ಕೊಟ್ಟೂರು ರಥೋತ್ಸವ: ರಥ ಕಟ್ಟುವ ಕಾರ್ಯ ಚುರುಕು
Team Udayavani, Feb 17, 2020, 4:59 PM IST
ಕೊಟ್ಟೂರು: ಪಟ್ಟಣದ ಪ್ರಸಿದ್ಧ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಫೆ.18ರಂದು ಜರಗುವ ಹಿನ್ನೆಲೆಯಲ್ಲಿ ರಥ ನಿರ್ಮಾಣ ಕಾರ್ಯ ಮತ್ತು ಸಿದ್ಧತೆ ಕಾರ್ಯಗಳು ಚುರುಕುಗೊಂಡಿವೆ. ರಥದ ಅಂಕಣಗಳಿಗೆ ಪಟ್ಟಿಗಳನ್ನು ಜೋಡಿಸಿ, ದಪ್ಪನೆ ಹಗ್ಗದಿಂದ ಬಿಗಿ ಮಾಡಲಾಗಿದೆ. ರಥಕ್ಕೆ ಬಣ್ಣದ ಬಟ್ಟೆಗಳಿಂದ ಅಲಂಕಾರ ಹಾಗೂ ಕೊನೆ ಅಂಕಣದಲ್ಲಿ ಪಟಾಕಿಗಳನ್ನು ಹಾಕಲಾಯಿತು.
ಮಹಾರಥೋತ್ಸವ ಜರುಗುವ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಓಣಿಗಳಲ್ಲಿ ಸ್ವಚ್ಛತೆ ಕಾರ್ಯ ನಡೆದಿದೆ. ನಿರ್ಮಾಣವಾಗಿರುವ ಮಿನಿ ವಾಟರ್ ಟ್ಯಾಂಕ್ ಗಳಿಗೆ ನೀರು ಭರ್ತಿ ಮಾಡಲಾಗುತ್ತಿದ್ದು, ದಾರಿಯುದ್ದಕ್ಕೂ ಟ್ರ್ಯಾಕ್ಟರ್ ಮೂಲಕ ರಸ್ತೆಗೆ ನೀರಾಯಿಸಿ, ಧೂಳಾಗದಂತೆ, ಆಗಮಿಸಿರುವ ಭಕ್ತರಿಗೆ ನೀರಿನ ತೊಂದರೆಯಾಗದಂತೆ ಮುನ್ನಚ್ಚರಿಕೆ ವಹಿಸಿದ್ದಾರೆ. ರಥ ಬೀದಿಯಲ್ಲಿನ ಎರಡೂ ಬದಿಗಳ ಪಾದಚಾರಿ ರಸ್ತೆಗಳನ್ನು ಸಣ್ಣವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೇ ಜಾತ್ರೆಯಲ್ಲಿ ಅನೇಕರು ಅಂಗಡಿಗಾಗಿ ಟೆಂಟ್ ಹಾಕುತ್ತಾರೆ. ರಥವು ಇದೇ ಬೀದಿಯಲ್ಲಿ ಸಾಗುವುದರಿಂದ ರಥ ವೀಕ್ಷಣೆಗೆ ಭಕ್ತರಿಗೆ ಜಾಗದ ಸಮಸ್ಯೆಯಾಗುತ್ತದೆ. ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯವರು ಜಂಟಿಯಾಗಿ ಪಾದಚಾರಿ ರಸ್ತೆಗಳನ್ನು ವ್ಯಾಪಾರಿಗಳಿಂದ ಮುಕ್ತಗೊಳಿಸಬೇಕೆಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ರಥೋತ್ಸವ ಪ್ರಯುಕ್ತ ದೂರದ ಮುಂಡರಗಿ, ಗದಗ, ರಾಣಿಬೆನ್ನೂರು, ದಾವಣಗೆರೆ, ಹಾಸನ, ಅರಸಿಕೇರಿ, ಬೆಂಗಳೂರು, ಚಿತ್ರದುರ್ಗ, ಕೂಡ್ಲಿಗಿ ಭಾಗಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಬರುವುದು ವಿಶೇಷ. ಹೀಗೆ ಬರುವ ಭಕ್ತರಿಗಾಗಿ ಪಟ್ಟಣದ ನಾನಾ ಸಂಘಟನೆಯವರು ಅಲ್ಲಲ್ಲಿ ಕ್ಯಾಂಪ್ ನಿರ್ಮಿಸಿ ಪಾನೀಯ, ತಿಂಡಿ, ಊಟದ ವ್ಯವಸ್ಥೆಗಳನ್ನು ಮಾಡಿದ್ದಾರೆ. ರಥದ ದಿನದಂದು ಗಚ್ಚಿನ ಮಠ, ಹಿರೇಮಠ, ತೊಟ್ಟಿಲುಮಠ, ಜೈನ ಮಂದಿರ, ಕನ್ನಿಕಾ ಪರಮೇಶ್ವರಿ, ಬನಶಂಕರಿ, ಮಾರ್ಕಂಡೇಶ್ವರ ದೇವಸ್ಥಾನಗಳಲ್ಲಿ ಸಂಘಟಕರು ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ. ಈಗಾಗಲೇ ಭಕ್ತರು ಕಾಲ್ನಡಿಗೆ ಮೂಲಕ ಕೊಟ್ಟೂರಿಗೆ ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.