ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗೋಣ
Team Udayavani, Mar 4, 2020, 5:51 PM IST
ಕೊಟ್ಟೂರು: ಮುಂದಿನ ವರ್ಷದ ತರಳುಬಾಳು ಹುಣ್ಣಿಮೆಗೆ ಕೊಟ್ಟೂರು ಕೆರೆ ಸೇರಿ 11 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗೋಣ ಸಿರಿಗೆರೆ ಮಠದ ಪೀಠಾಧಿಧೀಶ್ವರರಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಭರವಸೆ ನೀಡಿದರು.
ಕೊಟ್ಟೂರಿನಲ್ಲಿ ತರಳುಬಾಳು ಹುಣ್ಣಿಮೆ ಮಹೋತ್ಸವಕ್ಕೆ ಶ್ರೀಗಳು ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸಮುದಾಯದ ನಾಗರಕಟ್ಟೆ ರಾಜಣ್ಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳು ಸೇರಿದಂತೆ ಹಗರಿಬೊಮ್ಮನಹಳ್ಳಿಯಿಂದ ವಿವಿಧ ಸಮುದಾಯದ ಪ್ರಮುಖರು ಮತ್ತು ಶಾಸಕ ಭೀಮಾನಾಯ್ಕ ಮತ್ತು ಮಾಜಿ ಶಾಸಕ ನೇಮಿರಾಜ್ ನಾಯ್ಕ ಹಾಗೂ ಜೆಡಿಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ತಿಪ್ಪೇಸ್ವಾಮಿ ವೆಂಕಟೇಶ, ಸಾಹಿತಿ ಕುಂ.ವೀರಭದ್ರಪ್ಪ ಒಳಗೊಂಡಂತೆ ಅನೇಕ ಇತರೆ ಮುಖಂಡರು ಸಿರಿಗೆರೆ ತೆರಳಿ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು.
ತರಳುಬಾಳು ಹುಣ್ಣಿಮೆ ನಮ್ಮೊಬ್ಬರದೇ ಅಲ್ಲ. ಇದು ಸರ್ವಜನಾಂಗ ಸೇರಿ ಆಚರಿಸುವಂತಹ ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ತಿಕ ಉತ್ಸವ ಎಂದರಲ್ಲದೆ. ಅಭಿವೃದ್ಧಿ ವಿಷಯವಾಗಿ ಸ್ಥಳದಲ್ಲಿಯೇ ನೀರಾವರಿ ನಿಗಮಕ್ಕೆ ಸಂದೇಶ ಕಳುಹಿಸಿ, ಕೊಟ್ಟೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಾವ ಹಂತದಲ್ಲಿದೆ ಎಂದು ಮಾಹಿತಿ ಪಡೆದು, ಮುಂದಿನ ತರಳುಬಾಳು ಹುಣ್ಣಿಮೆಗೆ ಈ ಯೋಜನೆ ಸಾಕಾರಗೊಳ್ಳಲು ತಿಳಿಸಿ. ಇಲ್ಲಿ ನಮಗಿಂತಲೂ ನಿಮ್ಮ ಆಶಯ ಮುಖ್ಯ ಎಂದರು.
ಶಾಸಕ ಎಸ್. ಭೀಮಾನಾಯ್ಕ ಮಾತನಾಡಿ, ನಾಡಿನಲ್ಲಿ ಎಲ್ಲೆಲ್ಲಿ ತರಳುಬಾಳು ಹುಣ್ಣಿಮೆ ನಡೆದಿದೆಯೂ ಅಲ್ಲೆಲ್ಲಾ ಕೆರೆಗಳಿಗೆ ಹಾಗೂ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಹಾಗೆಯೇ ನಿಮ್ಮ ಪಾದಸ್ಪರ್ಶದಿಂದ ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬರದ ನಾಡಿನಲ್ಲಿ ಭಗೀರಥ ಶಾಶ್ವತವಾಗಿ ನೆಲಸಲಿ ಎಂದರು.
