ಸೂರ್ಯನಾರಾಯಣ ರೆಡ್ಡಿ ಹುಟ್ಟುಹಬ್ಬದಲ್ಲಿ ಶಾಸಕ ಗಣೇಶ್ ಭಾಗಿ: ರೆಡ್ಡಿ ಅಭಿಮಾನಿಗಳಿಂದ ವಿರೋಧ
Team Udayavani, Dec 5, 2022, 4:38 PM IST
ಕುರುಗೋಡು : ಚುನಾವಣೆಗೆ ಇನ್ನೂ 6 ತಿಂಗಳ ಬಾಕಿ ಇರುವ ನಡುವೆಯೇ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಕುರುಗೋಡು ಕ್ಷೇತ್ರದಲ್ಲಿ ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಹುಟ್ಟುಹಬ್ಬವನ್ನು ಸಾವಿರಾರು ಅಭಿಮಾನಿಗಳ ನಡುವೆ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದು, ಕುರುಗೋಡು ರಾಜಕೀಯ ಚುನಾವಣೆ ಕಾವು ಜೋರಾಗಿದೆ ಎಂಬಂತೆ ಕಾಣುತ್ತಿದೆ.
ಸೂರ್ಯನಾರಾಯಣ ರೆಡ್ಡಿ ಆಪ್ತ ಪರಮ ಶಿಷ್ಯನಾದ ಹಾಲಿ ಶಾಸಕ ಗಣೇಶ್ ಹಾಗೂ ರೆಡ್ಡಿ ಇವರ ಇಬ್ಬರ ನಡುವೆ ಕೆಲ ತಿಂಗಳಿಂದ ಅಸಮಾಧಾನ ಶುರುವಾಗಿದ್ದು, 2023 ಚುನಾವಣೆಯಲ್ಲಿ ರೆಡ್ಡಿ ರಾಮಸಾಗರ ಬಿ. ನಾರಾಯಣಪ್ಪ ಅವರಿಗೆ ಟಿಕೇಟ್ ನೀಡಿ ಗೆಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕುರುಗೋಡಲ್ಲಿ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ ಎಂಬ ವಿಷಯ ಹುಟ್ಟು ಹಬ್ಬದ ಸಂಭ್ರಮಕ್ಕೆ ಬಂದ ಜನರಲ್ಲಿ ಕೇಳಿ ಬಂತು.
ಇನ್ನೂ ಸಾವಿರಾರು ಅಭಿಮಾನಿಗಳಿಂದ ಹಾಗೂ ಮುಖಂಡರಿಂದ ಮಾಜಿ ಶಾಸಕರಿಂದ ವೇದಿಕೆ ಮೇಲೆ ಕೇಕ್ ಕತ್ತಿರಿಸಿ ಸೇವಿಸಿಕೊಂಡ ರೆಡ್ಡಿ ಹಾಲಿ ಶಾಸಕ ಗಣೇಶ್ ಅವರ ಕೇಕ್ ಕತ್ತರಿಸದೆ ಅಭಿಮಾನಿಗಳಿಂದ ಕಟ್ ಮಾಡಿಸಿ ಅವರಿಂದ ಶಾಸಕರಿಗೆ ತಿನಿಸಿದ ಸನ್ನಿವೇಶ ಕಂಡು ಬಂತು.
ಶಾಸಕ ಗಣೇಶ್ ರೆಡ್ಡಿಗೆ ಶುಭಾಶಯಗಳು ತಿಳಿಸಲು ವೇದಿಕೆ ಮೇಲೇರುತಿದ್ದಂತೆ ರೆಡ್ಡಿ ಅಭಿಮಾನಿಗಳು ನಾವು ಶಾಸಕರಿಗೆ ಅಹ್ವಾನ ಮಾಡಿಲ್ಲ ಯಾಕೆ ಬಂದಿದ್ದಾರೆ ಈ ಕಾರ್ಯಕ್ರಮಕ್ಕೆ ಅಂತ ವಿರೋಧ ಮಾಡಿದ ಪ್ರಸಂಗವು ನಡೆಯಿತು.
ಅಲ್ಲದೆ ಕಾರ್ಯಕ್ರಮ ಮುಗಿಯುವ ತನಕ ವೇದಿಕೆ ಮೇಲೆ ಅಭಿಮಾನಿಗಳು ಇತರರು ಹಾಜರಿದ್ದರು ಶಾಸಕ ಗಣೇಶ್ 1 ನಿಮಿಷ ಕೂಡ ವೇದಿಕೆ ಮೇಲೆ ಇರದೆ ವಿಶ್ ಮಾಡಿ ಕೆಳಗಡೆ ಇಳಿದು ಹೊರಟರು ನಂತರ ಶಾಸಕ ಗಣೇಶ್ ಅಭಿಮಾನಿಗಳು ಕೇಕೆ ಹಾಕುತ್ತಾ ಹೊರಗಡೆ ಸಾಗಿದರು.
