ್ ವಿಜಯ್ ದಿವಸ್ ಮುನ್ನಾದಿನ ರಾತ್ರಿ ಯುವಾ ಬ್ರಿಗೇಡ್
ವತಿಯಿಂದ ನಗರದ ವಾಲ್ಮೀಕಿ (ಎಸ್‌ಪಿ) ವೃತ್ತದಿಂದ ಎಸ್‌ಪಿ ಕಚೇರಿ ಬಳಿಯ ಅಮರ್ ಜವಾನ್ ಯುದ್ಧ ಸ್ಮಾರಕದ ವರೆಗೆ ಮೊಂಬತ್ತಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಯುವಾ ಬ್ರಿಗೇಡ್ ಕಾರ್ಯಕರ್ತರೊಡನೆ 400ಕ್ಕೂ ಹೆಚ್ಚು ಜನ ದೇಶಾಭಿಮಾನಿಗಳು, ಸಮರ್ಥನಂ ಅಂಗವಿಕಲ ಸಂಸ್ಥೆಯ ಮಕ್ಕಳು ಸೇರಿಕೊಂಡು ಮೆರವಣಿಗೆ ನಡೆಸಿ ಅಗಲಿದ ಸೈನಿಕರಿಗೆ ಕೃತಜ್ಞತಾಪೂರ್ವಕವಾಗಿ ಗೌರವ ನಮನ ಸಲ್ಲಿಸಿದರು.
ಹೊಸಪೇಟೆ: 18ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಸ್ಥಳೀಯ ಯುವ ಬ್ರಿಗೇಡ್ ವತಿಯಿಂದ ವಿವಿಧ ಸಂಘಟನೆಗಳ ಪದಾಧಿಕಾರಿ ಹಾಗೂ ಮುಖಂಡರು ನಗರದ ಪ್ರಮಖ ಬೀದಿಗಳಲ್ಲಿ ಮೇಣದ ಭತ್ತಿ ಮೆರವಣಿಗೆ ನಡೆಸಿದರು. ಯುವ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ನೇತೃತ್ವದಲ್ಲಿ ನಗರದ ಸಿದ್ಧಿವಿನಾಯಕ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಾಗರಿಕರು, ರೋಟರಿ ವೃತ್ತದಲ್ಲಿ ಜಮಾವಣೆಗೊಂಡು, ಮೇಣದ ಭತ್ತಿ ಬೆಳಗಿಸುವ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಅಪ್ಪಿದ್ದು, ಯೋಧರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಶಾಸಕ ಆನಂದಸಿಂಗ್ ತಂದೆ ಪೃಥ್ವಿರಾಜ್‌ಸಿಂಗ್, ಸಂದೀಪ್ ಸಿಂಗ್, ಧಮೇಂದ್ರ ಸಿಂಗ್, ನಗರಸಭೆ ಸದಸ್ಯ ಶ್ರೀಧರ ನಾಯ್ಡು, ರವಿಕಾಂತ್, ತಿಮ್ಮಪ್ಪ ಯಾದವ, ಹನುಮೇಶ ಗುಜ್ಜಲ್. ಶಶಿಧರಯ್ಯ ಸ್ವಾಮಿ, ರಾಜಶೇಖರ್ ಮಾಜಿ ಸೈನಿಕರು ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.