ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗಿಲ್ಲ : ಕೋಳೂರು ಗಾಧಿಲಿಂಗ ಕಿಡಿ
Team Udayavani, Jun 8, 2022, 2:56 PM IST
ಕುರುಗೋಡು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಟೀಕಿಸುವ ನೈತಿಕತೆ ಕೋಮುವಾದಿ ಬಿಜೆಪಿ ಪಕ್ಷಕ್ಕಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಕೋಳೂರು ಗಾದಿಲಿಂಗಪ್ಪ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥಯಾತ್ರೆ ಉಸ್ತುವಾರಿ ನೀಡಿ ಒಂದು ಬಾರಿಯು ಶಾಸಕರಾಗಿರದ ದೆಹಲಿಯ ಗಲ್ಲಿಯಲ್ಲಿ ತಿರುಗಾಡಿಕೊಂಡಿದ್ದ ಮೋದಿಯವರನ್ನ ಕರೆಯಿಸಿಕೊಂಡು ಮುಖ್ಯಮಂತ್ರಿಯನ್ನಾಗಿಸಿದ್ದು ಉಕ್ಕಿನ ಮನುಷ್ಯ ಎಲ್.ಕೆ.ಅಡ್ವಾನಿ ಅಂತಹ ಅಡ್ವಾನಿಯವರನ್ನ ಮಾತನಾಡಿಸುವ ಕನಿಷ್ಟ ಸೌಜನ್ಯ ಪ್ರಧಾನಿ ಮೋದಿಯವರಿಗೆ ಇಲ್ಲ. ಅವರು ಕೈಮುಗಿದುಕೊಂಡು ನಿಂತರು ಕಂಡು ಕಾಣದಂತೆ ಮುಂದೆ ಹೋಗುವ ಮೂಲಕ ಗುರು ದ್ರೋಹ ಮಾಡಿದಂತಾಗಿದೆ. ಅಲ್ಲದೆ ಅವರಿಗೆ ರಾಜಕೀಯವಾಗಿ ಯಾವುದೇ ಸ್ಥಾನ ಮಾನ ಕಲ್ಪಿಸದೆ ಇರುವುದು ನಿಜಕ್ಕೂ ದುರಂತ ಎಂದು ಬೇಸಾರ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ನೆರವಿನಿಂದ ರಾಜ್ಯದಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದ ಬಿಜೆಪಿ ಅವರನ್ನೆ ಜೈಲಿಗೆ ಕಳುಹಿಸಿ ಕಡೆಗೆ ಅವರ ಮಗ ವಿಜಯೇಂದ್ರ ಅವರಿಗೆ ಎಂಎಲ್ ಸಿ ಮಾಡದೆ ವಂಚಿಸಿದ್ದು ಉಂಡ ಮನೆಗೆ ದ್ರೋಹ ಬಗೆದಂತಾಗಿದೆ.
ಬೆಳಗಾವಿಯಲ್ಲಿ ಸುರೇಶ್ ಅಂಗಡಿ ನಿಧನರಾದಾಗ ಅವರ ಪತ್ನಿಗೆ ಟಿಕೇಟ್ ನೀಡಿ ನಂತರ ಅನಂತಕುಮಾರ್ ನಿಧನರಾದಾಗ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೇಟ್ ನೀಡದೆ ತೇಜಸ್ವಿ ಸೂರ್ಯ ಎಂಬ ಬಕೇಟ್ ಗಿರಾಕಿಗೆ ಟಿಕೇಟ್ ನೀಡಿ ಎಂಪಿ ಮಾಡಿದ್ದು ಯಾವ ನಾಯಕರು ಮತ್ತು ಯಾವ ಪಕ್ಷ ಇದೆಲ್ಲದನ್ನು ಬಿಟ್ಟು ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ತಾಯಿಗೆ ಅನಾರೋಗ್ಯ ನೆಪವೊಡ್ಡಿ ಫೇಸ್ ಬುಕ್ ಸ್ನೇಹಿತರ ಕಾರು ಪಡೆದು ಮಾರಾಟ: ಆರೋಪಿ ಬಂಧನ
ಎಸ್.ಎಂ.ಕೃಷ್ಣ ಅವರು ಕಾಂಗ್ರೇಸ್ ನಲ್ಲಿ ಮುಖ್ಯಮಂತ್ರಿಗಳಾಗಿ. ರಾಜ್ಯಪಾಲರಾಗಿ ಅತ್ಯನ್ನುತ ಸ್ಥಾನಗಳನ್ನ ಅಲಂಕರಿಸಿ ಕಡೆಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಸೇರಿಕೊಂಡಿದ್ದು ಇದು ನ್ಯಾಯವೇ ಎಂದರು.
ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ಇರುವೆ ಬಗ್ಗೆ ಮಾತನಾಡುವುದು ಸೌಜನ್ಯ ವಲ್ಲ ಎಂದರು.
