ನೀರಿನ ಘಟಕ ನನೆಗುದಿಗೆ-ಪರದಾಟ
ಕುಡುತಿನಿಯಲ್ಲಿ ಬೇಸಿಗೆ ಮುನ್ನವೇ ನೀರಿಗೆ ಬರ
Team Udayavani, Apr 24, 2020, 12:20 PM IST
ಕುರಗೋಡು: ಕುಡುತಿನಿಯ 6 ಮತ್ತು 19ನೇ ವಾರ್ಡಿನಲ್ಲಿ ನೀರು ಇಲ್ಲದ ಕಾರಣ ಅಲ್ಲಿನ ಜನರು ಬೇರೆ ವಾರ್ಡಿನ ಘಟಕಕ್ಕೆ ಮುಗಿಬಿದ್ದಿರುವುದು
ಕುರುಗೋಡು: ಕುಡುತಿನಿಯ 6 ಮತ್ತು 19ನೇ ವಾರ್ಡಿನಲ್ಲಿ ಸಮರ್ಪಕವಾಗಿ ನೀರು ದೊರಕದೆ ಅಲ್ಲಿನ ಜನರು ಹೈರಾಣಾಗಿದ್ದಾರೆ. ನಿತ್ಯ ಬೇರೆ ಬೇರೆ ವಾರ್ಡಿಗೆ ಅಥವಾ ಖಾಸಗಿ ಶುದ್ಧ ನೀರಿನ ಘಟಕಗಳಿಗೆ ತೆರಳಿ ಹಣ ಕೊಟ್ಟು ನೀರು ಖರೀದಿ ಮಾಡಬೇಕಾದ ಪರಿಸ್ಥಿತಿ ಇದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ವಿಧಿಸಲಾಗಿದ್ದು 6 ಮತ್ತು 19ನೇ ವಾರ್ಡಿನ ಜನರಿಗೆ ನೀರು ತರುವುದೇ ಕಷ್ಟಕರವಾಗುತ್ತಿದೆ. 3 ವರ್ಷಗಳ ಹಿಂದೆ ಎನ್ ಎಂಡಿಸಿ ಮತ್ತು ಪಪಂ ವತಿಯಿಂದ 6 ಮತ್ತು 19ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು. 6ನೇ ವಾರ್ಡಿನಲ್ಲಿರುವ ಘಟಕ ಕೆಲ ದಿನ ಕಾರ್ಯನಿರ್ವಹಿಸಿ ನಂತರ ನನೆಗುದಿಗೆ ಬಿದ್ದಿದೆ. 19ನೇ ವಾರ್ಡಿನ ಘಟಕ ನಿರುಪಯುಕ್ತಗೊಂಡಿದೆ. ಈ ಎರಡು ವಾರ್ಡ್‌ಗಳಿಗೆ ಸದ್ಯ ನೀರು ಸಿಗದಿದ್ದರಿಂದ ಜನರು ನಿತ್ಯ ಪರದಾಡುತ್ತಿದ್ದಾರೆ.
6 ಮತ್ತು 19ನೇ ವಾರ್ಡಿನಲ್ಲಿ ಸಮರ್ಪಕವಾಗಿ ನೀರು ಇಲ್ಲದೆ ಜನ ನಿತ್ಯ ಪರದಾಡುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಒದಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ.
ಟಿ.ಕೆ. ಕಾಮೇಶ, ಮುಖಂಡ
ಮೋಟಾರ್ ಸಮಸ್ಯೆಯಿಂದ 6ನೇ ವಾರ್ಡಿನ ನೀರಿನ ಘಟಕವನ್ನು ಎರಡು ದಿನದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. 19ನೇ ವಾರ್ಡಿನ ಘಟಕ ಲ್ಯಾಂಡ್ ಆರ್ಮಿಗೆ ಸಂಬಂಧಿಸಿದ್ದು ಅವರಿಗೆ ನೋಟಿಸ್ ನೀಡಿ ವ್ಯವಸ್ಥೆ ಮಾಡಿಕೊಡಲು ತಿಳಿಸಲಾಗಿದೆ. 19ನೇ ವಾರ್ಡಿನ ಘಟಕ ಪಪಂ ವ್ಯಾಪ್ತಿಗೆ ಒಳಪಟ್ಟಿಲ್ಲ. ನಮ್ಮ ವ್ಯಾಪ್ತಿಗೆ ಒಳಪಡಿಸಿದ ದಿನವೇ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
ಹಿಮಾಮ್ ಸಾಹೇಬ್,
ಕುಡುತಿನಿ ಪಪಂ ಮುಖ್ಯಾಧಿಕಾರಿ
ಸುಧಾಕರ್ ಮಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.