ಬೆಳೆ ಕಟಾವು: ಕಾರ್ಮಿಕರಿಗೆ ಫುಲ್ ಡಿಮ್ಯಾಂಡ್!
ಕಾರ್ಮಿಕರ ಹುಡುಕಾಟದಲ್ಲಿ ಅನ್ನದಾತ ಇಳುವರಿ ಕುಂಠಿತದಿಂದ ರೈತರಿಗೆ ಹೊರೆ
Team Udayavani, Mar 2, 2020, 12:52 PM IST
ಕುರುಗೋಡು: ರೈತರು ಬೆಳೆದ ಬೆಳೆಗಳನ್ನು ಕಟಾವು ಮಾಡಲು ದೂರದ ಗ್ರಾಮಗಳಿಂದ ಟಾಟಾ ಏಸ್‌ಗಳಲ್ಲಿ ಬಂದಿರುವ ಕೂಲಿ ಕಾರ್ಮಿಕರು
ಕುರುಗೋಡು: ರೈತರು ಬೆಳೆದ ಮಿಶ್ರ ಬೇಸಾಯದ ಬೆಳೆಗಳನ್ನು ಕಟಾವು ಮಾಡಿಸಲು ರೈತರಿಗೆ ಕೂಲಿ ಕಾರ್ಮಿಕರು ಸರಿಯಾಗಿ ಸಿಗದೆ ಬೇರೆ ಬೇರೆ ಗ್ರಾಮಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಬೆಳೆಗಳನ್ನು ಕಟಾವು ಮಾಡಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
ಕುರುಗೋಡು ಪಟ್ಟಣ ಸೇರಿದಂತೆ ಸಿದ್ದಮ್ಮನಹಳ್ಳಿ, ಯರ್ರಂಗಳ್ಳಿ, ಕೋಳೂರು, ಕೊರ್ಲಗುಂ , ಹಡ್ಲಿಗಿ, ಜಾಲಿಬೆಂಚಿ, ದಮ್ಮೂರು, ಬೈಲೂರು, ಏಳುಬೆಂಚಿ ಇತರೆ ಗ್ರಾಮಗಳಲ್ಲಿ ಅತಿ ಹೆಚ್ಚಾಗಿ ಮೆಣಿಸಿನಕಾಯಿ, ಜೋಳ, ಹತ್ತಿ, ಸಜ್ಜಿ, ಅಲಸಂ , ತೋಗರಿ ಇತರೆ ಮಿಶ್ರ ಬೇಸಾಯ ಪದ್ಧತಿ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಇನ್ನೂ ಕುರುಗೋಡು ಮತ್ತು ಕೋಳೂರು ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ರೈತರು ಮೆಣಿಸಿನಕಾಯಿ 14 ಸಾವಿರ ಎಕರೆ, ಹತ್ತಿ 7 ಸಾವಿರ ಎಕರೆ, ಜೋಳ 11 ಸಾವಿರ ಎಕರೆ, ಸಜ್ಜಿ 600 ಎಕರೆ, ತೋಗರಿ 4 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಗಳು ನಾಟಿ ಮಾಡಿದ್ದಾರೆ.
ಜುಲೈ ತಿಂಗಳಲ್ಲಿ ಬೆಳೆಗಳು ನಾಟಿ ಮಾಡಿದ್ದು ಡಿಸೆಂಬರ್ ತಿಂಗಳ ಕೊನೆ ದಿನಗಳಿಂದ ಕಟಾವು ಮಾಡಲಾರಂಭಿಸಿದ್ದಾರೆ. ಈಗಾಗಲೇ ಎರಡು ಮೂರು ತಿಂಗಳಿಂದ ಮೆಣಿಸಿನಕಾಯಿ ಮತ್ತು ಹತ್ತಿ ಬೆಳೆಯ ಕಟಾವು ಬಹಳ ಜೋರಾಗಿ ನಡೆಯುತ್ತಿದ್ದು ಸರಿಯಾದ ಸಮಯಕ್ಕೆ ಬೆಳೆಗಳನ್ನು ಕಟಾವು ಮಾಡಿಸಲು ಕೂಲಿಕಾರ್ಮಿಕರು ಸಿಗದ ಕಾರಣ ಕನಕಗಿರಿ, ಸಿರಿಗೇರಿ, ಕುಡತಿನಿ, ಬಳ್ಳಾರಿ, ಕಂಪ್ಲಿ, ಎಮ್ಮಿಗನೂರು, ಕುರುಗೋಡು, ಮಣ್ಣೂರು ಸೂಗೂರು, ನಡವಿ, ರುದ್ರಪಾದ, ರಾಮಸಾಗರ, ಇಟ್ಲಾಪುರ ಸೇರಿದಂತೆ ಇತರೆ ಬೇರೆ ಬೇರೆ ಗ್ರಾಮಗಳಿಂದ ಕೂಲಿಕಾರ್ಮಿಕರು ಟಾಟಾ ಎಸಿಗಳಲ್ಲಿ ಬೆಳ್ಳಂಬೆಳಗ್ಗೆ ಬಂದು ಬೆಳೆಗಳನ್ನು ಕಟಾವು ಮಾಡುತ್ತಿದ್ದಾರೆ.
