![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 16, 2022, 6:56 PM IST
ಕುರುಗೋಡು: ಗದ್ದೆಗೆ ನೀರು ಕಟ್ಟಲು ಮನೆಯಿಂದ ಹೊರಹೋದ ವ್ಯಕ್ತಿಯೊಬ್ಬರು ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದು, ಇದು ಸಹಜ ಸಾವಲ್ಲ, ಕೊಲೆಯಾಗಿದೆ ಎಂದು ಮೃತನ ಕುಟುಂಬಸ್ಥರು ದೂರು ನೀಡಿದ್ದಾರೆ.
ಸಮೀಪದ ಗುತ್ತಿಗನೂರು ಸಿದ್ದಪ್ಪ (35) ಅನುಮಾಸ್ಪದವಾಗಿ ತಲೆಗೆ ಮತ್ತು ಮುಖಕ್ಕೆ ಅಲ್ಲಲ್ಲಿ ಪೆಟ್ಟು ಬಿದ್ದು ಮೃತಪಟ್ಟ ವ್ಯಕ್ತಿ.ವಿವಾಹ ವಾಗಿ ಇಬ್ಬರು ಹೆಣ್ಣುಮಕ್ಕಳು ಮತ್ತು ಪತ್ನಿ ಹಾಗೂ ತಾಯಿ ಇದ್ದಾರೆ ಎಂದು ತಿಳಿದು ಬಂದಿದೆ.
ಮೃತ ದುರ್ದೈವಿ ಸಿದ್ದಪ್ಪ ತನ್ನ ಅಕ್ಕನ 1 ಎಕರೆ ಭತ್ತದ ಗದ್ದೆ ನಾಟಿ ಮಾಡಿದ್ದು, ಗದ್ದೆಗೆ ನೀರು ಕಟ್ಟಲು ಗುರುವಾರ ಸಂಜೆ 7 ಗಂಟೆಗೆ ಹೋಗಿದ್ದು ಸತತ ಮೂರು ದಿನ ಗದ್ದೆಗೆ ನೀರು ಹರಿಸಿದರು ಗದ್ದೆಯಲ್ಲಿ ನೀರು ಕಾಣದ ಕಾರಣ ಮೂರು ದಿನ ದಿಂದ ಗದ್ದೆ ಕಡೆಗೆ ಸುತ್ತಾಡಿದ್ದಾನೆ. ಗುರುವಾರ ರಾತ್ರಿ ಕುಟುಂಬದವರು ಇನ್ನೂ ಮನೆಗೆ ಬಂದಿಲ್ಲ ಎಂದು ಬೇರೆ ಕಡೆಯಲ್ಲ ಹುಡುಕಾಡಿದ್ದಾರೆ ಸಿಕ್ಕಿಲ್ಲ. ಶುಕ್ರವಾರ ಬೆಳಿಗ್ಗೆ ಗದ್ದೆಯ ಕಾಲುವೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ತೆಲೆಗೆ ಪೆಟ್ಟು ಹಾಗೂ ಮೂಗು ಬಾಯಿಯಲ್ಲಿ ರಕ್ತ ಬಂದಿರುವುದು ಕಂಡು ಕುಟುಂಬಸ್ಥರು ಇದು ಸಹಜ ಸಾವಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಕುರುಗೋಡು ಸಿಪಿಐ ಚಂದನ್ ಗೋಪಾಲ್ ಮತ್ತು ಪಿಎಸ್ ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.