ಕುರುಗೋಡು: ನಿವೇಶನದ ಸಲುವಾಗಿ ಎರಡು ಸಮುದಾಯದ ಯುವಕರ ನಡುವೆ ಸಂಘರ್ಷ
Team Udayavani, Dec 15, 2022, 8:30 PM IST
ಕುರುಗೋಡು : ಪಟ್ಟಣ ಸಮೀಪದ ಸೋಮಲಾಪುರ ಗ್ರಾಮದಲ್ಲಿ ಎರಡು ಸಮುದಾಯದ ಯುವಕರ ನಡುವೆ ನಿವೇಶನದ ಕುರಿತಾಗಿ ಘರ್ಷಣೆ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸೋಮಲಾಪುರ ಗ್ರಾಮದ ಪರಿಶಿಷ್ಟ ಸಮುದಾಯದ ಕಾಲೋನಿಯ ಮುಖ್ಯ ರಸ್ತೆ ಬಳಿಯಲ್ಲಿ 2 ರಿಂದ 3 ಅಡಿಯಷ್ಟು ಖಾಲಿ ನಿವೇಶನ ಇದ್ದು, ಅದರಲ್ಲಿ ಮಾದಲಿನಿಂದ ಎಸ್ಸಿ ಸಮುದಾಯದ ಜನರು ಕಲ್ಲು ಬಂಡೆಗಳು, ಕ್ವಾಡುಗಳು ಮತ್ತು ಜಾನುವಾರುಗಳು, ಬಂಡಿ ಇತರೆ ಸಮಾಗ್ರಿಗಳನ್ನು ಹಾಕಿಕೊಂಡು ಬರುತಿದ್ದು, ಅಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಯುವಕರು ಹಾಗೂ ಮುಖಂಡರು ಎರಡು ಸಮುದಾಯದ ಜನರು ಕುಳಿತುಕೊಳ್ಳುತ್ತಿದ್ದರು ಆದರೆ ಕೆಲ ಯುವಕರು ಇದ್ದಕ್ಕೆ ಇದ್ದಂತೆ ನಿವೇಶನದ ಸಲುವಾಗಿ ವಿವಾದಕ್ಕೆ ಗುರಿಯಾಗಿ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡಿದ್ದಾರೆ. ನಂತರ ಸ್ಥಳಕ್ಕೆ ಎರಡು ಸಮುದಾಯದ ಮುಖಂಡರು ಬಂದು ಯುವಕರನ್ನು ಸಮಾಧಾನ ಪಡಿಸಿದ್ದಾರೆ. ಆದರೂ ಇದಕ್ಕೆ ಸುಮ್ಮನೆ ಇರದೆ ವಿಷಯ ತಾರಕ್ಕೇರಿ ಠಾಣೆ ಮೆಟ್ಟಿಲೀರಿ ವಿವಾದಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ತೋರಣಗಲ್ಲು ಡಿವೈಎಸ್ಪಿ ಎಸ್. ಎಸ್. ಕಾಶಿ, ಸಿಪಿಐ ಚಂದನ್ ಗೋಪಾಲ್, ಪಿಎಸ್ ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ಸಮುದಾಯದ ಜನರಿಂದ ಅಹವಾಲು ಸ್ವೀಕಾರ ಮಾಡಿದರು.