ಸಾಹಿತಿ ಕುಂ.ವೀರಭದ್ರಪ್ಪ, ಒಂಬತ್ತು ದಿವಸಗಳ ಕಾಲ ನಡೆಯುವ ತರಳುಬಾಳು ಹುಣ್ಣಿಮೆ ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ, ಅಭಿವೃದ್ಧಿಯ ಉತ್ಸವ ಇಂದು ಅದ್ಧೂರಿಯಾದ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾಗೋಣ. ಈ ಮೂಲಕ 11 ಕೆರೆಗಳಿಗೆ ನೀರು ತುಂಬಿಸುವ ಕಾರ್ಯವೂ ಆಗಲಿ ಎಂದರು.
ಹಿರಿಯ ವಕೀಲ ಹೋ.ಮ. ಪಂಡಿತಾರಾಧ್ಯ ಮಾತನಾಡಿ, ಹಿಂದಿನ ಕಾಲದಲ್ಲಿ ರಾಜರು, ಪಾಳೇಗಾರರು ಜನರಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿಸಿ ಹೋಗಿದ್ದಾರೆ. ಅವುಗಳಿಗೆ ನೀರು ತುಂಬಿಸುವ ಕಾರ್ಯವನ್ನು ಡಾ. ಶಿವಮೂರ್ತಿ ಶಿವಾಚಾರ್ಯರರು ಕೈಗೊಳ್ಳುವ ಮೂಲಕ ರೈತರ ಪಾಲಿಗೆ ಶ್ರೀಗಳು ಶಾಶ್ವತವಾಗಿ ಜಲಕಂಠೇಶ್ವರರಾಗಲಿ ಎಂದರು.
ಜೆಡಿಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ತಿಪ್ಪೇಸ್ವಾಮಿ ವೆಂಕಟೇಶ ಮಾತನಾಡಿ, 1994ರಲ್ಲಿ ಜಗಳೂರು ನಳಂದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿರುವಾಗ ಕಾಲೇಜಿನಲ್ಲಿ ನಡೆದ ತರಳುಬಾಳು ಮಹೋತ್ಸವ ಸ್ಮರಿಸಿದ ಅವರು, ಅಂತಹ ವೈಭವವಾದ ತರಳುಬಾಳು ಹುಣ್ಣಿಮೆ ಈ ಬಾರಿ ಕೊಟ್ಟೂರಿನಲ್ಲಿ ನಡೆಯುವ ಮೂಲಕ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದರೆ, ಈ ಭಾಗದ ರೈತರ ಬದುಕು ಹಸನಾಗಲಿದೆ ಎಂದರು.
ಪಂಚಮಸಾಲಿ ಮುಖಂಡ ಕೆ.ಎಸ್. ಈಶ್ವರಗೌಡ ಮುಂತಾದವರು ಮಾತನಾಡಿದರು. ರಾಜ್ಯ ಬೀಜ ನಿಗಮದ ನಿರ್ದೇಶಕ ನಾಗರಕಟ್ಟಿ ರಾಜೇಂದ್ರ ಪ್ರಸಾದ್, ವರ್ತಕ ದೇವರಮನಿ ಶಿವಚರಣ, ವೀರೇಶ ಬಿ.ಎಸ್., ಡಾ.ಬಿ.ಸಿ. ಮೂಗಪ್ಪ, ಪ.ಪಂ ಮಾಜಿ ಅಧ್ಯಕ್ಷ ಕಾಮಶೆಟ್ಟಿ ಕೊಟ್ರೇಶ, ವರ್ತಕರಾದ ಚಾಪಿ ಚಂದ್ರಪ್ಪ, ಕರಡಿ ಕೊಟ್ರಯ್ಯ, ಕೆ.ಕೊಟ್ರೇಶ, ಪ.ಪಂ ಸದಸ್ಯ ಬೋರ್‌ವೆಲ್ ತಿಪ್ಪೇಸ್ವಾಮಿ, ತಾ.ಪಂ ಹರಾಳು ಗುರುಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷ ಬಿ. ಮಾರುತಿ, ಬೋರ್‌ವೆಲ್ ಮಂಜಣ್ಣ, ಶೇಷಣ್ಣ ಕುಮಾರ್, ನಾರಪ್ಪ ಸೇರಿದಂತೆ ಎಲ್ಲಾ ಸಮುದಾಯದ ಪ್ರಮುಖರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.