ಕಾರ್ಯಕ್ರಮದಲ್ಲಿ ಸೂರ್ಯನಾರಾಯಣ ರೆಡ್ಡಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಿರುಗುಪ್ಪ ಮಾಜಿ ಶಾಸಕ ಹಾಗೂ ಬೇರೆ ಬೇರೆಯವರ ಹೆಸರು ಹೇಳಿದರು ಶಿಷ್ಯ ಶಾಸಕ ಗಣೇಶ್ ಅವರ ಹೆಸರು ಹೇಳದೆ ಭಾಷಣ ಮಾಡಿದ್ದು ಕಂಡು ಬಂತು.
ಇನ್ನೂ ಮಾದ್ಯಮದವರು ಕೇಳಿದ ಪ್ರೆಶ್ನೆಗೆ ರೆಡ್ಡಿ ಶಾಸಕ ಗಣೇಶ್ ಅವರ ಬಗ್ಗೆ ನೋ ಕಾಮೆಂಟ್ ಎಂದು ಉತ್ತರಿಸಿದರು.
2004 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಯಾವ ರೀತಿ ನನ್ನ ಜೊತೆ ಇದ್ರೋ ಅದೇ ರೀತಿ ಕೂಡ ಈಗಲೂ ನನ್ನ ಮೇಲೆ ಇಟ್ಟ ಪ್ರೀತಿ ವಿಸ್ವಾಸ ನಾನು ಎಂದಿಗೂ ಮರೆಯುವುದಿಲ್ಲ. ಇವತ್ತು ಇಷ್ಟೊಂದು ಜನ ಸಂಖ್ಯೆ ನೋಡಿದ್ರೆ ನಾನು ಶಾಸಕನಾಗಿದ್ದಾಗ ಮತ್ತು ಯಾವ ಮುಖ್ಯ ಮಂತ್ರಿ, ಸಚಿವರು, ಶಾಸಕರ ಕಾರ್ಯಕ್ರಮದಲ್ಲಿ ಕೂಡ ನೋಡಿಲ್ಲ ಅಂತ ಜನ ಸಂಖ್ಯೆಯಲ್ಲಿ ಸೇರಿದ್ದೀರಿ, ಯಾವತ್ತೂ ಅಧಿಕಾರ, ಹಣ ಮುಖ್ಯವಲ್ಲ ಜನರ ಪ್ರೀತಿ ವಿಸ್ವಾಸ, ವಾತ್ಸಲ್ಯ ಮುಖ್ಯ ಆದ್ದರಿಂದ ಸದಾ ಇದೆ ರೀತಿ ನಿಮ್ಮ ಪ್ರೀತಿ ಇರಲಿ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಕುರುಗೋಡು ಜನತೆ ಜೊತೆಗೆ ನಾನು ಯಾವಾಗಲು ಇರುತ್ತೀನಿ ಎಂದು ಭರವಸೆ ನೀಡಿದರು.
ಬೆಳಿಗ್ಗೆಯಿಂದ ಕುರುಗೋಡು ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ಕಾರ್ಯಗಳು ನೆರೆವೇರಿಸಿದರು. ನಂತರ ಶ್ರೀ ಆಂಜನೇಯ ಸ್ವಾಮಿ ಪೂಜೆ, ಸುಂಕ್ಲಮ್ಮ ದೇವಿಗೆ ವಿಶೇಷ ಪೂಜೆ, ಯಲ್ಲಾಪುರ ಕ್ರಾಸ್ ನ ಖಾದರ ಲಿಂಗ ತಾತ ಪೂಜೆ, ಶ್ರೀ ಸಿರಿಡಿ ಸಾಯಿಬಾಬಾ ಗೆ ಪೂಜೆ, ತದ ನಂತರ ಬಾದನಹಟ್ಟಿ ಗ್ರಾಮದ ಉಡುಸಲಮ್ಮ ದೇವಿಗೆ ಪೂಜೆ ಸಲ್ಲಿಸಿದರು. ತದನಂತರ ಕುರುಗೋಡು ಸುತ್ತಮುತ್ತ ಎಲ್ಲ ಸಮುದಾಯದ ದೇವಸ್ಥಾನಗಳಿಗೆ ಭೇಟಿ ನೀಡಿ ವೆಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಪಟ್ಟಣದ ಇಂದಿರಾ ನಗರದಿಂದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಬಂದು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಕುರುಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು, ಶಾಲೆಯ ಮಕ್ಕಳು ರೆಡ್ಡಿಗೆ ಸನ್ಮಾನಿಸಿ ಗೌರವಿಸಿ ಕೇಕ್ ಕತ್ತರಿಸಿದರು.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ನೀಡಬೇಕು: ಚೇತನ್ ಹೇಳಿಕೆಗೆ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.