ಕೂಲಿ ಕಾರ್ಮಿಕರಿಗೆ ಡಿಮ್ಯಾಂಡ್: ಮೆಣಿಸಿನಕಾಯಿ ಮತ್ತು ಹತ್ತಿ
ಸೇರಿದಂತೆ ಇತರೆ ಬೆಳೆಗಳನ್ನು ಕಟಾವು ಮಾಡಲು ಸ್ಥಳೀಯವಾಗಿ ಕೂಲಿ ಕಾರ್ಮಿಕರು ಸಿಗದ ಪರಿಣಾಮ ರೈತರು ಬೇರೆ ಬೇರೆ ಗ್ರಾಮಗಳಿಂದ ಕಾರ್ಮಿಕರನ್ನು ಕರೆತಂದು ಒಪ್ಪಂದದ ಮೇರೆಗೆ ಕಟಾವು ಮಾಡಿಸುತ್ತಿದ್ದಾರೆ. ಮೆಣಿಸಿನಕಾಯಿ ಬೆಳೆಗಳಲ್ಲಿ ಸಿಡ್ಸ್
ಕಾಯಿ, 5531, 255, 355, ಹಿಂಡೋ 05, ದ್ಯಾವನೂರು ಸಿಡ್ ಕಾಯಿಗಳನ್ನು ಕಾರ್ಮಿಕರು ಎಕರೆಗೆ 16 ಸಾವಿರದಿಂದ 20 ಸಾವಿರದವರೆಗೆ ಒಪ್ಪಂದದ ಮೇರೆಗೆ ಕಟಾವು ಮಾಡುತ್ತಿದ್ದಾರೆ.
ಇನ್ನೂ ಕೆಡಿಎಲ್ ಬ್ಯಾಡಗಿ, ಸರ್ಪನ್ ಬ್ಯಾಡಗಿ 102, ಸಿಜೆಂಟಾ ಕಾಯಿಗಳನ್ನು ಎಕರೆಗೆ 8 ಸಾವಿರದಿಂದ 11 ಸಾವಿರದವರೆಗೆ ಕಟಾವು ಮಾಡುತ್ತಿದ್ದಾರೆ. ರೈತರು ಎಕರೆಗೆ ದುಪ್ಪಟ್ಟು ಹಣ ನೀಡಿದರೂ ಬೆಳೆಗಳ ಕಟಾವಿಗೆ ಕೂಲಿ ಕಾರ್ಮಿಕರು ಸಿಗದೆ ನಿತ್ಯ ಪರದಾಡಬೇಕಾಗಿದೆ. ಇದರಿಂದ ಕಾರ್ಮಿಕರಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ರೈತರು ಬೆಳೆದ ಬೆಳೆಗಳು ಅಚ್ಚುಕಟ್ಟಾಗಿ ಬೆಳದಿವೆ. ರೈತರು ಇವುಗಳ ಜೊತೆಗೆ ಇನ್ನೂ ಹೆಚ್ಚಾಗಿ ಮಿಶ್ರ ಬೇಸಾಯದ ಬೆಳೆಗಳು ಬೆಳೆದರೆ ಯಾವುದೇ ರೋಗಬಾಧೆಗಳು ಕಾಣದೆ. ಹೆಚ್ಚಿನದಾಗಿ ಇಳುವರಿ ಕಾಣಬಹುದು.
ದೇವರಾಜ,
ಕೃಷಿ ಅಧಿಕಾರಿಗಳು ಕುರುಗೋಡು
ಈ ಭಾಗದಲ್ಲಿ ಅತಿ ಹೆಚ್ಚಾಗಿ ಮೆಣಿಸಿನಕಾಯಿ ಮತ್ತು ಹತ್ತಿ ಬೆಳೆಗಳು ಬೆಳದಿದ್ದಾರೆ. ಈಗಾಗಲೇ ಬೆಳೆಗಳು ಕಟಾವಿಗೆ ಬಂದಿದ್ದು ಸರಿಯಾಗಿ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಬೇರೆ ಬೇರೆ ದೂರದ ಗ್ರಾಮಗಳ ಕೂಲಿ ಕಾರ್ಮಿಕರನ್ನು ಕರೆಸಿ ಬೆಳೆಗಳನ್ನು ಕಟಾವು ಮಾಡಿಸಬೇಕಾಗಿದೆ. ಅವರನ್ನು ಕರೆಸುವುದರಿಂದ ಸಿಕ್ಕಾಪಟ್ಟೆ ಖರ್ಚು ಬರುತ್ತಿದೆ. ಅದರಲ್ಲಿ ಬೆಳೆಗಳ ಇಳುವರಿ ಕೂಡ ಕಡಿಮೆ. ಇದರಿಂದ ರೈತರ ಬದುಕ ಚಿಂತಾಜನಕವಾಗಿದೆ.
ಸಿದ್ದನಗೌಡ ಬಾದನಹಟ್ಟಿ , ರೈತ
ಸುಧಾಕರ್ ಮಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.