ಕುರುಗೋಡು : ಧಾರಾಕಾರ ಮಳೆಗೆ ಮನೆ ಕುಸಿತ, ಸೇತುವೆಗಳು ಜಾಲವೃತ, ಗದ್ದೆಗಳಿಗೆ ನುಗ್ಗಿದ ನೀರು
Team Udayavani, Aug 28, 2022, 12:13 PM IST
ಕುರುಗೋಡು : ಪಟ್ಟಣದ ಸುತ್ತಮುತ್ತ ಶನಿವಾರ ರಾತ್ರಿ 42.04 ಮೀ ಮೀ ಮಳೆಯಾಗಿದ್ದು, ರಾತ್ರಿಯಿಡಿ ಸುರಿದ ಮಳೆಯಿಂದ ಗುತ್ತಿಗನೂರು ಗ್ರಾಮದ ರೈತರಾದ ಚಾನಾಳ್ ಗುರುಸಿದ್ದಪ್ಪ, ದಮ್ಮೂರು ಮಲ್ಲಮ್ಮ ಗಂಡ ನಾಗನಗೌಡ, ಕೋಳೂರು ಬಡಿಗೇರ್ ಬಸವರಾಜ್ ಆಚಾರಿ ಸೇರಿ 3 ಮನೆಯ ಗೋಡೆಗಳು ಮತ್ತು ಮೆಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿವೆ ಯಾವುದೇ ಅಪಾಯ ಸಂಭವಿಸಿಲ್ಲ, ಇನ್ನೂ ಬಾದನಹಟ್ಟಿ ಮತ್ತು ಏರಂಗಳ್ಳಿ ಗ್ರಾಮಗಳ ಮಧ್ಯದಲ್ಲಿರುವ ಹಳ್ಳದ ಸೇತುವೆಯ ದಡ ಸೋಸಿ ಹರಿಯುತ್ತಿದ್ದು, ಅದರ ಪಕ್ಕದಲ್ಲಿ ನೂರಾರು ರೈತರು ಭತ್ತ ನಾಟಿ ಮಾದಿದ ಗದ್ದೆಗಳಿಗೆ ನೀರು ನುಗ್ಗಿ ಹರಿಯುತ್ತಿವೆ. ಇದರಿಂದ ರೈತರಿಗೆ ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಸಿದ್ದಮ್ಮನಹಳ್ಳಿ ಗ್ರಾಮದ ಹಳ್ಳದ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಕುಡುತೀನಿ, ಬಳ್ಳಾರಿ, ಸಂಡೂರು, ತೋರಣಗಲ್ಲು ಸೇರಿದಂತೆ ವಿವಿಧ ತಾಲೂಕು ಮತ್ತು ಗ್ರಾಮಗಳಿಗೆ ತೆರಳುವ ಜನರು ಪರದಾಡುವಂತಾಗಿದೆ.
ಇನ್ನೂ ರುದ್ರಪಾದ ಗ್ರಾಮದ ಹಳ್ಳದ ಸೇತುವೆ ಮೇಲೆ ಎರಡು ದಿನದಿಂದ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ತುಂಬಾ ತೊದ್ರೆ ಆಗಿದೆ. ಅಲ್ಲದೆ ಈ ಸೇತುವೆ ಮೂಲಕ ಕಂಪ್ಲಿ ಮಾರ್ಗವಾಗಿ ಸಿರುಗುಪ್ಪ, ಸಿಂಧನೂರು, ರಾಯಚೂರು ಆದೋನಿ, ಕರ್ನುಲ್, ಸೇರಿದಂತೆ ವಿವಿಧ ಭಾಗದ ಜಿಲ್ಲೆ ಮತ್ತು ರಾಜ್ಯಗಳಿಗೆ ತೆರಳುವ ಜನರಿಗೆ ತುಂಬಾ ಅನುಕೂಲವಾದ ಮಾರ್ಗವಾಗಿದ್ದು, ಸದ್ಯ ಮಳೆಯಿಂದ ಸೇತುವೆ ಮುಳುಗಡೆ ಯಾದ ಪರಿಣಾಮ ದೂರದ ರಸ್ತೆಗಳ ಮೂಲಕ ಸುತ್ತಿಕೊಂಡು ಹೋಗಿ ಸಂಚಾರಿಸಬೇಕಾಗಿದೆ. ಇನ್ನೂ ನದಿ ಯಲ್ಲಿ ಮೊಸಳೆ ಹಾವಳಿಗಳ ಕಾಟ ತುಂಬಾ ಆಗಿದ್ದು ಮುಳಗಡೆಯಾದ ಸೇತುವೆ ಮೇಲಿಂದ ಸಂಚಾರಿಸಲು ಹರಸಾಹಸ ಪಡುತಿದ್ದು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸೇತುವೆ ಡಾಟಬೇಕಾಗಿದೆ. ಪ್ರತಿ ವರ್ಷ ಮಳೆ ಬಂದರೂ ಬಹುತೇಕ ಸೇತುವೆಗಳು ಮುಳುಗಡೆ ಆಗುತ್ತಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಸೇತುವೆ ದುರಸ್ತಿಗೆ ಮುಂದಾಗದೆ ಇರುವುದು ದುರಂತವಾಗಿದೆ.
ಪಟ್ಟಣದ ಸುತ್ತಮುತ್ತ ಬಹುತೇಕ ಸರಕಾರಿ ಶಾಲೆಗಳಿಗೆ ಕೂಡ ಮಳೆ ನೀರು ನುಗ್ಗಿ ಕೆಸರು ಗಡ್ಡೆಯಂತೆ ಮಾರ್ಪಟ್ಟಿವೆ.
ಕುಸಿದ ಮನೆಗಳಿಗೆ ಹಾಗೂ ಜಾಲವೃತ ಗೊಂಡ ರೈತರ ಜಮೀನುಗಳಿಗೆ ತಹಸೀಲ್ದಾರ್ ರಾಘವೇಂದ್ರ ರಾವ್, ಗ್ರೇಡ್ ತಹಸೀಲ್ದಾರ್ ಮಲ್ಲೇಶಪ್ಪ, ಗ್ರಾಮಲೆಕ್ಕಿಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ವರದಿಯನ್ನು ಸಂಗ್ರಹಿಸಿದ್ದು ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಾ ನಂತರ ಸರಕಾರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.