ಇದೆ ವೇಳೆ ಸಮುದಾಯದ ಮುಖಂಡರು ಮಾತನಾಡಿ, ಸೋಮಲಾಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನರು ಮೊದಲಿನಿಂದ ಅಣ್ಣ ತಮ್ಮಂದಿರಂತೆ ಅನುಕೂಲತೆಯಿಂದ ಜೀವನ ಮಾಡಿಕೊಂಡು ಹೋಗುತ್ತಿದ್ದೇವೆ, ಯಾವ ಸಮಸ್ಯೆಯು ಇಲ್ಲ. ಯುವಕರು ವಾದ ಮಾಡಿಕೊಂಡಿದ್ದಾರೆ. ಅವರಿಗೆ ಬುದ್ದಿ ಮಾತು ಹೇಳುತ್ತೇವೆ. ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಎಸ್. ಎಸ್. ಕಾಶಿ ಮಾತನಾಡಿ, ಸೋಮಲಾಪುರ ಗ್ರಾಮದಲ್ಲಿ ಎಸ್ಸಿ. ಎಸ್ಟಿ ಸಮುದಾಯದ ಜನರು ಬಹಳ ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದೀರಿ,ಎಲ್ಲರೂ ಒಗ್ಗಟ್ಟಾಗಿ ನಡೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಇಲ್ಲ ಸಲ್ಲದ ಕಾರಣ ಗಳಿಂದ ಗಲಭೆ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಬೇಕು ಆಗುತ್ತದೆ. ಇನ್ನೂ ಜಾತಿ ತಾರತಮ್ಯ, ಮೇಲು ಕೀಳು ಅಂತ ವಿವಾದಕ್ಕೆ ಈಡದಾರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಲ್ಲರೂ ಸಂವಿಧಾನ ಬದ್ದವಾಗಿ, ಅದಕ್ಕೆ ಅನುಗುಣವಾಗಿ ಅನುಕೂಲತೆಯಿಂದ ಕೂಡಿ ಹೋಗಬೇಕು, ಖಾಲಿ ನಿವೇಶನದಲ್ಲಿ ಇರುವಂತ ಎಲ್ಲ ಸಮಾಗ್ರಿಗಳನ್ನು ತೇರುವು ಗೊಳ್ಳಿಸಲಾಗುವುದು, ಅ ಸ್ಥಳದಲ್ಲಿ ಯಾರು ಕುಳಿತು ಕೊಳ್ಳಬಾರದು. ಇದಕ್ಕೆ ವಿರುದ್ಧವಾಗಿ ಯಾರಾದರೂ ಕುಳಿತರೆ ಅಂತವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದ ಮುಖಂಡರು ತಮ್ಮ ತಮ್ಮ ಮಕ್ಕಳಿಗೆ ಒಳ್ಳೆಯ ಜೀವನ ನಡೆಸಿಕೊಂಡು ಹೋಗಲು ಹೇಳಬೇಕು. ಇನ್ನೂ ಸಣ್ಣ ವಯಸ್ಸಿನಲ್ಲಿ ಇತರ ಗಲಾಟೆ ಗಳು ಮಾಡಿಕೊಂಡರೆ ಜೀವನ ದಲ್ಲಿ ಬೆಳೆಯಲು ಕಷ್ಟ ವಾಗುತ್ತದೆ ಎಂದು ಸಲಹೆ ಸೂಚಿಸಿ, ಎರಡು ಸಮುದಾಯವನ್ನು ಒಗ್ಗೂಡಿಸಿ ಸಂಧಾನ ಮಾಡಿಸಿದರು.
ಇದೆ ವೇಳೆ ಎಸ್ಸಿ ಸಮುದಾಯದ ಮುಖಂಡರು ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನೆಯ ಜಿಲ್ಲಾ ಸಂಚಾಲಕ ಲಿಂಗಪ್ಪ ಸೇರಿ ಖಾಲಿ ನಿವೇಶನ ದಲ್ಲಿ ಅಂಬೇಡ್ಕರ್ ಅವರ ನಾಮಫಲಕ ಅನಾವರಣ ಮಾಡುವುದಾಗಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮದ ಮುಖಂಡರ ಜೊತೆ ಮಾತನಾಡಿ ಹಾಗೂ ಸ್ಥಳೀಯ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದು ಮಾಡಿಕೊಳ್ಳಿ ಎಂದು ತಿಳಿಸಿದರು.
ಗ್ರಾಮದಲ್ಲಿ ಒಂದು ದಿನ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು, ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.