***
11 ಕೋಟಿ 50 ಲಕ್ಷ ವೆಚ್ಚದಲ್ಲಿ ಕುರುಗೋಡು ಮತ್ತು ಕಂಪ್ಲಿ ಮುಖ್ಯ ರಸ್ತೆ ಕಾಮಗಾರಿಗೆ ಶೀಘ್ರದಲ್ಲೆ ಚಾಲನೆ : ಶಾಸಕ ಗಣೇಶ್
ಕುರುಗೋಡು : ಕಂಪ್ಲಿ ಮತ್ತು ಕುರುಗೋಡು ಡಾಂಬರಿಕಾರಣ ರಸ್ತೆಯು ಸುಮಾರು 11ಕೋಟಿ 50 ಲಕ್ಷ ವೆಚ್ಚದ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಾಗುವುದು ಎಂದು ಶಾಸಕ ಜೆ. ಎನ್. ಗಣೇಶ್ ಹೇಳಿದರು.
ಪಟ್ಟಣದ ಗುತ್ತಿಗನೂರು, ಪಟ್ಟಣಸೆರಗು, ಎಮ್ಮಿಗನೂರು ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಕುರುಗೋಡು ಮುಖ್ಯ ರಸ್ತೆಯು ಲಕ್ಷ್ಮಿ ಪುರ ಗ್ರಾಮದಿಂದ ಎಮ್ಮಿಗನೂರು ಗ್ರಾಮದ ಈರಣ್ಣ ದೇವಸ್ಥಾನದವರೆಗೆ ಡಾಂಬರಿಕಾರಣ ರಸ್ತೆ ನಿರ್ಮಾಣ ಗೊಂಡಿದೆ. ಈರಣ್ಣ ದೇವಸ್ಥಾನ ದಿಂದ ಎಮ್ಮಿಗನೂರು ಗ್ರಾಮದವರೆಗೆ ರಸ್ತೆ ಹದೆಗೆಟ್ಟಿದ್ದು ಸಾರ್ವಜನಿಕರ ಅನುಕೂಲಕ್ಕೆ ಕೂಡಲೇ 5 ಕೋಟಿ 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗಲಿದೆ. ಅಲ್ಲದೆ ಶಾಸಕರ ಅನುದಾನ ಕೇವಲ 4 ಕೋಟಿ ಇರುವುದುದರಿಂದ ಮುಖ್ಯಮಂತ್ರಿ ವಿಶೇಷ ಅನುದಾನದಡಿಯಲ್ಲಿ 6 ಕೋಟಿ ಬಿಡುಗಡೆ ಗೊಂಡಿದ್ದು, ಆ ಒಂದು ಅನುದಾನ ವನ್ನು ಎಮ್ಮಿಗನೂರು ಗ್ರಾಮದಿಂದ ಶಾಂತಿನಗರ ಮುಖ್ಯ ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ರಂಪಾಟ ಮಾಡಿಕೊಂಡು ಚುನಾವಣೆ ನಡೆಸಲು ನಾನು ಸಿದ್ಧನಿಲ್ಲ: ಡಿ.ಕೆ. ಶಿವಕುಮಾರ್
ಇನ್ನೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಜನರು ಮಾತನಾಡುತಿದ್ದರು ಈಗ ಅಭಿವೃದ್ಧಿ ಕಾರ್ಯಗಳು ನೋಡಿ ಜನರಿಗೆ ಶಕ್ತಿ ಬಂದಿದೆ ಜೊತೆಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಕೆಲಸ ಕಾರ್ಯಗಳು ನೋಡಿ ನಿಜವಾದ ಜನ ನಾಯಕ ಯಾರು ಎಂದು ಈಗಾಗಲೇ ಜನರಿಗೆ ಗೊತ್ತಾಗಿದೆ ಅದು ಹೇಳುವ ಅವಶ್ಯಕತೆ ಇಲ್ಲ ಎಂದರು.
ಇನ್ನೂ ನಮ್ಮ ಅವಧಿ ಕೇವಲ 1 ವರ್ಷ ಇದ್ದು ಅಷ್ಟರಲ್ಲಿ ಆದಷ್ಟು ಹೆಚ್ಚಿನ ರೀತಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ತಿಳಿಸಿದರು.
ಕುಡಿಯುವ ನೀರು, ವಿದ್ಯುತ್, ಶಿಕ್ಷಣ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಜನರಿಗೆ ಮೂಲ ಸೌಕಾರ್ಯ ಒದಗಿಸಿ ಕೊಡಲು ನಿರಂತರ ಶ್ರಮಿಸುವದಾಗಿ ಹೇಳಿದರು. ನಮ್ಮ ಅಧಿಕಾರದ ಅವಧಿಯಲ್ಲಿ ಗುಣಮಟ್ಟದ ವಿಚಾರದಲ್ಲಿ ರಾಜಿ ಇಲ್ಲ ಆದ್ದರಿಂದ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಸೂಚಿಸಿದರು.
ಕೊನೆಯದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಕಾಮಗಾರಿ ಬಗ್ಗೆ ಪತ್ರಕರ್ತರು ಕೇಳಿದ ಪ್ರೆಶ್ನೆಗೆ ಉತ್ತರ ನೀಡದೆ ಸ್ಥಳದಿಂದ ನಿಧಾನವಾಗಿ ಜರಗಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’
Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.