ಕೊಂತೆಮ್ಮ ರೊಟ್ಟಿ ಆಚರಣೆ
Team Udayavani, Nov 27, 2018, 4:32 PM IST
ಸಿರುಗುಪ್ಪ: ಗೌರಿ ಹುಣ್ಣಿಮೆ ಅಂಗವಾಗಿ ಕೊಂತೆಮ್ಮರೊಟ್ಟಿ ಆಚರಣೆ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕೊಂತೆಮ್ಮರೊಟ್ಟಿ ಆಚರಣೆ ಅಂಗವಾಗಿ 2 ಮಣ್ಣಿನ ಕೊಂತೆಮ್ಮಗಳನ್ನು ಸಂಜೆ ಮಾಳಿಗೆಯ ಮೇಲೆ ಸಗಣಿ ನೀರಿನಿಂದ ಸಾರಿಸಿ ರಂಗೋಲಿ ಹಾಕಿದ ಜಾಗದಲ್ಲಿಟ್ಟು ಕುಂಕುಮ, ಅರಿಶಿಣವಿಟ್ಟು ಅಮರೆ ಹೂವಿನಿಂದ ಅಲಂಕರಿಸಿ ಊದುಬತ್ತಿ ಹಚ್ಚಿ ಪೂಜೆ ನೆರವೇರಿಸಲಾಯಿತು. ಸಜ್ಜೆರೊಟ್ಟಿ, ಬೆಲ್ಲ, ತುಪ್ಪವನ್ನು ನೈವೇದ್ಯ ಮಾಡಿದ ನಂತರ ಕುಟುಂಬದ ಸದಸ್ಯರೆಲ್ಲರೂ ಸೇರಿ ಒಟ್ಟಾಗಿ ಭೋಜನ ಮಾಡುವುದು ಕೊಂತೆಮ್ಮರೊಟ್ಟಿ ಆಚರಣೆ ವಿಶೇಷ.
ಕೊಂತೆಮ್ಮರೊಟ್ಟಿ ಪೂಜೆಯ ಅಂಗವಾಗಿ ಸಜ್ಜೆ ರೊಟ್ಟಿ, ಜೊಳದ ರೊಟ್ಟಿ, ಚಪಾತಿ, ಎಣ್ಣೆ ಬದನೆಕಾಯಿ ಪಲ್ಯ, ಆಲೂಗಡ್ಡೆ ಪಲ್ಯ, ಹೆಸರು, ತೊಗರಿ, ಕಡ್ಲೆ, ಬಟಾಣಿ, ಅಲಸಂಕಾಳುಗಳ ಗುಗ್ಗರಿಗಳು, ಚಿತ್ರನ್ನಾ, ವೆಜೆಟೇಬಲ್ ಪಲಾವು, ಸಿಹಿಗಾರಿಗೆ ಮುಂತಾದ ವಿವಿಧ ಖಾದ್ಯಗಳನ್ನು ತಯಾರಿಸಿ ಕುಟುಂಬದ ಸದಸ್ಯರೆಲ್ಲರೂ ಸಾಮೂಹಿಕು ಭೋಜನ ಸವಿಯುತ್ತಾರೆ. ನಂತರ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.