ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಿ
Team Udayavani, Mar 9, 2020, 5:52 PM IST
ಕುರುಗೋಡು: ಉಜ್ಜಯಿನಿ ಸದ್ಧರ್ಮ ಸಿಂಹಾಸನಾ ಧೀಶ್ವರ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಜನಜಾಗೃತಿ ಸಭೆಯಲ್ಲಿ ಜಿಪಂ ಸದಸ್ಯೆ ಎಸ್.ಎಂ.ರತ್ನಮ್ಮ ಅಡಿವೆಯ್ಯ ಸ್ವಾಮಿ ಕುಟುಂಬದವರಿಂದ ಶ್ರೀಗಳಿಗೆ ತುಲಾಭಾರ ಸೇವೆ ಸಲ್ಲಿಸಲಾಯಿತು.
ಕುರುಗೋಡು: ದೇವಸ್ಥಾನಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಲ್ಲಿ ವಿವಾಹ ಮಾಡಿಕೊಳ್ಳುವವರು ಶ್ರೀಮಂತರಲ್ಲ, ಬಡವರಲ್ಲ, ನಿರ್ಗತಿಕರಲ್ಲ ಅವರು ಭಾಗ್ಯವಂತರು ಎಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೇರಿ ನಾಗನಾಥೇಶ್ವರ ದೇವಸ್ಥಾನದ ಅವರಣದಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧಿಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಪುರ ಪ್ರವೇಶ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ತುಲಾಭಾರ ಸೇವೆ, ಜನಜಾಗೃತಿ ಸಭೆಯ ಅಂಗವಾಗಿ ಜಿಪಂ ಸದಸ್ಯೆ ಎಸ್.ಎಂ.ರತ್ನಮ್ಮ ಅಡಿವೆಯ್ಯ ಸ್ವಾಮಿ ಅವರ ಕುಟುಂಬದವರಿಂದ ಹಮ್ಮಿಕೊಂಡಿದ್ದ 14 ಜೋಡಿಗಳ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 14 ನವ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಗುರು ಹಿರಿಯರನ್ನು ಗೌರವಿಸುವುದರ ಮೂಲಕ ಉತ್ತಮ ಸಂಸಾರ ನಡೆಸಬೇಕು.
ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಅಲ್ಲದೆ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ಅಧಿಕಾರಿಗಳಲ್ಲಿ ಸರಿಯಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಸರಕಾರಗಳು 1ರಿಂದ 10ನೇ ತರಗತಿವರೆಗೆ ಕೃಷಿ ಶಾಸ್ತ್ರ ಎಂಬ ವಿಷಯ ಜಾರಿಗೆ ತರಬೇಕು. ಇನ್ನೂ ರೈತ ಖರೀದಿ ಮಾಡುವ ಪ್ರತಿಯೊಂದು ವಸ್ತುಗಳ ಮೇಲೆ ನಿಗ ದಿ ಬೆಲೆ ಇರುತ್ತದೆ. ಸರಕಾರ ರೈತರು ನಿಗದಿಪಡಿಸಿದ ಬೆಲೆಗೆ ಖರೀದಿ ಮಾಡುವ ಪದ್ಧತಿ ಜಾರಿಗೆ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಚಿದಾನಂದ ತಾತನವರು ಮಾತನಾಡಿ, ಉಜ್ಜಯಿನಿ ಪೀಠ ಬಹುದೊಡ್ಡ ಶಕ್ತಿ ಪೀಠವಾಗಿದೆ. ಉಜ್ಜಯಿನಿ ಪೀಠದ ಸದಾ ತಾಯಿ ಮಮತೆ ಪ್ರೀತಿ ಹೊಂದಿರುವ ನಮ್ಮೆಲ್ಲರ ಭಕ್ತಿಯ ಪೀಠವಾಗಿದೆ ಎಂದರು. ತದನಂತರ ನಾಗನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಬಿ.ಮಹಾರುದ್ರಗೌಡ ಮಾತನಾಡಿದರು.
ಉಜ್ಜಯಿನಿ ಶ್ರೀಗಳಿಗೆ ಜಿಪಂ ಸದಸ್ಯೆಯಿಂದ ವಿವಿಧ ಧಾರ್ಮಿಕ ಪೂಜೆಗಳು ಜರುಗಿದವು. ಶಾಸಕ ಎಂ.ಎಸ್.ಸೋಮಲಿಂಗಪ್ಪ, ಆಯೋಜಕರಾದ ಎಸ್.ಎಂ.ಅಡಿವೆಯ್ಯಸ್ವಾಮಿ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ತಾಪಂ ಅಧ್ಯಕ್ಷೆ ದೇವಮ್ಮ ಪಕ್ಕಿರಪ್ಪ, ಗ್ರಾಪಂ ಅಧ್ಯಕ್ಷೆ ನಾಗಮ್ಮ ಕಲ್ಗುಡಿ ಮುದಿಯಪ್ಪ, ಉಪಾಧ್ಯಕ್ಷರಾದ ಲಕ್ಷ್ಮಮ್ಮ ಪೂಜಾರಿ ಕರೆಪ್ಪ, ಎಪಿಎಂಸಿ ಅಧ್ಯಕ್ಷ ಹಾಗಲೂರು ಮಲ್ಲನಗೌಡ, ತಾಪಂ ಸದಸ್ಯ ರೇಣುಕಾ, ಮಣ್ಣೂರು ಕರಿಯಪ್ಪ, ಮುಖಂಡರಾದ ಬಕ್ಕಟೆ ಈರಯ್ಯ, ಎಚ್.ಶಾಂತನಗೌಡ, ಬಳ್ಳಾರಿ ಬಸವರಾಜ, ಬಿ.ಎಂ.ಎರಿಸ್ವಾಮಿ, ಅಹ್ಮದ್ ಸಾಬ್, ಎಸ್. ಮರ್ಷಿದ್ ಅಹ್ಮದ್, ಖಾದರಬಾಷಾ, ನಬಿಸಾಬ್, ಅಂಬರೀಷಗೌಡ, ಆರ್.ನಾಗರಾಜಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.